Wednesday, February 4, 2026
Google search engine

Homeರಾಜ್ಯಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ‘ಟಿವಿ–ಮೊಬೈಲ್ ಸ್ವಿಚ್ ಆಫ್’ ಅಭಿಯಾನ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ‘ಟಿವಿ–ಮೊಬೈಲ್ ಸ್ವಿಚ್ ಆಫ್’ ಅಭಿಯಾನ

ಬೆಂಗಳೂರು:  ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯೆಂದರೆ ವಿದ್ಯಾರ್ಥಿಗಳ ಜೀವನದ ಮೊದಲ ಮಹತ್ವದ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್ ವ್ಯಸನ ಮತ್ತು ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ವಿದ್ಯಾರ್ಥಿಗಳು ಓದಿನಿಂದ ದೂರ ಸರಿಯುತ್ತಿದ್ದಾರೆ. ಇದನ್ನು ತಡೆಯಲು ಕರ್ನಾಟಕ ಶಿಕ್ಷಣ ಇಲಾಖೆಯು ಈಗ ಡಂಗುರ ಬಾರಿಸುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಎಚ್ಚರಿಸುವ ವಿನೂತನ ಅಭಿಯಾನಕ್ಕೆ ಮುಂದಾಗಿದೆ.

ಈ ಬಾರಿ ಎಸ್​​ ಎಸ್ ​​ಎಲ್ ​ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯು  ‘ಟಿವಿ, ಮೊಬೈಲ್ ಸ್ವಿಚ್ ಆಫ್’ ಟಾಸ್ಕ್ ರೂಪಿಸಿದೆ.  ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ಪ್ರತಿ ದಿನ ಸಂಜೆ 7 ಗಂಟೆಯಿಂದ 9ರವರೆಗೆ ಎರಡು ಗಂಟೆ ಮೊಬೈಲ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿಸುವಂತೆ ಸೂಚಿಸಿದೆ.

ಮೊಬೈಲ್ ಗೀಳಿನಿಂದದಾಗಿ ವಿದ್ಯಾರ್ಥಿಗಳು ಓದಿನಿಂದ ದೂರವಿರುತ್ತಾರೆ. ಹೀಗಾಗಿ ಓದಿನ ಕಡೆ ಗಮನ ಹರಿಸಲು ಟಿವಿ, ಮೊಬೈಲ್ ಸ್ವಿಚ್ ಆಫ್ ಟಾಸ್ಕ್ ನಡೆಸುವಂತೆ ಸೂಚಿಸಿದೆ.

ಪಿಡಿಓಗಳ ಹಂತದಲ್ಲಿಯೂ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಮುಖ್ಯಶಿಕ್ಷಕರೂ ಪೋಷಕರಿಗೆ ತಿಳಿಸಬೇಕು.  ಡಂಗೂರು ಬಾರಿಸಿ ಪೋಷಕರಿಗೆ ಜಾಗೃತಿ ಮಾಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular