ವಿವಿಧ ನಿಗಮ, ಮಂಡಳಿಗಳಿಗೆ 500 ಮಂದಿ ನಿರ್ದೇಶಕರ ನೇಮಕ

ಮೈಸೂರು : ಕಾಂಗ್ರೆಸ್ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆಯಾಗಿ ವಿವಿಧ ನಿಗಮ, ಮಂಡಳಿಗಳಿಗೆ 500 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು. ಈ ಸಂಬಂಧದ ಪಟ್ಟಿ ಸಿದ್ಧವಾಗಿದ್ದು, ಈಗಾಗಲೇ ಸಹಿ ಹಾಕಿದ್ದೇನೆ. ವರ್ಗೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇಂದು ಸಂಜೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳಿಗೆ ಒಟ್ಟು ಮೂರು ಹಂತಗಳಲ್ಲಿ ಅಧಿಕಾರ ಹಂಚಿಕೆ ಮಾಡಲಾಗುವುದು. ಮೊದಲ ಹಂತದಲ್ಲಿ ಇಂದು ಸದಸ್ಯರು ಹಾಗೂ ನಿರ್ದೇಶಕರ ನೇಮಕ ನಡೆಯಲಿದೆ. ಉಳಿದ ಎರಡು ಪಟ್ಟಿಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಲಾಗುವುದು. ಎಲ್ಲ ಪ್ರಕ್ರಿಯೆಗಳೂ ಅಂತಿಮ ಹಂತದಲ್ಲಿವೆ. ಕೆಲವು ಶಾಸಕರಿಗೂ ಸ್ಥಾನಮಾನ ನೀಡಬೇಕಿದ್ದು, ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಸಂಬಂಧಿತ ಸುದ್ದಿಗಳು

ಸ್ವಚ್ಛ ಸರ್ವೇಕ್ಷಣೆ 2025-26 ಪ್ರಶಸ್ತಿ ಪ್ರದಾನ: ವಿಜೇತರನ್ನು ಗೌರವಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿ: ಸ್ವಚ್ಛ ಭಾರತ ಮಿಷನ್-ನಗರ ಯೋಜನೆಯಡಿ ಭಾರತದ ಅತ್ಯಂತ ಸ್ವಚ್ಛ ನಗರಗಳನ್ನು ಗುರುತಿಸಿ ಗೌರವಿಸುವ 'ಸ್ವಚ್ಛ ಸರ್ವೇಕ್ಷಣೆ 202…
◷ 11/11/2026
ಸಬ್ಸಿಡಿ ದರಕ್ಕೆ ಅನುಮೋದನೆ
ಬೆಂಗಳೂರು: 2026–27ರ ಹಿಂಗಾರು ಹಂಗಾಮಿಗಾಗಿ ರಂಜಕ ಮತ್ತು ಪೊಟ್ಯಾಷ್ಯುಕ್ತ ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರವನ್ನು ಸ…
◷ 11/11/2026
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ : ಬಿಜೆಪಿ ಪ್ರತಿಭಟನೆ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತ ಹಾಗೂ ದಿನೇದಿನೇ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸ…
◷ 11/11/2026
ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ
ಮೈಸೂರು : ತಾಲೂಕಿನ ಏಳಿಗೆಹುಂಡಿ ಗ್ರಾಮದಲ್ಲಿ ಇಂದು ಕಾರ್ಗಳ್ಳಿ ಮಹಾಲಕ್ಷ್ಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್…
◷ 11/11/2026
