ಮಹಿಳೆಯರು ಎರಡುಸಾವಿರ ರೂ.ಗೆ ಮರುಳಾಗಬೇಡಿ : ಸಚಿವ ಹೆಚ್.ಡಿ.ಕುಮಾರಸ್ವಾಮಿ

ಹಾಸನ : ಮಹಿಳೆಯರು ದಯವಿಟ್ಟು 2,000 ರೂ.ಗೆ ಮರುಳಾಗಬೇಡಿ. ನಾನು ತಿಂಗಳಿಗೆ 5,000 ರೂ. ಬರುವಂತೆ ಮಾಡಬಲ್ಲೆ ಎಂದು ‘ಗೃಹಲಕ್ಷ್ಮಿ’ಯರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಹಾಸನ ತಾಲೂಕಿನ, ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀವೀರಾಂಜನೇಯ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಯಮಾಡಿ ಮಹಿಳೆಯರು ಎರಡು ಸಾವಿರಕ್ಕೆ ಮರಳಾಗಬೇಡಿ. ನಾನು ತಿಂಗಳಿಗೆ ಐದು ಸಾವಿರ ಬರುವಂತೆ ಮಾಡಬಲ್ಲೆ. ಇವತ್ತು ಕಾಯಿಲೆ, ಮಕ್ಕಳ ಶಿಕ್ಷಣಕ್ಕಾಗಿ ಮನೆ, ಮಠ ಕಳೆದುಕೊಳ್ತಾರೆ. ಎರಡು ಸಾವಿರ ರೂಪಾಯಿ ಧರ್ಮಕ್ಕೆ ಕೊಡಲ್ಲ. ಬಹಳ ದಾರಾಳತನದಿಂದ ಕೊಡ್ತಾ ಇಲ್ಲ. ನೀವು ಕಟ್ಟುವ ಟ್ಯಾಕ್ಸ್ನಲ್ಲೇ ನಿಮಗೆ ಎರಡು ಸಾವಿರ ಹಣ ಕೊಡುತ್ತಿದ್ದಾರೆ ಎಂದು ಜನತೆಗೆ ತಿಳಿಸಿದರು.ಸರ್ಕಾರದವರು ಎರಡೂವರೆ ಸಾವಿರ ರೂಪಾಯಿಯನ್ನು ಬರಗಾಲದ ಪರಿಹಾರದ ಹಣವಾಗಿ ಕೊಡುತ್ತೇವೆ ಎನ್ನುತ್ತಾರೆ. ಯಾದಗಿರಿ ಭಾಗದಲ್ಲಿ ಎರಡೂವರೆ ಸಾವಿರಕ್ಕಿಂತ ಕಡಿಮೆ ಹಣವನ್ನು ಭಿಕ್ಷೆ ಕೊಟ್ಟ ರೀತಿಯಲ್ಲಿ ಕೊಟ್ಟಿದ್ದಾರೆ. ಆ ಹಣ ವಾಪಸ್ ಕೊಡುತ್ತೇವೆ ಅಂತ ಆ ಭಾಗದ ರೈತರು ಹೇಳುತ್ತಾರೆ. ನನ್ನ ಹತ್ತಿರ ಶ್ರೀಮಂತರು ಬರಲ್ಲ, ನೋವನ್ನು ಅನುಭವಿಸುವ ಬಡವರೇ ಬರುತ್ತಾರೆ. ಇಡೀ ರಾಜ್ಯದ ಪ್ರತಿಯೊಂದು ಕುಟುಂಬಗಳು ಕೈಚಾಚಬಾರದು. ಕೈ ಎತ್ತಿ ಕೊಡುವಂತೆ ಬದುಕಬೇಕು. ನನಗೆ ಐದು ವರ್ಷ ಸರ್ಕಾರ ಕೊಟ್ಟರೆ ಎಲ್ಲಾ ಕೆಲಸವನ್ನು ಮಾಡಬಹುದು. ರಾಜ್ಯದ ಖಜಾನೆಯನ್ನು ನೀವು ತುಂಬಿಸಿದ್ದೀರಿ. ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿ, ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರೆ ನಿಮ್ಮೆಲ್ಲರ ಆಶೀರ್ವಾದ ಎಂದರು.
ಸಂಬಂಧಿತ ಸುದ್ದಿಗಳು

ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಮೈಸೂರು : ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.…
◷ 14/11/2026
ಸಹಕಾರ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ 73ನೇ ಸಹಕಾರ ಸಪ್ತಾಹ – 2026ರ ಕಾರ್ಯಕ್ರಮವನ…
◷ 14/11/2026
ಮಕ್ಕಳ ದಿನಾಚರಣೆ : ಮಕ್ಕಳೊಂದಿಗೆ ಸಂವಾದ ನಡೆಸಿದ ರಾಷ್ಟ್ರಪತಿ ಮುರ್ಮು; ಕನಸುಗಳನ್ನು ನನಸಾಗಿಸಲು ಕರೆ
ನವದೆಹಲಿ : ಮಕ್ಕಳ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ…
◷ 14/11/2026
ಮೂರು ದಿನಗಳ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ
ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ʼಸಿನಿ ಸಂ…
◷ 14/11/2026
