Monday, July 6, 2026
Google search engine

Homeರಾಜ್ಯಎಸ್‌ ಐ ಆರ್‌ ನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘನೆ : ಎಂಎಲ್‌ಸಿ ಎಸ್‌ಎಲ್ ಭೋಜೇಗೌಡ...

ಎಸ್‌ ಐ ಆರ್‌ ನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘನೆ : ಎಂಎಲ್‌ಸಿ ಎಸ್‌ಎಲ್ ಭೋಜೇಗೌಡ ಆರೋಪ

ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಜೆಡಿ(ಎಸ್) ಮತ್ತು ಬಿಜೆಪಿ ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಭೇಡಿ ನೀಡಿದ್ದರು.

ಆರೋಪವೇನು?

ಬಿಎಲ್‌ಒಗಳು (Booth Level Officers) ನಿಯಮದಂತೆ ಪ್ರತಿ ಮನೆ ಬಾಗಿಲಿಗೆ ಹೋಗಿ ಪರಿಶೀಲನೆ ನಡೆಸುವ ಬದಲು, ಸಮುದಾಯ ಭವನಗಳಲ್ಲಿ ಜನರನ್ನು ಗುಂಪುಗೂಡಿಸಿ ಎನ್ಯುಮರೇಷನ್ (Enumeration) ಮಾಡುತ್ತಿದ್ದಾರೆ ಎಂದು ಜೆಡಿ(ಎಸ್) ಎಂಎಲ್‌ಸಿ ಎಸ್‌ಎಲ್ ಭೋಜೇಗೌಡ ಆರೋಪಿಸಿದ್ದಾರೆ.

ರಾಮನಗರದ ಟಿಪ್ಪು ನಗರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯ ವಿಡಿಯೋಗಳನ್ನು ಜೆಡಿ(ಎಸ್) ನಾಯಕ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಇದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಭೋಜೇಗೌಡ ಹೇಳಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular