Saturday, April 19, 2025
Google search engine

Homeಆರೋಗ್ಯಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ NHM ಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟ ಮುಷ್ಕರಕ್ಕೆ ಕರೆ

ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ NHM ಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟ ಮುಷ್ಕರಕ್ಕೆ ಕರೆ

ಚಾಮರಾಜನಗರ: ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಳಗುತ್ತಿಗೆ ಆಧಾರದ ಮೇಲೆ ಗ್ರಾಮೀಣ ಭಾಗದಲ್ಲಿ ಇರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದಲ್ಲಿ ಕಳೆದ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಇಲಾಖೆಯ ಸಂಬಂಧಪಟ್ಟ ಕಾರ್ಯಕ್ರಮದ ಅಧಿಕಾರಿಗಳು ಹಾಗೂ ಮಾನ್ಯ ರಾಷ್ಟೀಯಾ ಆರೋಗ್ಯ ಅಭಿಯಾನ ನಿರ್ದೇಶಕರವರಿಗೆ ಮತ್ತು ಮಾನ್ಯ ಆರೋಗ್ಯ ಸಚಿವರಿಗೆ ಹಲವು ಬಾರಿ ನಮ್ಮ ನೌಕರರ ಬೇಡಿಕೆಗಳು ಮತ್ತು ಕುಂದು ಕೊರತೆಗಳ ಬಗ್ಗೆ ಮನವಿ ಪತ್ರದ ಮೂಲಕ ಮನವರಿಕೆ ಮಾಡಿರುತ್ತೇವೆ.

ಆದರೆ ಇಲ್ಲಿವರೆಗೂ ಯಾವುದೇ ರೀತಿಯಾ ಪರಿಹಾರ ದೊರಕಿರುವುದಿಲ್ಲ. ಹಾಗಾಗಿ 11 ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ದಿನಾಂಕ 15-02-2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಅನಿರ್ದಿಷ್ಟ ಮುಷ್ಕರದಲ್ಲಿ 6192 ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಮುಷ್ಕರದ ಒತ್ತಾಯಗಳು:-
• CPHC-UHC ಮಾರ್ಗಸೂಚಿಗಳ ಅನ್ವಯ 6 ವರ್ಷಸೇವೆ ಪೂರೈಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಸೇವೆಯನ್ನು ಖಾಯಂಗೊಳಿಸಬೇಕು.
• ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ನೀಡಿದ 15% ವೇತನ ಹೆಚ್ಚಳವನ್ನು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡ ಅನ್ವಯಿಸಬೇಕು.
• ತಡೆಹಿಡಿದಿರುವ 5 % ವಾರ್ಷಿಕ ವೇತನ ಮತ್ತು 10% loyality Bonus ಕೂಡಲೆ ಬಿಡುಗಡೆ ಮಾಡಬೇಕು.
• ವಿನಾಕಾರಣ ವಜಾಗೊಳಿಸಿದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಕೂಡಲೇ ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕು.
• CPHC-UHC ಮಾರ್ಗ ಸೂಚಿಗಳ ಅನ್ವಯ ಮಾಸಿಕ ಪ್ರೋತ್ಸಾಹಧನ 15000/- ಗಳನ್ನು ಪಾವತಿಸಬೇಕು.
• ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ PF ಒದಗಿಸಬೇಕು.
• ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಷರತ್ತು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ (Clinical Function, Public Function, Managerial Function,) ಕಾರ್ಯನಿರ್ವಹಣೆ ಹಾಗೂ HWC ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬೇಕು.
• ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಬೇಕು.
• ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ,ಸ್ವಚ್ಛತಾ ಸೇವೆ ಇತರೆ ಉಪಕರಣಗಳು ಹಾಗೂ ಔಷದವನ್ನು ಕಡ್ಡಾಯವಾಗಿ ಒದಗಿಸಬೇಕು.
• 18-11-2022 ರಂದು ನಾವು ನಡೆಸಿದ ಕಾನೂನಾತ್ಮಕ ಮುಷ್ಕರದ ಒಂದು ದಿನದ ವೇತನವನ್ನು ಪಾವತಿಸಬೇಕು.
• 15th FC ಅಡಿಯಲ್ಲಿ ಬರುವ 13 ಜಿಲ್ಲೆಯಾ ಸಮುದಾಯ ಆರೋಗ್ಯ ಅಧಿಕಾರಿಗಳ ಮೂರು ತಿಂಗಳ ವೇತನ ಪಾವತಿ ಆಗಿರುವುದಿಲ್ಲ ಕೂಡಲೇ ಪಾವತಿಸಬೇಕು ಎಂದು ರಾಜ್ಯದ ಎಲ್ಲಾ CHO ಗಳು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular