ಮೈಸೂರು:  ಪ್ರಧಾನಿ ಮೋದಿ ಅವರು ನಾಳೆ ಮೈಸೂರಿಗೆ  ಆಗಮಿಸುತ್ತಿದ್ದು, ಮೊದಲು ಲಲಿತ್ ಮಹಲ್ ಹೆಲಿಪ್ಯಾಡ್ ನಿಂದ ರೋಡ್ ಶೋ ನಡೆಸುತ್ತಾರೆ. ಹೆಲಿಪ್ಯಾಡ್ ನಿಂದ ಪ್ಲಾನೆಟೋರಿಯಂ ತನಕ ಜನರು ನಿಲ್ಲಲು ಅವಕಾಶವಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳೀದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು  ತಾರಾಲಯ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮವಿದೆ.ಈ ತಂತ್ರಜ್ಞಾನದ ವಿಶ್ವದ ಮೊದಲ ತಾರಾಲಯ ಇದು. 8 ಸಾವಿರ ಜನ ವಿದ್ಯಾರ್ಥಿಗಳು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಈ ಬಗ್ಗೆ ಜಿಲ್ಲಾಡಳಿತ ಪಾಸ್ ವಿತರಣೆ ಮಾಡಲಿದೆ ಎಂದರು.ಕರ್ನಾಟಕದ ಸ್ವಚ್ಛ ನಗರಿ ಮೈಸೂರು ಎಂದು ಪ್ರಶಸ್ತಿ ಬಂದಿದೆ. ಆದರೆ ಭಾರತದ ಸ್ವಚ್ಛ ನಗರಿ ಪಟ್ಟಿಯಲ್ಲಿ ಹೆಸರಿಲ್ಲ. ಅದಕ್ಕೆ ತಕ್ಕಂತೆ ನಾವು ಕೂಡ ಕೆಲಸ ಮಾಡಬೇಕಿದೆ. ಮಹಾನಗರ ಪಾಲಿಕೆಗೆ ಧನ್ಯವಾದ ಹೇಳುತ್ತೇನೆ.ನಾಗರಿಕರು ಕೂಡ ಹೆಚ್ಚಿನ ಜವಾಬ್ದಾರಿ ವಹಿಸಬೇಕು.ಪ್ರವಾಸಿಗರು ಕೂಡ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದರು.ನಂಜನಗೂಡಿನಲ್ಲಿ ಡ್ರಗ್ಸ್ ಆರೋಪಿ ವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ನಮ್ಮ ಪೊಲೀಸ್ ಇಲಾಖೆ ಬಗ್ಗೆ ಕೆಲವು ಅನುಮಾನ ಮೂಡುತ್ತದೆ.ನಮ್ಮ ಪೊಲೀಸರಿಗೆ ಮಾಹಿತಿ ಇಲ್ವಾ ಗ್ರೌಂಡ್ ನಲ್ಲಿ ಕೆಲಸ ಮಾಡ್ತಿಲ್ವಾ ಅನಿಸತ್ತೆ. ಇದು ಗುಪ್ತಚರ ಇಲಾಖೆ ವೈಫಲ್ಯ. ಡೆಲ್ಲಿ, ಮಹಾರಾಷ್ಟ್ರ, ಕೇರಳ ಪೊಲೀಸರು ಇಲ್ಲಿಗೆ ಬಂದು ಡ್ರಗ್ಸ್ ಪತ್ತೆ ಹಚ್ಚುತ್ತಾರೆ.ನಮ್ಮ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಇಲ್ವಾ ಅನ್ನೋ ಪ್ರಶ್ನೆ ಮೂಡುತ್ತದೆ.ಈ ಬಗ್ಗೆ ರಾಜ್ಯ ಸರ್ಕಾರ ಚಿಂತಿಸಬೇಕು ಎಂದರು. ಬೆಂಗಳೂರು ಮೆಟ್ರೋ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇಬ್ಬರಿಂದಲೂ ಮೆಟ್ರೋ ಅಭಿವೃದ್ಧಿಯಾಗಿದೆ.ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ.ಇದರಲ್ಲಿ ಕ್ರೆಡಿಟ್ ವಾರ್ ಬೇಡ.ಕ್ರೆಡಿಟ್ ಕೊಡೋದು ಜನ.ಅಚ್ಚುಕಟ್ಟಾಗಿ ಉದ್ಘಾಟನೆ ಮಾಡೋಣ ಎಂದು ತಿಳಿಸಿದರು.ನಾಳೆ ಸಚಿವ ಕೃಷ್ಣ ಬೈರೇಗೌಡ  ಭಾಷಣ ಮೊಟಕು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಕಾರ್ಯಕ್ರಮದ ಸಮಯ ಮೊದಲೇ ನಿಗದಿಯಾಗುತ್ತದೆ.ಪ್ರಧಾನಿಗಳ ಕಾರ್ಯಕ್ರಮ ಹಿನ್ನಲೆ ಪ್ರೋಟೋಕಾಲ್ ಪ್ರಕಾರ ಎಲ್ಲವೂ ಆಗತ್ತದೆ. ಬೇಕಂತಲೇ ಭಾಷಣ ಮೊಟಕು ಮಾಡಿರುವುದಿಲ್ಲ ಎಂದರು.