Friday, May 8, 2026
Google search engine

Homeರಾಜ್ಯಉಬಾರ್ ಸ್ಪೋರ್ಟಿಂಗ್ ಕ್ಲಬ್ ನಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ & ಮಾಹಿತಿ ಶಿಬಿರ

ಉಬಾರ್ ಸ್ಪೋರ್ಟಿಂಗ್ ಕ್ಲಬ್ ನಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ & ಮಾಹಿತಿ ಶಿಬಿರ

ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿ ಇದರ ವತಿಯಿಂದ ಎಸೆಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬ ಕಾರ್ಯಕ್ರಮ ಮತ್ತು ಉಪ್ಪಿನಂಗಡಿ ಪರಿಸರದ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಸಭಾಂಗಣದಲ್ಲಿ ಮೇ 7ರ ಗುರುವಾರದಂದು ಉಪ್ಪಿನಂಗಡಿ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷ ಶಬೀರ್ ಕೆಂಪಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಇಂಡಿಯನ್ ಸ್ಕೂಲ್ ಇದರ ಅಧ್ಯಕ್ಷ ಎಚ್.ಯೂಸುಫ್ ಹಾಜಿಯವರು ಸಮಾಜದ ಶೈಕ್ಷಣಿಕ ಪ್ರಗತಿಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸ್ಕೂಲ್ ಇದರ ಕಾರ್ಯದರ್ಶಿಗಳಾದ ಹಾಜಿ ಶುಕೂರ್ ಶುಕ್ರಿಯಾ, ಇಂಡಿಯನ್ ಸ್ಕೂಲ್ ಪ್ರಾಂಶುಪಾಲರಾದ ಶಂಶಾದ್ ಬಾನು, ಉಬಾರ್ ಸ್ಪೋರ್ಟಿಂಗ್ ಕ್ಲಬ್ (ರಿ) ಉಪ್ಪಿನಂಗಡಿ ಇದರ ಗೌರವಾಧ್ಯಕ್ಷರಾದ ರಫೀಕ್ ಮಾಸ್ಟರ್ ಗಾಂಧಿಪಾರ್ಕ್, ಗೌರವ ಸಲಹೆಗಾರರಾದ ಮಹಮ್ಮದ್ ತೌಸೀಫ್ ಯು ಟಿ, ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಇಬ್ರಾಹಿಂ, ಸರಕಾರಿ ಪ್ರೌಢಶಾಲೆ ಸರಳೀಕಟ್ಟೆಯ ಅಧ್ಯಾಪಕರಾದ ಹನೀಫ್, ರಹೀನಾಝ್ ಅಂಡೆತ್ತಡ್ಕ ಸಿ ಎ ಮತ್ತು ರಿಜ್ವಾನ್ ಮಂಗಳೂರು, ಅರಫಾ ವಿದ್ಯಾಕೇಂದ್ರದ ಶಫೀಕ್ ಅರಫಾ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ರವೂಫ್ ಯು ಟಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಯಚೂರು ಯುನಿವರ್ಸಿಟಿಯ ಪ್ರೊಫೆಸರ್ ರಝೀಯಾ ಬಾನುರವರು ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಅವಕಾಶ ಹಾಗೂ ಅದರ ಪ್ರಯೋಜನ ಪಡೆದುಕೊಳ್ಳುವ ಹಲವಾರು ವಿಧಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ಹೇಳಿದರು.
ಮತ್ತೊರ್ವ ಮುಖ್ಯ ಅತಿಥಿ ಶ್ರೀಮತಿ ವತ್ಸಲಾ ನಾಯಕ್ ಪೋಷಕರೊಂದಿಗೆ ಮಕ್ಕಳು ಮತ್ತು ಪೋಷಕರ ಸಂಬಂಧ ಹಾಗೂ ಶಿಕ್ಷಣದ ಆಯ್ಕೆಯಲ್ಲಿ ಪೋಷಕರ ಪಾತ್ರ ಎಂಬ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೃತ್ತಿ ಶಿಕ್ಷಣ ತರಬೇತುದಾರರಾದ ಹನೀಫ್ ಪುತ್ತೂರ್ ರವರು ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಜೀವನದಲ್ಲಿ ಯಾವ ಯಾವ ಕೋರ್ಸುಗಳನ್ನು ಪಡೆದರೆ ಹೇಗೆ ತಮ್ಮ ಗುರಿಗಳನ್ನು ಸಾಧಿಸಬಹುದು ಮತ್ತು ಅದಕ್ಕೆ ಸರ್ಕಾರದ ಮೀಸಲಾತಿ ಮತ್ತು ಸೌಲಭ್ಯಗಳನ್ನು ವಿವರಿಸಿ NEET, JEE, CET ಜೊತೆ ಇಂಟಿಗ್ರೇಟೆಡ್ ಪಿಯುಸಿ ಮಾಡಲು ಸರ್ವಧರ್ಮೀಯ ಪ್ರತಿಭಾನ್ವಿತ 6 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ 3 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಹಿತ ಎರಡು ವರ್ಷದ ಅವಧಿಯ ಪಿಯುಸಿ ಜೊತೆ ನೀಟ್ ಮತ್ತು ಜೆಇಇ ಇಂಟಿಗ್ರೇಟೆಡ್ ನೀಡಲಾಗುತ್ತದೆ. ಇಬ್ಬರು ವಿದ್ಯಾರ್ಥಿಗಳು ಸಿ. ಎ ಕಲಿಯಲು, ಒಬ್ಬರಿಗೆ ಲಾ ಕಲಿಯಲು, ಒಬ್ಬರಿಗೆ ಏರ್ ಫೋರ್ಸ್ ಕಲಿಯಲು ನೆರವು ನೀಡಲಾಗುತ್ತದೆ. ಇಬ್ಬರಿಗೆ ನೀಟ್ ಲಾಂಗ್ ಟರ್ಮ್ ಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ. ಉಳಿದಂತೆ ಪ್ರೊಫೆಸರ್, ಸೈಯನ್ಸ್, ಇಂಜಿನಿಯರಿಂಗ್ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಒಟ್ಟು ಹನ್ನೆರಡುವರೆ ಲಕ್ಷ ರುಪಾಯಿಯ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆಗಮಿಸಿದ PCMB, PCMC ಜೊತೆ PUC ಮಾಡುವ ವಿದ್ಯಾರ್ಥಿಗಳಿಗೆ NEET, CET, JEE ONLINE ನಲ್ಲಿ ಕಲಿಯುವ APP ನೀಡುವುದಾಗಿ ಉಬಾರ್ ಸ್ಪೋರ್ಟಿಂಗ್ (ರಿ) ಕ್ಲಬ್ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಇಂಡಿಯನ್ ಸ್ಕೂಲ್, ಜ್ಞಾನಭಾರತಿ ವಿದ್ಯಾ ಕೇಂದ್ರ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆ ಮತ್ತು ಹೈಸ್ಕೂಲ್ ವಿಭಾಗ, ಅರಫಾ ವಿದ್ಯಾ ಕೇಂದ್ರ, ಆಯೀಷಾ ವಿದ್ಯಾ ಸಂಸ್ಥೆ ಆತೂರು, ಬದ್ರಿಯಾ ವಿದ್ಯಾಸಂಸ್ಥೆ ಆತೂರ್, ಸರ್ಕಾರಿ ಪ್ರೌಢಶಾಲೆ ಸರಳೀಕಟ್ಟೆ, ಅಲ್ ಮುನವ್ವರ ಮೂಡಡ್ಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಝೀರ್ ಹೊಸಮೊಗ್ರು, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ಅಗ್ನಾಡಿ, ಆಚಿ ಕೆಂಪಿ, ಮೋನು ಪಿಲಿಗೂಡು, ಮಹಮ್ಮದ್ ಮುಸ್ತಫಾ, ಇಸ್ಮಾಯಿಲ್ ತಂಙಳ್, ಇಬ್ರಾಹಿಂ ಸಿಟಿ, ಸಿದ್ದೀಕ್ ಹ್ಯಾಪಿ ಟೈಮ್ಸ್, ನವಾಝ್ ಎಲೈಟ್, ಶಿಹಾಬ್ ತಂಗಳ್, ಅನೀಸ್ ಗಾಂಧಿಪಾರ್ಕ್, ರಾಝೀ ಶುಕ್ರಿಯಾ, ಮನ್ಸೂರ್ ಕೂದ್ಲುರ್, ಜಮಾಲ್ ಕೆಂಪಿ, ಖಾದರ್ ನೆಕ್ಕಿಲಾಡಿ, ಇಂತಿಯಾಝ್ ಪುತ್ತೂರು, ಲತೀಫ್ ಕೂದ್ಲುರ್, ಮತ್ತು ಇಮ್ರಾನ್ ಎವೈಎಂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇರ್ಷಾದ್ ಯು ಟಿ ನಿರೂಪಿಸಿ, ವಂದಿಸಿದರು.

ವರದಿ: ಶಂಶೀರ್ ಬುಡೋಳಿ, ಮಂಗಳೂರು

RELATED ARTICLES
- Advertisment -
Google search engine

Most Popular