ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ : ಹೊಸಕೋಟೆ ಗ್ರಾಮದ ಕೆರೆ ಅಭಿವೃದ್ಧಿಗಾಗಿ 30 ಲಕ್ಷ ರೂ ಗಳ ವೆಚ್ಚದ ಹೂಳೆತ್ತುವ ಕಾಮಗಾರಿ ಮತ್ತು ಕೆರೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 2.96ಕೊಟ್ಟಿರೂ ಗಳ ಕಾಮಗಾರಿಯ ಗುದ್ದಲಿಪೂಜೆ ಮತ್ತು ಜನ ಸಂಪರ್ಕ ಸಭೆ ನೆರವೇರಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿಗಳನ್ನು ನೀಡಿ ಸುಮ್ಮನಾಗದೆ ಅಭಿವೃದ್ಧಿ ಕಾಮಗಾರಿಗಳಿಗೂ ನೂರಾರು ಕೋಟಿರೋಗಳನ್ನು ವಿನಿಯೋಗಿಸುತ್ತಿದ್ದು ಅದರ ಭಾಗವಾಗಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ಈ ಅಭಿವೃದ್ಧಿ ಕಾರ್ಯಕ್ರಮಗಳೇ ಸಾಕ್ಷಿ ಎಂದರು.

ಕಳೆದ 15 ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ನಿಜಗನಹಳ್ಳಿ ಗ್ರಾಮದಲ್ಲಿ ರಸ್ತೆ, ದೇವಾಲಯ, ಗ್ರಾಮಕ್ಕೆ ಸಂಪರ್ಕಿಸುವ ವಿವಿಧ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಹಣ ಬಿಡುಗಡೆಯಾಗಿದ್ದು ಹಲವು ಕಾಮಗಾರಿಗಳು ಜರುಗುತ್ತಿವೆ ಸಾರ್ವಜನಿಕರಿಂದ ಗಡಿಭಾಗದ ಗ್ರಾಮಗಳ ಸಾರಿಗೆ ವ್ಯವಸ್ಥೆ ಕುರಿತು ದೂರುಗಳು ಬರುತ್ತಿದ್ದು ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು ವಿದ್ಯುತ್ ಇಲಾಖೆಯ ಕುರಿತು ಮಾತನಾಡಿದ ಅವರು ರೈತರಿಗೆ ವಿದ್ಯುತ್ ಸರಬರಾಜು ಮಾಡುವ ಹಾಗೂ ನೂತನ ಕಂಬಗಳ ಅಳವಡಿಕೆ ವಿಚಾರವಾಗಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ತಾಲೂಕಿನ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಬಂದು ಸಾರ್ವಜನಿಕರಿಂದ ಸಮಸ್ಯೆ ಬಗೆಹರಿಸುವಲ್ಲಿ ಕಾಳಜಿ ವಹಿಸಬೇಕು ಎಂದು ತಾಕೀತು ಮಾಡಿದರು.
ಗ್ರಾಪಂ ವ್ಯಾಪ್ತಿಯ ನಿಜಗನಹಳ್ಳಿ ಹೊಸಕೋಟೆ ಕೋಗಿಲೂರು ಚಿಬಕಹಳ್ಳಿ ಸೋಮನಹಳ್ಳಿ ಬೆಣಗನಹಳ್ಳಿ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಹಾಡ್ಯ ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷ ಚಿಬುಕಹಳ್ಳಿ ಬಸವರಾಜ್, ಜಗದೀಶ್, ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್, ತಾಪಂ ಮಾಜಿ ಸದಸ್ಯ ಚಿಕ್ಕೇಗೌಡ, ತಹಶೀಲ್ದಾರ್ ರುಕಿಯ ಬೇಗo, ಇ ಓ ರವಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್ ಲೋಕೋಪಯೋಗಿ ಇಲಾಖೆಯ ಎ ಇಇ ಸುಮಿತಾ, ಪಂಚಾಯತ್ ರಾಜ್ ಇಲಾಖೆಯ ವಿನುತ್, ಮೀನುಗಾರಿಕೆ ಇಲಾಖೆಯ ಶಿವರಂಜನ್, ಪಶು ಇಲಾಖೆಯ ಎಡಿ ಡಾ ಕೆಸಿ ರಾಮು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.



