Sunday, April 20, 2025
Google search engine

Homeಸ್ಥಳೀಯತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ: ಡಾ. ಕಾಂತರಾಜು

ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ: ಡಾ. ಕಾಂತರಾಜು

ರಾಮನಗರ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ನಿಯಮಿತವಾಗಿ ನೀಡಲಾಗುವ ಲಸಿಕೆಗಳಿಂದ ವಂಚಿತರಾದ ಗರ್ಭಿಣಿ ಮಹಿಳೆಯರು, ಮತ್ತು 0-5 ವರ್ಷದ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಂಡು ಲಸಿಕೆ ನೀಡುವುದು ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಎಲ್ಲರೂ ಸಹಕಾರ ನೀಡಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಾಂತರಾಜು ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಎಸ್.ಎಂ.ಒ ಡಾ. ನಾಗರಾಜು ಅವರು ಮಾತನಾಡಿ, ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನದ 5.0 ಅನ್ನು ಭಾರತ ಸರ್ಕಾರದ ಮಾರ್ಗಸೂಚಿಯಂತೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದು. ರಾಮನಗರ ಜಿಲ್ಲೆಯಲ್ಲಿ 3 ಸುತ್ತುಗಳಲ್ಲಿ ನಡೆಯುವ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನದ ಗುರಿ ತಲುಪಬೇಕಾದರೆ ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು 0-5 ವರ್ಷದ ಮಕ್ಕಳನ್ನು ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಪ್ರಾರಂಭವಾಗುವ ಮೊದಲು ಹೆಡ್ ಕೌಡ್ಸ್ ಸಮೀಕ್ಷೆ, ವರದಿ ಮತ್ತು ದಾಖಲಾತಿಗಳ ನಿರ್ವಹಣೆ, ಸೂಕ್ಷ ಕ್ರಿಯಾಯೋಜನೆ ತಯಾರಿಕೆ ಲಸಿಕಾಕರಣ ಮಾಡುವ ವಿಧಾನಗಳ ಕುರಿತು ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು. ಎಲ್ಲರೂ ಬೆಂಬಲ ಹಾಗೂ ಸಹಕಾರ ನೀಡಿದಾಗ ಮಾತ್ರ ಅಭಿಯಾನದ ಯಶಸ್ವಿಗೊಳಿಸಲು ಸಾಧ್ಯವೆಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ರಾಜು ಅವರು ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಕುರಿತು ಮಾತನಾಡಿ, ವಿಶೇಷವಾಗಿ ದಢಾರ-ರುಬೆಲ್ಲಾ ಲಸಿಕಾ ಕರಣ, ಪಿ.ಸಿ.ವಿ ಲಸಿಕಾಕರಣ ಮತ್ತು ಇತ್ತೀಚಿಗೆ 3ನೇ ಡೋಸ್ ಆಗಿ ಸೇರ್ಪಡೆಗೊಳಿಸಿದ ಎಫ್.ಐ.ಪಿ.ವಿ ಲಸಿಕಾಕರಣ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ 2023ರಲ್ಲಿ 1ನೇ ಸುತ್ತು ಆಗಸ್ಟ್ – 7 ರಿಂದ 12, 2ನೇ ಸುತ್ತು ಸೆಪ್ಟೆಂಬರ್-11 ರಿಂದ 16, 3ನೇ ಸುತ್ತು ಅಕ್ಟೋಬರ್-09 ರಿಂದ 14 ರಂತೆ ನಿರ್ಧಿಷ್ಟ 6 ದಿನಗಳಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ದಿನವನ್ನು ಒಳಗೊಂಡAತ್ತೆ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 3 ಸುತ್ತುಗಳಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನವನ್ನು ನಡೆಸಲಾಗುವುದು  ಎಲ್ಲರೂ ಸನ್ನದ್ದರಾಗಬೇಕೆಂದು ತಿಳಿಸಿದರು. 

ಯು.ಎನ್.ಡಿ.ಪಿ ಯೋಜನಾಧಿಕಾರಿ ಅರುಣಾ ಅವರು ಮಾತನಾಡಿ, ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ ಲಸಿಕೆಯಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು 0-5 ವರ್ಷದ ಮಕ್ಕಳನ್ನು ನೊಂದಣಿ ಮಾಡಿದಾಗ ಮಾತ್ರ ಲಸಿಕಾಕರಣ ಗುರಿ ಸಾಧಿಸಲು ಸಾಧ್ಯ ಎಂದು ತಿಳಿಸಿ. U-WIಓ ಫೋರ್ಟಲ್ ಮೂಲಕ ನೊಂದಾಯಿಸಿಕೊAಡು ಲಸಿಕಾಕರಣ ನಡೆಸುವ ವಿಧಾನದ ಕುರಿತು ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು. 

ಕಾರ್ಯಾಗಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಸ್.ಎಂ.ಒ ಡಾ. ನಾಗರಾಜು, ಯು.ಎನ್.ಡಿ.ಪಿ ಯೋಜನಾಧಿಕಾರಿ ಅರುಣಾ, ಜಿಲ್ಲಾ ಶಸ್ತç ಚಿಕಿತ್ಸಕಿ ಡಾ. ಪದ್ಮ,  ಜಿಲ್ಲಾ ಆರ್.ಸಿ.ಹೆಚ್.ಒ ಡಾ. ರಾಜು, ಡಿ.ಎಲ್.ಒ ಡಾ. ಮಂಜುನಾಥ್, ಡಿ.ಎಸ್.ಒ ಡಾ ಕಿರಣ್‌ಶಂಕರ್, ಟಿ.ಡಿ.ಒ ಡಾ ಕುಮಾರ್, ಮಕ್ಕಳ ತಜ್ಞರಾದ ಡಾ. ಶಶಿರೇಖಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಟಿ.ಹೆಚ್.ಒ ಕಛೇರಿಯ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಬಿ.ಪಿ.ಎಂ ಗಳು ಹಾಗೂ ಮೇಲ್ವಿಚಾರಕ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular