ಮೇಕೆದಾಟು ವಿಚಾರ : ಸಿಎಂ ಹೇಳಿಕೆಗೆ ಪಿಎಂಕೆ ಖಂಡನೆ

ಚೆನ್ನೈ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಹಕ್ಕು ಕರ್ನಾಟಕಕ್ಕಿದೆ ಹಾಗೂ ಇದಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಅನುಮತಿ ನೀಡಿದೆ. ಹೀಗಾಗಿ ತಮಿಳುನಾಡು ಅಥವಾ ಇತರ ಯಾವುದೇ ಪಾಲುದಾರರ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದಿದ್ದರು. ಅವರ ಹೇಳಿಕೆಯನ್ನು ತಮಿಳುನಾಡಿನ ಪಿಎಂಕೆ ಅಧ್ಯಕ್ಷ ಅಂಬುಮಣಿ ರಾಮದಾಸ್ ಹಾಗೂ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಸೋಮವಾರ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅಂಬುಮಣಿ ರಾಮದಾಸ್, ಸುಪ್ರೀಂ ಕೋರ್ಟ್ ನೀಡದ ಆದೇಶವನ್ನು ತಿರುಚಿ ಹೇಳುವ ಮೂಲಕ ಕರ್ನಾಟಕ ಅನಗತ್ಯ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೆಳಹರಿವಿನ ರಾಜ್ಯಗಳ ಒಪ್ಪಿಗೆ ಇಲ್ಲದೆ ಹೊಸ ಅಣೆಕಟ್ಟು ನಿರ್ಮಿಸಬಾರದು ಎಂಬ ಸ್ಪಷ್ಟ ನ್ಯಾಯಾಂಗ ನಿರ್ದೇಶನಗಳಿದ್ದರೂ ಇಂತಹ ಹೇಳಿಕೆ ನೀಡುತ್ತಿರುವುದು ಒಪ್ಪುವಂತಹುದ್ದಲ್ಲ ಎಂದು ಹೇಳಿದ್ದಾರೆ.ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸಂಪೂರ್ಣ ಸುಳ್ಳು. ಮೂಲ ಸಮಸ್ಯೆಯಿಂದ ಜನರ ಗಮನ ಬೇರೆಡೆ ಸೆಳೆಯಲು ಹಾಗೂ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಿಸುವ ಯಾವುದೇ ಸ್ವಾಭಾವಿಕ ಹಕ್ಕು ಕರ್ನಾಟಕಕ್ಕೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಇನ್ನು 15 ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ 11 ಜಿಲ್ಲೆಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅಂಬುಮಣಿ ಆರೋಪಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಕೊಡಲಿ : ಜಿಟಿಡಿ ಹೇಳಿಕೆ
ಹಾಸನ: ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು ಕೊಡಲಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇ…
◷ 09/11/2026
ಸಿಸಿಬಿ ಪೊಲೀಸ್ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಬೆಂಗಳೂರು : ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಕೃಪಾ ಆಳ್ವಾ ಹಾಜರಾದರು. ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರು…
◷ 09/11/2026
ಭಾರತ-ಮ್ಯಾನ್ಮಾರ್ ಮೊದಲ ತ್ರಿ-ಸೇವಾ ವಿಪತ್ತು ತುರ್ತು ಪರಿಹಾರ ಅಭ್ಯಾಸ ‘ರಾಹತ್ ಮಿತ್ರ’ ಚೆನ್ನೈನಲ್ಲಿ ಯಶಸ್ವಿ ಸಮಾಪ್ತಿ
ಚೆನ್ನೈ : ಭಾರತ ಮತ್ತು ಮ್ಯಾನ್ಮಾರ್ ರಕ್ಷಣಾ ಪಡೆಗಳ ನಡುವೆ ಆಯೋಜಿಸಲಾದ ಮೊದಲ ದ್ವಿಪಕ್ಷೀಯ ತ್ರಿ-ಸೇವಾ ಮಾನವೀಯ ನೆರವು ಮತ್ತು ವಿಪತ್…
◷ 09/11/2026
ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಯದುವೀರ್
ಮೈಸೂರು : ಮೈಸೂರು–ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆ ಸಮೀಪದ ಕೆಂಪೇಗೌಡ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣ …
◷ 09/11/2026
