Friday, May 8, 2026
Google search engine

Homeರಾಜ್ಯಬಸವಣ್ಣನ ವಚನಗಳು ಮಾನವ ಕಲ್ಯಾಣದ ಮಹಾ ಸಂದೇಶಗಳು : ಬಿ.ಕೆ.ರವಿಕುಮಾರ್

ಬಸವಣ್ಣನ ವಚನಗಳು ಮಾನವ ಕಲ್ಯಾಣದ ಮಹಾ ಸಂದೇಶಗಳು : ಬಿ.ಕೆ.ರವಿಕುಮಾರ್

ಚಾಮರಾಜನಗರ : ಬಸವಣ್ಣನ ವಚನಗಳು ಮಾನವನ ಕಲ್ಯಾಣಕ್ಕಾಗಿ ರಚಿತವಾದ ಮಹಾ ವಾಕ್ಯಗಳು. ವಚನಗಳ ಅಧ್ಯಯನವನ್ನು ನಿರಂತರವಾಗಿ ಮಾಡಿದಾಗ ಮಾನವ ಸಹಜವಾಗಿ ಬದುಕಲು ಹಾಗೂ ಸರ್ವರನ್ನು ಪ್ರೀತಿಸಲು ಅರ್ಹನಾಗುತ್ತಾನೆ. ತನ್ನ ಕೆಟ್ಟ ಮಾರ್ಗವನ್ನು ಬದಲಾಯಿಸಿಕೊಳ್ಳಲು ಶಕ್ತಿವಂತನಾಗುತ್ತಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿ.ಕೆ.ರವಿಕುಮಾರ್ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ವಚನ ಸಾಹಿತ್ಯ, ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಸವೇಶ್ವರರು 12ನೇ ಶತಮಾನದಲ್ಲಿ ಹೊಸ ಯುಗವನ್ನು ಆರಂಭಿಸಿ, ಸಮಾಜದಲ್ಲಿದ್ದ ಎಲ್ಲ ಲೋಪ ದೋಷಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದರು.

ಮನುಷ್ಯ ಸಹಜ, ಸರಳ, ಬದುಕನ್ನು ನಡೆಸಲು ಸ್ಫೂರ್ತಿಯನ್ನು ತುಂಬಿದವರು. ಅಲ್ಲದೆ ಕಾಯಕವೇ ಕೈಲಾಸ ವೆಂದು ತಿಳಿಸಿ ಪ್ರತಿಯೊಬ್ಬ ಮನುಷ್ಯನು ನಮ್ಮ ಜೀವನವನ್ನು ನಡೆಸುವ ಜೊತೆಗೆ ಸಮಾಜದಲ್ಲಿ ಉತ್ತಮವಾಗಿ ಬದುಕುವ ಗುಣಲಕ್ಷಣಗಳನ್ನು ತಿಳಿಸಿದ ಮಹಾನ್ ವ್ಯಕ್ತಿ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಪಾರ ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡ ಸಾಹಿತ್ಯದ ಚಿಂತನೆಗೆ ಅವಕಾಶ ಮಾಡಿರುವುದು ಬಹಳ ಸಂತೋಷವಾಗಿದೆ ಎಂದರು.

ಇದೇ ವೇಳೆ ಮೈಸೂರಿನ ಸುಧೀಂದ್ರ ಹಾಗೂ ಚಾಮರಾಜನಗರದ ವೀರ ಶೆಟ್ಟಿ ರವರು ಬಸವಣ್ಣನ ವಚನಗಳನ್ನು ಹಾಡಿ ಗಮನ ಸೆಳೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಪದ್ಮಾ ಪುರುಷೋತ್ತಮ್ ರವರು ಬಸವಣ್ಣನ ಜೀವನ ಚರಿತ್ರೆಯನ್ನು ವಿವರಿಸಿದರು.

ಬಳಿಕ ಕಾರ್ಯಕ್ರಮದ್ ಅಧ್ಯಕ್ಷತೆ‌ ವಹಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್.ಎನ್.ಋಗ್ವೇದಿ ಮಾತನಾಡುತ್ತ ಬಸವಣ್ಣನವರು ಕರ್ನಾಟಕದ ಹೆಮ್ಮೆ. ವಿಶ್ವಕ್ಕೆ ಅಗತ್ಯವಾದ ವಚನಗಳನ್ನು ನೀಡಿ ಮಾನವನಿಗೆ ಅಂತರಂಗ ಮತ್ತು ಬಜರಂಗವಾದ ಸುದ್ದಿಯನ್ನು ಮಾಡಿಕೊಳ್ಳಲು ಚಿಂತನೆಯನ್ನು ವಚನಗಳ ಮೂಲಕ ನೀಡಿದವರು.

ಇಂದು ಇಡೀ ಜಗತ್ತು ಬಸವಣ್ಣನವರ ವಚನಗಳ ಅಧ್ಯಯನ ಮತ್ತು ಪ್ರಚಾರಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯವು ಅಪೂರ್ವವಾದ ಮೌಲ್ಯವನ್ನು ಹೆಚ್ಚಿಸಿದೆ. ಬಸವಣ್ಣನ ವಚನಗಳು ಮಾನವನಿಗೆ ಅನಿವಾರ್ಯ. ವಚನಗಳ ತಿಳುವಳಿಕೆಯಿಂದ ಮಾನವ ಪರಿಶುದ್ಧನಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿ.ಕೆ.ಆರಾಧ್ಯ, ರವಿಚಂದ್ರಪ್ರಸಾದ್, ಶ್ರೀನಿವಾಸ ಗೌಡ, ಸರಸ್ವತಿ, ರಾಜಗೋಪಾಲ್, ಲಕ್ಷ್ಮೀ ನರಸಿಂಹ, ಜಗದೀಶ್ ಸುಬ್ಬಪ್ಪ ಇದ್ದರು.

RELATED ARTICLES
- Advertisment -
Google search engine

Most Popular