Monday, February 2, 2026
Google search engine

HomeUncategorizedರಾಷ್ಟ್ರೀಯಸರ್ಕಾರದ ತೆರಿಗೆ ಹೊಡೆತ: ಸಿಗರೇಟ್ ದರ ಭಾರೀ ಏರಿಕೆ

ಸರ್ಕಾರದ ತೆರಿಗೆ ಹೊಡೆತ: ಸಿಗರೇಟ್ ದರ ಭಾರೀ ಏರಿಕೆ

ನವದೆಹಲಿ : ಹೆಚ್ಚವರಿ ಅಬಕಾರಿ ಸುಂಕ ಜಾರಿಗೆ ತಂದ ಬೆನ್ನಲ್ಲೇ ಸಿಗರೇಟ್ ಬೆಲೆ ಪ್ಯಾಕ್​ಗೆ 22 ರೂನಿಂದ 55 ರೂವರೆಗೂ ಏರಿಕೆ ಆಗಿದೆ. ಸರ್ಕಾರ ಸುಂಕ ಹೇರಿಕೆ ಹಾಕಿದ ಬೆನ್ನಲ್ಲೇ ವಿತರಕರು ತಮ್ಮಲ್ಲಿರುವ ಹಳೆಯ ಸಿಗರೇಟು ಪ್ಯಾಕ್​ಗಳಿಗೆ ನಿನ್ನೆ ಭಾನುವಾರದಿಂದಲೇ ಹೊಸ ದರ ಇಟ್ಟು ರೀಟೇಲ್ ಮಾರಾಟಗಾರರಿಗೆ ಮಾರತೊಡಗಿದ್ದಾರೆ. ಸಿಗರೇಟು ತಯಾರಕರು ಇಂದಿನಿಂದ ಹೊಸ ಎಂಆರ್​ಪಿ ದರದ ಸಿಗರೇಟು ಪ್ಯಾಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

84 ಎಂಎಂ ಉದ್ದದ ಐಟಿಸಿ ಕಿಂಗ್, ಗೋಲ್ಡ್ ಫ್ಲೇಕ್ ಲೈಟ್ಸ್, ವಿಲ್ಸ್ ಕ್ಲಾಸಿಕ್, ಮೈಲ್ಡ್ಸ್ ಇತ್ಯಾದಿ ಸಿಗರೇಟ್​ಗಳ ಪ್ಯಾಕ್ ಬೆಲೆ 170 ರೂನಿಂದ 220-225 ರೂಗೆ ಏರುವ ನಿರೀಕ್ಷೆ ಇದೆ. 97 ಮಿಲಿಮೀಟರ್ ಉದ್ದದ ಕ್ಲಾಸಿಕ್ ಕನೆಕ್ಟ್​ನಂತಹ ಸ್ಲಿಮ್ ಸ್ಇಗರೇಟ್​ಗಳ ಬೆಲೆ 300 ರೂನಿಂದ 350 ರೂಗೆ ಏರುವ ನಿರೀಕ್ಷೆ ಇದೆ. 76ಎಂಎಂ ಉದ್ದದ ವಿಲ್ಸ್ ನೇವಿ ಕಟ್​ನ ಬೆಲೆ ಒಂದು ಪ್ಯಾಕ್​ಗೆ 95 ರೂನಿಂದ 120 ರೂಗೆ ಏರುವ ನಿರೀಕ್ಷೆ ಇದೆ.

ಭಾರತದಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳಿಗೆ ಸುಮಾರು 8,000-9,000 ಸ್ಟಾಕಿಸ್ಟ್ಸ್ ಇದ್ದಾರೆ. 4.5 ಲಕ್ಷ ವಿತರಕರು, 1.3 ಕೋಟಿ ರೀಟೇಲ್ ಮಾರಾಟಗಾರರಿದ್ದಾರೆ. ಹೆಚ್ಚಿನ ಸಣ್ಣ ಅಂಗಡಿಗಳಿಗೆ ಸಿಗರೇಟ್ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಸರ್ಕಾರವು ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದರೆ ನಕಲಿ ಮಾಲುಗಳು ಅಥವಾ ಕಳ್ಳ ಮಾಲುಗಳು ಮಾರುಕಟ್ಟೆ ಪ್ರವೇಶಿಸುವ ಅಪಾಯ ಇರುತ್ತದೆ. ಇದರಿಂದ ರೀಟೇಲ್ ವ್ಯಾಪಾರಿಗಳ ಬದುಕಿಗೆ ತೊಂದರೆ ಆಗಬಹುದು ಎಂದು ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟವಾದ ಎಐಸಿಪಿಡಿಎಫ್ ಆತಂಕ ವ್ಯಕ್ತಪಡಿಸಿದೆ.

ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳನ್ನು ಸಿನ್ ಗೂಡ್ಸ್ ಅಥವಾ ಪಾಪದ ಸರಕುಗಳೆಂದು ಪರಿಗಣಿಸಲಾಗುತ್ತದೆ. ಹಳೆಯ ಜಿಎಸ್​ಟಿ ವ್ಯವಸ್ಥೆಯಲ್ಲಿ ಪಾಪದ ಸರಕುಗಳಿಗೆ ಶೇ. 28 ಜಿಎಸ್​ಟಿ ಹಾಗೂ ಹೆಚ್ಚುವರಿ ಸೆಸ್, ಅಬಕಾರಿ ಸುಂಕಗಳನ್ನು ವಿಧಿಸಲಾಗುತ್ತಿತ್ತು. ಹೊಸ ಜಿಎಸ್​ಟಿ ಸಿಸ್ಟಂನಲ್ಲಿ ತಂಬಾಕು ಉತ್ಪನ್ನಗಳಿಗೆ ಶೇ. 40ರಷ್ಟು ಜಿಎಸ್​ಟಿ ಹಾಗೂ ಹೆಚ್ಚುವರಿ ಅಬಕಾರಿ ಸುಂಕ ಹಾಕಾಗುತ್ತದೆ.

ಫಿಲ್ಟರ್​ಲೆಸ್ ಸಿಗರೇಟುಗಳಿಗೆ ಒಂದು ಸಿಗರೇಟ್​ಗೆ 2.05ರಷ್ಟು ಹೆಚ್ಚುವರಿ ಸುಂಕ ಇರುತ್ತದೆ. ಚಿಕ್ಕ ಫಿಲ್ಟರ್ ಸಿಗರೇಟ್​ಗೆ ಒಂದಕ್ಕೆ 2.10 ರೂ ಅಬಕಾರಿ ಸುಂಕ ಹಾಕಲಾಗುತ್ತಿದೆ. ಇನ್ನೂ ದೊಡ್ಡ ಸಿಗರೇಟುಗಳಿಗೆ 3.6 ರೂನಿಂದ 8.50 ರೂವರೆಗೆ ಅಬಕಾರಿ ಸುಂಕ ಇರುತ್ತದೆ. ಇದು ಶೇ 40 ಜಿಎಸ್​ಟಿಗೆ ಹೆಚ್ಚುವರಿಯಾಗಿ ವಿಧಿಸುವ ಸುಂಕ.

RELATED ARTICLES
- Advertisment -
Google search engine

Most Popular