ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ 500 ಎಕರೆ ನೀಡಲೂ ಸಿದ್ಧ : ಸಚಿವ ಎಂ.ಬಿ.ಪಾಟೀಲ್

ಮಂಡ್ಯ : ಆಟೋಮೇಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರ ಸ್ಥಾಪನೆಗೆ ನಮ್ಮ ಸರ್ಕಾರ 500 ಎಕರೆ ಭೂಮಿ ನೀಡಲೂ ಸಿದ್ಧವಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದರು.ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಕೇವಲ ಸ್ಟಿಂಗ್ ಆಪರೇಷನ್ ಗಳ ರಾಜಕಾರಣಕ್ಕೆ ಸೀಮಿತವಾಗದೆ, ತಮ್ಮ ಕೇಂದ್ರ ಸಚಿವ ಸ್ಥಾನದ ಪ್ರಭಾವ ಬಳಸಿ ಕರ್ನಾಟಕಕ್ಕೆ 10–20 ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಅವರ ಕೊಡುಗೆ ನೀಡಲಿ ಎಂದರು.ಹೋಂಡಾ ಕಂಪನಿ ರಾಜ್ಯ ತೊರೆಯಲಿದೆ ಎಂಬುದು ಸತ್ಯಕ್ಕೆ ದೂರವಾದ ಹೇಳಿಕೆ!ಹೋಂಡಾ ಕಂಪನಿಯವರು ಕರ್ನಾಟಕವನ್ನು ತೊರೆಯಲಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಕಂಪನಿಯ ಪ್ರತಿನಿಧಿಗಳು ಅವರನ್ನು ಭೇಟಿಯೇ ಮಾಡಿಲ್ಲದಿರುವಾಗ, ಕಂಪನಿಯ ನಿರ್ಧಾರದ ಬಗ್ಗೆ ಅವರಿಗೆ ಮಾಹಿತಿ ದೊರೆತದ್ದಾದರೂ ಹೇಗೆ? ಕನಸಿನಲ್ಲಿ ಬಂದು ಹೇಳಿದರೇ?! ವಾಸ್ತವವಾಗಿ, ನಮ್ಮ ಸರ್ಕಾರ ಒದಗಿಸಿರುವ ಭೂಮಿ, ಮೂಲಸೌಕರ್ಯ ಮತ್ತು ಅಗತ್ಯ ಸೌಲಭ್ಯಗಳ ಬಗ್ಗೆ ಹೋಂಡಾ ಕಂಪನಿಯ ಪ್ರತಿನಿಧಿಗಳೇ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಂಬಂಧಿತ ಸುದ್ದಿಗಳು

ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಕೊಡಲಿ : ಜಿಟಿಡಿ ಹೇಳಿಕೆ
ಹಾಸನ: ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು ಕೊಡಲಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇ…
◷ 09/11/2026
ಸಿಸಿಬಿ ಪೊಲೀಸ್ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಬೆಂಗಳೂರು : ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಕೃಪಾ ಆಳ್ವಾ ಹಾಜರಾದರು. ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರು…
◷ 09/11/2026
ಭಾರತ-ಮ್ಯಾನ್ಮಾರ್ ಮೊದಲ ತ್ರಿ-ಸೇವಾ ವಿಪತ್ತು ತುರ್ತು ಪರಿಹಾರ ಅಭ್ಯಾಸ ‘ರಾಹತ್ ಮಿತ್ರ’ ಚೆನ್ನೈನಲ್ಲಿ ಯಶಸ್ವಿ ಸಮಾಪ್ತಿ
ಚೆನ್ನೈ : ಭಾರತ ಮತ್ತು ಮ್ಯಾನ್ಮಾರ್ ರಕ್ಷಣಾ ಪಡೆಗಳ ನಡುವೆ ಆಯೋಜಿಸಲಾದ ಮೊದಲ ದ್ವಿಪಕ್ಷೀಯ ತ್ರಿ-ಸೇವಾ ಮಾನವೀಯ ನೆರವು ಮತ್ತು ವಿಪತ್…
◷ 09/11/2026
ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಯದುವೀರ್
ಮೈಸೂರು : ಮೈಸೂರು–ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆ ಸಮೀಪದ ಕೆಂಪೇಗೌಡ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣ …
◷ 09/11/2026
