ಹಾಸನ:  ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು  ಕೊಡಲಿ ಎಂದು ಜೆಡಿಎಸ್‌   ಶಾಸಕ ಜಿ.ಟಿ ದೇವೇಗೌಡ   ಹೇಳಿದ್ದಾರೆ.ಹಾಸನಾಂಬೆ ದರ್ಶನದ ಬಳಿಕ ಅವರು ಮಾಧ್ಯಮವೊಂದರ ಜೊತೆ  ಮಾತನಾಡಿದರು. ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು. ಅಂತಹ ಸದ್ಬುದ್ಧಿಯನ್ನು ಆ ತಾಯಿ ಎಲ್ಲಾ ರಾಜಕಾರಣಿಗಳಿಗೂ ಕೊಡಲಿ ಎಂದಿದ್ದಾರೆ. ನನಗೆ ಹಿಂದೆ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಫರ್ ಇತ್ತು. ಕಾಂಗ್ರೆಸ್‌ನಿಂದ ಮಂತ್ರಿ ಸ್ಥಾನದ ಅವಕಾಶವಿತ್ತು. ಆದರೂ ಪಕ್ಷ ಬಿಟ್ಟು ಮಧ್ಯಂತರದಲ್ಲಿ ಹೋಗಲಿಲ್ಲ. ಈಗ ನಾನು ಜೆಡಿಎಸ್‌ನಿಂದ ಗೆದ್ದಿದ್ದೇನೆ, ಜೆಡಿಎಸ್‌ನಲ್ಲಿ ಇದ್ದೇನೆ. ಆದರೆ ಜೆಡಿಎಸ್ ಪಕ್ಷದಿಂದ ಆಹ್ವಾನ, ಕರೆಗಳು ಮಾತುಕತೆ ಇಲ್ಲದೇ ಇರುವುದರಿಂದ ನಾನು ಪೂರ್ತಿ ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಗುರಿ ಆ ಕ್ಷೇತ್ರದ ಅಭಿವೃದ್ಧಿ. ಯಾರೇ ಮುಖ್ಯಮಂತ್ರಿ ಇರಲಿ ಅವರ ಬಳಿ ಕ್ಷೇತ್ರದ ಗಮನ ಸೆಳೆದು ಅಭಿವೃದ್ಧಿ ಮಾಡುತ್ತೇನೆ ಎಂದರು.