ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ 6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ವಾಜಪೇಯಿ ನಗರದಲ್ಲಿ ನಡೆದಿದೆ.
ನಾದಿನಿಯರ ಫೋಟೋ ಕ್ಲಿಕ್ಕಿಸಿದ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಕೋಪದ ಬರದಲ್ಲಿ ಪತಿ ಸ್ಥಳದಲ್ಲಿದ್ದ ಎಲ್ಲರ ಮೇಲೆ ಎಸಿಡ್ ಎರಚಿದ್ದಾನೆ. ಘಟನೆಯಲ್ಲಿ 6 ತಿಂಗಳ ಮಗು, ಪತ್ನಿ, ನಾದಿನಿಯರು ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುರೇಶ್ ಬೈಲ್ ಪತ್ತಾರ (33)ಎಂಬಾತ ಆಸಿಡ್ ಎರಚಿರುವ ಆರೋಪಿ. ರಾಜೇಶ್ವರಿ (24) ಅವರ ಸ್ಥಿತಿ ತೀವ್ರ ಗಂಭೀರವಾಗಿದೆ. 6 ತಿಂಗಳ ಮಗುವಿನ ಮುಖ, ಬಾಯಿಗೂ ಆಸಿಡ್ ತಗುಲಿ ಗಾಯಗಳಾಗಿವೆ. ಶೃತಿ ಹಾಗೂ ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಸಿಡ್ ಎರಚುವಾಗ ಸುರೇಶ್ ಗೂ ಆಸಿಡ್ ತಗುಲಿ ಗಾಯಗಳಾಗಿವೆ.
ನಾದಿನಿಯರ ಫೋಟೋ ವಿಚಾರವಾಗಿ ಸುರೇಶ್ ಹಾಗೂ ಪತ್ನು ರಾಜೇಶ್ವರಿ ನಡುವೆ ಜಗಳವಾಗಿತ್ತು. ರಾಜೇಶ್ವರಿ ಪತಿಗೆ ನಾದಿನಿಯರ ಫೋಟೋ ತೆಗೆಯದಮ್ತೆ ತಾಕೀತು ಮಾಡಿದ್ದಳು. ಆದರೂ ಕೇಳದ ಪತಿ ಸುರೇಶ್ ನಾದಿನಿಯರ ಫೋಟೋ ಕ್ಲಿಕ್ಕಿಸಿ ಕಿರಿಕ್ ಮಾಡಿದ್ದ. ಇದೇ ವಿಚಾರವಾಗಿ ಪತಿ-ಪತ್ನಿ ಜಗಳ ವಿಕೋಪಕ್ಕೆ ತಿರುಗಿದೆ.



