Tuesday, May 19, 2026
Google search engine

Homeಕ್ರೀಡೆಇಂಡಿಯನ್ ವುಮೆನ್ಸ್ ಹಾಕಿ ತಂಡದ ಆಸ್ಟ್ರೇಲಿಯಾ ಪ್ರವಾಸ : ಸಲಿಮಾ ಟೆಟೆಗೆ ತಂಡದ ನಾಯಕತ್ವ

ಇಂಡಿಯನ್ ವುಮೆನ್ಸ್ ಹಾಕಿ ತಂಡದ ಆಸ್ಟ್ರೇಲಿಯಾ ಪ್ರವಾಸ : ಸಲಿಮಾ ಟೆಟೆಗೆ ತಂಡದ ನಾಯಕತ್ವ

ನವದೆಹಲಿ : ಆಗಾಮಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಹಾಕಿ ಇಂಡಿಯಾ ಭಾರತೀಯ ಮಹಿಳಾ ಹಾಕಿ ತಂಡವನ್ನು ಪ್ರಕಟಿಸಿದೆ. ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಸರಣಿಯನ್ನು ಆಡಲಿದ್ದು, ಇದು ಮೇ 26 ರಿಂದ ಆರಂಭವಾಗಲಿದೆ. ಸರಣಿಯ ಎಲ್ಲಾ ನಾಲ್ಕೂ ಪಂದ್ಯಗಳು ಪರ್ತ್ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಪಂದ್ಯ ಮೇ 26, ಎರಡನೇ ಪಂದ್ಯ ಮೇ 27, ಮೂರನೇ ಪಂದ್ಯ ಮೇ 29 ಮತ್ತು ಅಂತಿಮ ಪಂದ್ಯ ಮೇ 30 ರಂದು ನಡೆಯಲಿದೆ. ಜೂನ್ 15 ರಿಂದ 21 ರವರೆಗೆ ಆಕ್ಲೆಂಡ್‌ನಲ್ಲಿ ನಡೆಯಲಿರುವ ‘ಎಫ್‌ ಐಎಚ್ ಹಾಕಿ ವುಮೆನ್ಸ್ ನೇಷನ್ಸ್ ಕಪ್ 2025-26’ ರ ದೃಷ್ಟಿಯಿಂದ ಈ ಪ್ರವಾಸವನ್ನು ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಅರ್ಜೆಂಟೀನಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಭಾರತ ತಂಡವು ಈ ಪ್ರವಾಸ ಕೈಗೊಳ್ಳುತ್ತಿದೆ. ಅಲ್ಲಿ ಅವರು ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ಗೆಲುವುಗಳನ್ನು ಸಾಧಿಸಲು ಕಠಿಣ ಸವಾಲನ್ನು ಎದುರಿಸಿದ್ದರು. ಅಂದಿನಿಂದ ಭಾರತೀಯ ತಂಡವು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದ ನ್ಯಾಷನಲ್ ಕ್ಯಾಂಪ್‌ ನಲ್ಲಿ ಕಠಿಣ ತರಬೇತಿ ಪಡೆಯುತ್ತಿದೆ ಮತ್ತು ಮುಂಬರುವ ಬ್ಯುಸಿ ಇಂಟರ್ನ್ಯಾಷನಲ್ ಸೀಸನ್‌ಗಾಗಿ ತನ್ನ ಆಟದ ಪ್ರಮುಖ ಅಂಶಗಳನ್ನು ಸುಧಾರಿಸುತ್ತಿದೆ.

2022 ರ ಕಾಮನ್‌ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ ನ ಕಂಚಿನ ಪದಕ ವಿಜೇತೆ ಸಲಿಮಾ ಟೆಟೆ ಮುಂಬರುವ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರೊಂದಿಗೆ ಸವಿತಾ, ಸುಶೀಲಾ ಚಾನು ಪುಖ್ರಂಬಮ್, ಲಾಲ್ರೆಮ್ಸಿಯಾಮಿ ಮತ್ತು ನವನೀತ್ ಕೌರ್ ಅವರಂತಹ ಅನುಭವಿ ಆಟಗಾರ್ತಿಯರ ಜೊತೆಗೆ ಸೋನಮ್, ಹಿನಾ ಬಾನೊ ಮತ್ತು ಲಾಲ್ತಂತ್ಲುವಾಂಗಿ ಅವರಂತಹ ರೋಮಾಂಚಕ ಯುವ ಪ್ರತಿಭೆಗಳೂ ತಂಡದಲ್ಲಿದ್ದಾರೆ.

ಗೋಲ್‌ ಕೀಪಿಂಗ್ ವಿಭಾಗದಲ್ಲಿ ಸವಿತಾ ಮತ್ತು ಬಿಚು ದೇವಿ ಖಾರಿಬಾಮ್ ನಂಬಿಕಸ್ಥ ಆಯ್ಕೆಯಾಗಿದ್ದಾರೆ. ಡಿಫೆನ್ಸ್‌ನಲ್ಲಿ, ನಿಕ್ಕಿ ಪ್ರಧಾನ್, ಇಶಿಕಾ ಚೌಧರಿ, ಸುಶೀಲಾ ಚಾನು ಪುಖ್ರಂಬಮ್, ಲಾಲ್ತಂತ್ಲುವಾಂಗಿ ಮತ್ತು ಜ್ಯೋತಿ ಅವರು ಶಿಲ್ಪಿ ದಬಾಸ್ ಅವರೊಂದಿಗೆ ಆಡಲಿದ್ದಾರೆ. ಶಿಲ್ಪಿ ದಬಾಸ್ ಮತ್ತು ಲಾಲ್ತಂತ್ಲುವಾಂಗಿ ಅವರಿಗೆ ಮೊದಲ ಬಾರಿಗೆ ಸೀನಿಯರ್ ತಂಡದಲ್ಲಿ ಅವಕಾಶ ಸಿಕ್ಕಿದೆ.

ಸಲಿಮಾ ಟೆಟೆ ಅವರು ನೇಹಾ ಮತ್ತು ಲಾಲ್ರೆಮ್ಸಿಯಾಮಿ ಅವರಂತಹ ಅನುಭವಿ ಆಟಗಾರ್ತಿಯರೊಂದಿಗೆ ಮಿಡ್‌ಫೀಲ್ಡ್ ವಿಭಾಗವನ್ನು ಮುನ್ನಡೆಸಲಿದ್ದಾರೆ, ಆದರೆ ಸಾಕ್ಷಿ ರಾಣಾ ಮತ್ತು ಸುನಿತಾ ಟೊಪ್ಪೊ ತಮ್ಮ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ. ದೀಪಿಕಾ ಸೊರೆಂಗ್ ಮತ್ತು ಸೋನಮ್ ಅವರನ್ನು ಸಹ ಮಿಡ್‌ಫೀಲ್ಡ್ ಯುನಿಟ್‌ಗೆ ಸೇರಿಸಿಕೊಳ್ಳಲಾಗಿದೆ, ಇವರು ಇನ್ನೂ ಸೀನಿಯರ್ ಇಂಟರ್ನ್ಯಾಷನಲ್ ಡೆಬ್ಯೂ (ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ) ಮಾಡಿಲ್ಲ.

ಫಾರ್ವರ್ಡ್ ಲೈನ್ ಅನ್ನು ಮುನ್ನಡೆಸಲಿರುವ ನವನೀತ್ ಕೌರ್, ಈ ಪ್ರವಾಸದಲ್ಲೂ ತಮ್ಮ ಅತ್ಯುತ್ತಮ ಗೋಲು ಗಳಿಸುವ ಫಾರ್ಮ್ ಅನ್ನು ಮುಂದುವರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಫಾರ್ವರ್ಡ್ ಲೈನ್ನಲ್ಲಿ ಬಲ್ಜೀತ್ ಕೌರ್, ದೀಪಿಕಾ, ಅನ್ನು, ಇಶಿಕಾ, ಇನ್ನು ಸೀನಿಯರ್ ಇಂಟರ್ನ್ಯಾಷನಲ್ ಡೆಬ್ಯೂ ಮಾಡದ ಹಿನಾ ಬಾನೊ ಮತ್ತು ರುತುಜಾ ದಾದಾಸೊ ಪಿಸಾಲ್ ಇದ್ದಾರೆ.

ತಂಡದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಮುಖ್ಯ ಕೋಚ್ ಶೋರ್ಡ್ ಮರೀನ್, “ನಾವು ಅನುಭವಿ ಮತ್ತು ಯುವ ಆಟಗಾರ್ತಿಯರನ್ನೊಳಗೊಂಡ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ, ಇವರಲ್ಲಿ ಕೆಲವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಅವಕಾಶ ಸಿಗಲಿದೆ. ಆಟಗಾರ್ತಿಯರು ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಿರುವುದು ಮುಖ್ಯವಾಗಿದೆ ಮತ್ತು ಅದಕ್ಕೆ ಅತ್ಯುತ್ತಮ ಮಾರ್ಗವೆಂದರೆ ಅಂತರರಾಷ್ಟ್ರೀಯ ಪಂದ್ಯಗಳ ಒತ್ತಡದ ಪರಿಸ್ಥಿತಿಯಲ್ಲಿ ಆಡುವುದು. ಈ ಆಟಗಾರ್ತಿಯರಿಗೆ ಈಗ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಅವಕಾಶವಿದೆ ಮತ್ತು ಅವರ ಪ್ರದರ್ಶನವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ 2026 ರ ಪ್ರವಾಸಕ್ಕಾಗಿ ಭಾರತ ತಂಡದ 22 ಆಟಗಾರ್ತಿಯರ ಸ್ಕ್ವಾಡ್ ಹೀಗಿದೆ


ಗೋಲ್‌ಕೀಪರ್ಸ್: ಸವಿತಾ, ಬಿಚು ದೇವಿ ಖಾರಿಬಾಮ್
ಡಿಫೆಂಡರ್ಸ್: ನಿಕ್ಕಿ ಪ್ರಧಾನ್, ಇಶಿಕಾ ಚೌಧರಿ, ಸುಶೀಲಾ ಚಾನು ಪುಖ್ರಂಬಮ್, ಲಾಲ್ತಂತ್ಲುವಾಂಗಿ, ಜ್ಯೋತಿ, ಶಿಲ್ಪಿ ದಬಾಸ್
ಮಿಡ್‌ಫೀಲ್ಡರ್ಸ್: ಸಲಿಮಾ ಟೆಟೆ, ಲಾಲ್ರೆಮ್ಸಿಯಾಮಿ, ನೇಹಾ, ಸಾಕ್ಷಿ ರಾಣಾ, ಸುನಿತಾ ಟೊಪ್ಪೊ, ದೀಪಿಕಾ ಸೊರೆಂಗ್, ಸೋನಮ್
ಫಾರ್ವರ್ಡ್ಸ್: ನವನೀತ್ ಕೌರ್, ಬಲ್ಜೀತ್ ಕೌರ್, ದೀಪಿಕಾ, ಅನ್ನು, ಇಶಿಕಾ, ಹಿನಾ ಬಾನೊ, ರುತುಜಾ ದಾದಾಸೊ ಪಿಸಾಲ್

RELATED ARTICLES
- Advertisment -
Google search engine

Most Popular