ಮೈಸೂರು: ನಗರದ ಕುವೆಂಪುನಗರದಲ್ಲಿ ನಡೆದ ಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹರೀಶ್ ಹಾಗೂ ಇಬ್ಬರು ಕೂಲಿ ಕಾರ್ಮಿಕರು ಸೇರಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರಿದಿದೆ.
ಪತ್ನಿ ಸುಶೀಲಾ ತನ್ನ ಪತಿ ನಿತ್ಯಾನಂದರನ್ನು ಹತ್ಯೆಗೈದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಳು. ಆದರೆ ತನಿಖೆಯಲ್ಲಿ ಸಂಸಾರದ ಕಲಹವೇ ಕೊಲೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಸುಶೀಲಾಳ ಪರಿಚಯದ ಹರೀಶ್ ಹಾಗೂ ಇತರರ ಸಹಾಯದಿಂದ ಒಟ್ಟು ಐವರು ಸೇರಿ ನಿತ್ಯಾನಂದ ಅವರ ಕುತ್ತಿಗೆ ಹಿಸುಕಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



