ಕೋಲಾರ:  ಕೋಲಾರದಲ್ಲಿ  ಕೆರೆಗಳು ಖಾಲಿಯಾಗುತ್ತಿದ್ದಂತೆ ಅಕ್ರಮ ಫಿಲ್ಟರ್ ಮರಳು ಮಾಫಿಯಾ   ನಡೆಯುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ವಿಫಲವಾದ ಹಾಗೂ ಪರೋಕ್ಷ ಬೆಂಬಲದ ಆರೋಪದ ಮೇಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ  ಹಾಗೂ ಕಾನ್ಸ್‌ಟೇಬಲ್‌ ಅವರನ್ನು  ಅಮಾನತು ಮಾಡಲಾಗಿದೆ.ಕೋಲಾರ  ಜಿಲ್ಲೆ ಮುಳಬಾಗಿಲು ತಾಲೂಕು ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ವಿದ್ಯಾಶ್ರೀ ಹಾಗೂ ನಂಗಲಿ ಠಾಣೆಯ ಎಸ್‌ ಬಿ ಕಾನ್ಸ್‌ಟೇಬಲ್ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿದೆ. ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಮಾಡಿದ್ದಾರೆ.