ತುಮಕೂರು : ತುಮಕೂರು ಡಬ್ಲ್ಯೂಎಸ್‌ಪಿ (WSP), ಕೆಎಸ್‌ಡಬ್ಲ್ಯೂಸಿ (KSWC) ತುಮಕೂರು ಯುನಿಟ್-2 ಮತ್ತು ಶಿರಾ ಡಬ್ಲ್ಯೂಎಸ್‌ಪಿ, ಶಿರಾದ ಎಪಿಎಂಸಿ (APMC) ಗೋದಾಮಿಗೆ ಸಚಿವ ರಿಜ್ವಾನ್‌ ಅರ್ಷದ್‌ ಭೇಟಿ ನೀಡಿ  ಪರಿಶೀಲಿಸಿದರು. ಆಹಾರಧಾನ್ಯಗಳ ಸುರಕ್ಷಿತ ಸಂಗ್ರಹಣೆ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪಾರದರ್ಶಕತೆ, ಜವಾಬ್ದಾರಿ ಹಾಗೂ ದಾಖಲೆಗಳ ಸರಿಯಾದ ನಿರ್ವಹಣೆಗೆ ಒತ್ತು ನೀಡಿ, ಸ್ಟಾಕ್ ನೋಂದಣಿ ಪುಸ್ತಕಗಳು (Stock registers) ಮತ್ತು ಕಾರ್ಯಚಟುವಟಿಕೆಗಳ ವಿಧಾನಗಳನ್ನು ಪರಿಶೀಲಿಸಿದರು.ಈ ಸಂದರ್ಭ ಗೋದಾಮು ವ್ಯವಸ್ಥಾಪಕರು  ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.