Saturday, February 7, 2026
Google search engine

HomeUncategorizedಅಪ್ರಾಪ್ತೆಗೆ ವಾಹನ ಕೊಟ್ಟು ಕೆಟ್ಟ ಲಿಂಗದಳ್ಳಿ ರಂಗಪ್ಪನಿಗೆ ಶಿಕ್ಷೆ.

ಅಪ್ರಾಪ್ತೆಗೆ ವಾಹನ ಕೊಟ್ಟು ಕೆಟ್ಟ ಲಿಂಗದಳ್ಳಿ ರಂಗಪ್ಪನಿಗೆ ಶಿಕ್ಷೆ.

ವರದಿ :ಸ್ಟೀಫನ್ ಜೇಮ್ಸ್.

ಅಪ್ರಾಪ್ತೆಗೆ ವಾಹನ ಕೊಟ್ಟು ಕೆಟ್ಟ ಲಿಂಗದಳ್ಳಿ ರಂಗಪ್ಪನಿಗೆ ಶಿಕ್ಷೆ.ಬೈಲಹೊಂಗಲಅಪ್ರಾಪ್ತ ಬಾಲಕಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿ ನ್ಯಾಯಾಲಯ ಕಠಿಣ ತೀರ್ಪು ನೀಡಿದೆ.ದೊಡವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ಶುಕ್ರವಾರ ನಡೆಯಿತು. ಈ ಪ್ರಕರಣದಲ್ಲಿ ತಾಲೂಕಿನ ಲಿಂಗದಳ್ಳಿ ಗ್ರಾಮದ ರಂಗಪ್ಪ ಬಾಳಪ್ಪ ಸತ್ತಿಗೇರಿ (78) ಅಪ್ರಾಪ್ತ ಬಾಲಕಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಆರೋಪ ಎದುರಿಸುತ್ತಿದ್ದರು.1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ನ್ಯಾಯಾಧೀಶರಾದ ಬಸವರಾಜ ನಾಯಕ್ ಅವರು ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿದರು.ತೀರ್ಪಿನಂತೆ ಆರೋಪಿಗೆ ಬೆಳಿಗ್ಗೆ 11:30ರಿಂದ ಸಂಜೆ 6:00ರವರೆಗೆ ನ್ಯಾಯಾಂಗ ಬಂಧನ ಹಾಗೂರೂ. 25,000 ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ನೀಡಿದೆ.

RELATED ARTICLES
- Advertisment -
Google search engine

Most Popular