ಬೆಂಗಳೂರು : ಮೆಟ್ರೋ ಕುರಿತು ನಾವು ಹೇಳೋದಕ್ಕೆ 50-50 ಅಂತ ಹೇಳುತ್ತೇವೆ ಆದರೆ ವಾಸ್ತವದಲ್ಲಿ 84ಪರ್ಸೆಂಟ್‌ ರಾಜ್ಯ ಸರ್ಕಾರ ಭರಿಸುತ್ತದೆ. 16ಪರ್ಸೆಂಟ್‌ ಬಂಡವಾಳ ವೆಚ್ಚವನ್ನು ಮಾತ್ರ ಕೇಂದ್ರ ಸರ್ಕಾರ ನಮಗೆ ಕೊಡುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಬೆಂಗಳೂರಿನಲ್ಲಿ  ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಈ ಎಲ್ಲ ಕಾರಣಗಳಿಂದ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಇಷ್ಟೊಂದು ಅಂತರ ಆಗಬಾರದು. ಯಾಕೆಂದರೆ ಬೆಂಗಳೂರು ದೇಶಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿ. ಪ್ರಪಂಚಕ್ಕೆ ತಂತ್ರಜ್ಞಾನವನ್ನು ಕೊಡುತ್ತಿದ್ದೇವೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗತಕ್ಕ ಐಟಿ ಸರ್ವಿಸಸ್‌ ಇಂದು ದೇಶಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಫಾರಿನ್‌ ಎಕ್ಸಚೇಂಜ್‌ ಆದಾಯವನ್ನು ತಂದುಕೊಡುವಾಗ ಕೇಂದ್ರ ಸರ್ಕಾರನೂ ಕೂಡ ಇವತ್ತು ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾದರೆ ಸ್ವಲ್ಪ ಅಷ್ಟೇ ಕನ್ನಡಿಗರಿಗೆ ಸಿಗುತ್ತೆ. ದೇಶದವರೆಲ್ಲ ಉದ್ಯೋಗ ಪಡೆದುಕೊಳ್ಳುತ್ತಾರೆ. ಇಲ್ಲಿನ ಜನ ತೆರಿಗೆ ಕಟ್ಟುವುದು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹೋಗಲಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಚಿಗೆ ಬಂಡವಾಳ ಸಹಾಯವನ್ನು ಮಾಡಬೇಕು ಎಂದು ಒತ್ತಾಯಿಸಿದರು.