Monday, April 21, 2025
Google search engine

Homeರಾಜ್ಯಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವ

ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವ

ಬೆಂಗಳೂರು: ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ನಟ, ನಟಿ ಮತ್ತು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
ಬೆಂಗಳೂರು ನಗರದ ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ಡಾ.ಬಿ.ಆರ್. ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆಯ ಸಾಂಸ್ಕೃತಿಕ ಉತ್ಸವದ ಮುಖ್ಯ ಅತಿಥಿಯಾಗಿ ಸಚಿವರಾದ ನಾಗೇಂದ್ರ, ಯಂಗ್ ರೆಬೆಲ್‌ಸ್ಟಾರ್ ನಟ ಅಭಿಷೇಕ್ ಅಂಬರೀಶ್ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಆಗಮಿಸಲಿದ್ದಾರೆ.
ಇನ್ನು, ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ತಂಡದ ಡಾರ್ಲಿಂಗ್‌ಕೃಷ್ಣ, ಬೃಂದಾ ಆಚಾರ್ಯ ಹಾಗೂ ಚಿತ್ರದ ನಿರ್ದೇಶಕ ಶಶಾಂಕ್ ಸಮಾರಂಭದಲ್ಲಿ ಭಾಗವಹಿಸಲಿದ್ದು, ನಟಿ ಮಿಲನ ನಾಗರಾಜ್ ಮುಖ್ಯ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಐಪಿಎಸ್ ಹಾಗೂ ಪಾಂಚಜನ್ಯ ವಿದ್ಯಾಪೀಠದ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷತೆಯಲ್ಲಿ ಈ ಅದ್ದೂರಿ ಕಾರ್ಯಕ್ರಮ ಜರುಗಲಿದೆ. ಗೌರವಾನ್ವಿತ ಅತಿಥಿಗಳಾಗಿ ಡಾ.ಬಿ.ಎನ್.ಉಮೇಶ್ ಕಾರ್ಯದರ್ಶಿ, ಪಾಂಚಜನ್ಯ ವಿದ್ಯಾ ಪೀಠ ವೆಲ್‌ಫೇರ್ ಟ್ರಸ್ಟ್ (ರಿ.), ಡಾ. ಎಸ್.ಮಹದೇವಾ ಗೌರವಾನ್ವಿತ ಖಜಾಂಜಿ, ಪಾಂಚಜನ್ಯ ವಿದ್ಯಾ ಪೀಠ ವೆಲ್‌ಫೇರ್ ಟ್ರಸ್ಟ್ (ರಿ.), ಶ್ರೀ.ಎಸ್.ಶಿವಮಲ್ಲು ಟ್ರಸ್ಟಿ, ಪಾಂಚಜನ್ಯ ವಿದ್ಯಾ ಪೀಠ ವೆಲ್‌ಫೇರ್ ಟ್ರಸ್ಟ್ (ರಿ.), ಶ್ರೀ.ಎ.ಆರ್. ಕೃಷ್ಣಮೂರ್ತಿ ಟ್ರಸ್ಟಿ, ಪಾಂಚಜನ್ಯ ವಿದ್ಯಾ ಪೀಠ ವೆಲ್‌ಫೇರ್ ಟ್ರಸ್ಟ್ (ರಿ.). ಈ ಕಾರ್ಯಕ್ರಮವನ್ನುಚಿತ್ತಾರ ಇವೆಂಟ್ಸ್. ನಿರ್ವಹಸಲಿದೆ.

RELATED ARTICLES
- Advertisment -
Google search engine

Most Popular