ಮದ್ದೂರು : ಶ್ರೀ ಮದ್ದೂರಮ್ಮ ಹಾಗೂ ಶ್ರೀ ಉಗ್ರನರಸಿಂಹಸ್ವಾಮಿಯ ರಥೋತ್ಸವದ ಅಂಗವಾಗಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ “ಮದ್ದೂರು ಉತ್ಸವ-2026” ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಶಾಸಕ ಕೆ.ಎಂ.ಉದಯ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ಅಧಿಕಾರಿಗಳೊಟ್ಟಿಗೆ ಪರಿಶೀಲನೆ ನಡೆಸಿದರು.
ಮೇ. 6ರ ಬುಧವಾರ ಸಂಜೆ 6 ಗಂಟೆಗೆ ಸರಕಾರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮದ್ದೂರು ಉತ್ಸವ ಹಾಗೂ ರಸಸಂಜೆ ಸಂಗೀತ ಕಾರ್ಯಕ್ರಮದ ವೇದಿಕೆ ಹಾಗೂ ಇನ್ನಿತರ ಪೂರ್ವ ಸಿದ್ಧತೆಗಳ ಕುರಿತಾಗಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಿಸಿದವರಿಂದ ಅಗತ್ಯ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಶಾಸಕ ಕೆ.ಎಂ.ಉದಯ ಮದ್ದೂರು ಉತ್ಸವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸರೇಶ್ ಸೇರಿದಂತೆ ಜಿಲ್ಲೆಯ ಶಾಸಕರುಗಳು ಭಾಗವಹಿಸಲಿದ್ದು ಜತೆಗೆ ಹಾಸ್ಯನಟ ಕಲಾವಿದರು, ನಿರ್ದೇಶಕರು, ಚಿತ್ರನಟರು ಭಾಗವಹಿಸಲಿದ್ದಾರೆ.
ನಿರ್ಮಾಪಕ, ನಟ ವಿ.ರವಿಚಂದ್ರನ್, ಸಾಧುಕೋಕಿಲಾ, ಧ್ರುವಸರ್ಜಾ, ನವೀನ್‌ಸಂಜು, ಚಂದನ್‌ಶೆಟ್ಟಿ, ಪ್ರೇಮ್‌ರಕ್ಷಿತ್, ಚಿಕ್ಕಣ್ಣ ಸೇರಿದಂತೆ ಖ್ಯಾತ ನಿರೂಪಕಿ ಅನುಶ್ರೀ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸುಮಾರು 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಮದ್ದೂರು ಉತ್ಸವದಲ್ಲಿ ಪಾಲ್ಗೊಂಡು ರಸ ಸಂಜೆ ಸಂಗೀತ ಕಾರ್ಯಕ್ರಮದಲ್ಲಿ ಮಿಂದೇಳಲಿದ್ದಾರೆಂದರು.
ಮದ್ದೂರು ಉತ್ಸವದ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ, ವಾಲಿಬಾಲ್ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಜತೆಗೆ ಮುಸ್ಲೀಂ ಮಹಿಳೆಯರಿಗೆ ಆಯೋಜಿಸಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸುವುದಾಗಿ ತಿಳಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವದ ಅಂಗವಾಗಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಜತೆಗೆ ಉತ್ತಮ ರಾಸುಗಳಿಗೆ ಚಾಂಪಿಯನ್ ಮತ್ತು 2 ಲಕ್ಷ ನಗದು, ಉತ್ತಮ ಟಗರುಗಳಿಗೂ ಬಹುಮಾನ ವಿತರಿಸಿ ಹಲವಾರು ಸೇವಾ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಜನರ ಋಣ ತೀರಿಸುತ್ತಿರುವುದಾಗಿ ಹೇಳಿದರು.
ಅತ್ತುö್ಯನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಲು ಸಹ ಕ್ರಮ ವಹಿಸಿದ್ದು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೋಲೀಸ್ ಇಲಾಖೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ವಿವರಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ಮಾತನಾಡಿ ಮದ್ದೂರು ಉತ್ಸವವನ್ನು ಶಾಂತಿಯುತವಾಗಿ ನಡೆಸಬೇಕೆಂಬ ಉದ್ದೇಶದಿಂದ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ(2) ಡಿ.ವೈ.ಎಸ್.ಪಿ(3), ಇನ್ಸ್ಪೆಕ್ಟರ್(30), ಪಿ.ಎಸ್.ಐ(12), 200 ಮಂದಿ ಸಿಬ್ಬಂಧಿಗಳನ್ನು ನಿಯೋಜಿಸುವ ಜತೆಗೆ ಎರಡು ಡಿ.ಆರ್.ಪಿ ತುಕಡಿಯನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಯಾವುದೇ ತೊಡಕುಂಟಾಗದಂತೆ ಸೂಕ್ತ ವ್ಯವಸ್ಥೆಯನ್ನು ಕೈಗೊಂಡಿದ್ದು ಈಗಾಗಲೇ ವಾಹನ ನಿಲುಗಡೆಗೆ ಮಹಿಳಾ ಸರಕಾರಿ ಕಾಲೇಜು, ಪೋಲೀಸರ ವಸತಿಗೃಹ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪಾರ್ಕಿಂಗ್‌ಗೆ ಕ್ರಮ ವಹಿಸಿರುವುದಾಗಿ ವಿವರಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಚಲುವರಾಜು, ಪಿ.ರಾಜೀವ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಎಂ.ಕೆ.ಹರೀಶ್‌ಬಾಬು, ನಗರಸಭೆ ಮಾಜಿ ಸದಸ್ಯ ಎಂ.ಬಿ.ಸಚಿನ್, ಸ್ಥಳೀಯ ಮುಖಂಡರಾದ ರವೀಶ್, ಶರತ್, ಜಯಪ್ರಕಾಶ್, ಎಂ.ಎಸ್.ಸAತೋಷ್‌ಗೌಡ, ವೃತ್ತ ನಿರೀಕ್ಷಕರಾದ ನಾರಾಯಣಿ, ನವೀನ್, ಅನಿಲ್‌ಕುಮಾರ್, ಆರ್.ಸಿ.ಮಹೇಶ್, ಶಿವು, ತೈಲೂರು ರಘು ಇತರರಿದ್ದರು.



