Tuesday, June 24, 2025
Google search engine

Homeರಾಜ್ಯಅರ್ಜುನ ಆನೆ ಸ್ಮಾರಕ ಉದ್ಘಾಟನೆ ವಿಳಂಬ: ಶಾಸಕರ ಅಸಹಕಾರದಿಂದ ಕಾರ್ಯಕ್ರಮ ಮುಂದೂಡಿಕೆ

ಅರ್ಜುನ ಆನೆ ಸ್ಮಾರಕ ಉದ್ಘಾಟನೆ ವಿಳಂಬ: ಶಾಸಕರ ಅಸಹಕಾರದಿಂದ ಕಾರ್ಯಕ್ರಮ ಮುಂದೂಡಿಕೆ

ಮೈಸೂರು: ಇಂದು ನಡೆಯಬೇಕಿದ್ದ ಅರ್ಜುನ ಆನೆ ಸ್ಮಾರಕ ಉದ್ಘಾಟನೆಗೆ ವಿಘ್ನ ಎದುರಾಗಿದ್ದು, ಸ್ಥಳೀಯ ಶಾಸಕರಿಂದ ಅಸಹಕಾರ ಹಿನ್ನೆಲೆಯಲ್ಲಿ ಅರ್ಜುನ ಆನೆ ಸ್ಮಾರಕ ಅನಾವರಣ ಕಾರ್ಯಕ್ರಮವನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ದಿಢೀರ್ ಮುಂದೂಡಿಕೆ ಮಾಡಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆಯಲ್ಲಿ ಅರ್ಜುನ ಸ್ಮಾರಕ ಉದ್ಘಾಟಿಸಬೇಕಿತ್ತು. ಸ್ಮಾರಕ ಉದ್ಘಾಟಿಸಲು ಬರಬೇಕಿದ್ದ ಸಚಿವರಿಗೆ  ಹೆಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಂದ ಅಸಹಕಾರ ವ್ಯಕ್ತವಾಗಿದೆ ಎನ್ನಲಾಗಿದೆ.

ಕಾರ್ಯಕ್ರಮ ಉದ್ಘಾಟನೆ ದಿನದಂದೆ  ಸ್ಥಳೀಯರ ಜೊತೆ ಆನೆ- ಮಾನವ ಸಂಘರ್ಷ ಕುರಿತು ಚರ್ಚೆ, ಸಂವಾದ ನಡೆಸುವಂತೆ ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದ್ದಾರೆ.  ಈ ದಿನ ಚರ್ಚೆ, ಸಂವಾದ ಬೇಡ ಎಂದು  ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದು, ಆದರೆ ಸಂವಾದ‌ ಹಾಗೂ ಉದ್ಘಾಟನೆ ಒಂದೇ ದಿನ ನಡೆಸುವಂತೆ ಶಾಸಕ ಅನಿಲ್ ಚಿಕ್ಕಮಾದು ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದ  ಸಚಿವ ಈಶ್ವರ್ ಖಂಡ್ರೆ  ಬೆಂಗಳೂರಿಗೆ ವಾಪಸ್ ತೆರಳಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣವರೆಗೆ ಬಂದಿದ್ದ ಸಚಿವ ಈಶ್ವರ್ ಖಂಡ್ರೆ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular