Wednesday, July 8, 2026
Google search engine

Homeರಾಜ್ಯಡಿಸಿಇಟಿ-2026 ದಾಖಲೆ ಪರಿಶೀಲನೆ ಜು.15ರಿಂದ 17ರವರೆಗೆ

ಡಿಸಿಇಟಿ-2026 ದಾಖಲೆ ಪರಿಶೀಲನೆ ಜು.15ರಿಂದ 17ರವರೆಗೆ

ಬೆಂಗಳೂರು: ಡಿಸಿಇಟಿ-2026ಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಜು.15ರಿಂದ 17ರವರೆಗೆ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಚೇರಿಯಲ್ಲಿ ನಡೆಯಲಿದೆ.

‘ಬಿ’ರಿಂದ ‘ಒ’ವರೆಗಿನ ಕಂಡಿಕೆಗಳಡಿ ಕ್ಲೇಮ್ ಮಾಡಿರುವವರು, ಅರ್ಹತಾ ಕಂಡಿಕೆ ‘ಎ’ಯಡಿ ಹೊರರಾಜ್ಯ ಡಿಪ್ಲೊಮಾ ಬೋರ್ಡ್‌ಗಳಲ್ಲಿ ತೇರ್ಗಡೆಯಾದವರು ಹಾಗೂ ನಿಗದಿತ ಬೋರ್ಡ್‌ಗಳ ಹೊರತಾಗಿ ಇತರ ಸಂಸ್ಥೆಗಳಿಂದ ಡಿಪ್ಲೊಮಾ ಪಡೆದ ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಬೇಕು.

ಅಭ್ಯರ್ಥಿಗಳು ಮೂರು ದಿನಗಳಲ್ಲಿ ಯಾವುದೇ ಒಂದು ದಿನ ಸ್ಲಾಟ್ ಬುಕ್ ಮಾಡಿಕೊಂಡು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರೊಳಗೆ ಕಡ್ಡಾಯವಾಗಿ ಸ್ವತಃ ಹಾಜರಾಗಬೇಕು. ಎಲ್ಲ ಮೂಲ ದಾಖಲೆಗಳು ಹಾಗೂ ದೃಢೀಕೃತ ನಕಲು ಪ್ರತಿಗಳನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸದ ಅಭ್ಯರ್ಥಿಗಳ ನೋಂದಣಿ ತಡೆಹಿಡಿಯಲಾಗುತ್ತಿದ್ದು, ಆಪ್ಷನ್ ಎಂಟ್ರಿಗೆ ಅವಕಾಶ ಇರುವುದಿಲ್ಲ ಎಂದು ಕೆಇಎ ತಿಳಿಸಿದೆ.

RELATED ARTICLES
- Advertisment -
Google search engine

Most Popular