ರಾಜ್ಯದ ಮಕ್ಕಳು ಕಲಿಕೆಯಲ್ಲಿ ದೇಶಕ್ಕೇ ಮಾದರಿ : ಸಚಿವ ಮಧು ಬಂಗಾರಪ್ಪ

ವಿಜಯಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗ ಸಂಯುಕ್ತವಾಗಿ ವಿಜಯಪುರದ ಗಾಂಧಿ ಚೌಕದಲ್ಲಿನ ʻಕರ್ನಾಟಕ ಪಬ್ಲಿಕ್ ಶಾಲೆʼ(ಕೆಪಿಎಸ್)ಯಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಭಾಗವಹಿಸಿ, ಮಕ್ಕಳೊಂದಿಗೆ ಬೆರೆತರು.ಕಾರ್ಯಕ್ರಮ ನಡೆಯಬೇಕಿದ್ದ ಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಪುಟ್ಟ ಮಕ್ಕಳು ನಮ್ಮಿಬ್ಬರ ಮೇಲೆ ಹೂ ಮಳೆಗೈದರು. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಮನಸ್ಸು ಗೆದ್ದರು. ಕೆಲವು ಮಕ್ಕಳಿಗೆ ಸಿಹಿ ತಿನಿಸಿ ನಾವೂ ಸಂತಸಪಟ್ಟೆವು ಎಂದ ಸಚಿವರು ಶಿಕ್ಷಣ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಾವು ಮಾಡಿರುವ ಬದಲಾವಣೆ, ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಕುರಿತು ವಿವರಿಸಿದರು. ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಯ ಹಿಂದಿನ ಪರಿಕಲ್ಪನೆಯ ಕುರಿತು ಮಾತನಾಡಿದರು. ನಮ್ಮ ರಾಜ್ಯದ ಮಕ್ಕಳು ಪ್ರತಿಭಾವಂತರಾಗಿದ್ದು, ಕಲಿಕೆಯಲ್ಲಿ ದೇಶಕ್ಕೇ ಮಾದರಿಯಾಗಿದ್ದಾರೆ ಎಂದು ಹೇಳಿದರು. ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಎಂ.ಬಿ. ಪಾಟೀಲ ಸೇವೆಯನ್ನು ಪ್ರಸ್ತಾಪಿಸಿ, ಅವರು ನನಗೂ ಮಾರ್ಗದರ್ಶಕರು ಎಂದು ಕೃತಜ್ಞತೆಯಿಂದ ಸ್ಮರಿಸಿದರು. ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಮಕ್ಕಳಿಗೆ ಸೂಕ್ತ ಅವಕಾಶಗಳು ದೊರೆತಾಗ ಅವರಲ್ಲಿನ ಜ್ಞಾನ, ಪ್ರತಿಭೆ ಮತ್ತು ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯ. ಇದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಕರು ಶಾಲೆಯ ಹೃದಯವಿದ್ದಂತೆ. ಉತ್ತಮ ಶಿಕ್ಷಕರಿಂದಲೇ ಶಾಲೆಗೆ ಶೋಭೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಚಿತ್ರವಿರುವ ಸ್ಮರಣಿಕೆಯನ್ನು ನೀಡಿದರು. ಜಿಲ್ಲಾಧಿಕಾರಿ ಕೆ. ಆನಂದ್, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಅಬ್ದುಲ್ ಹಮೀದ್ ಮುಶ್ರೀಫ್, ಅನಿಸಾ ಮುಜಾವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು
ಸಂಬಂಧಿತ ಸುದ್ದಿಗಳು

ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ: ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿದ ಯುವ ಪಡೆ, ಪ್ರಧಾನಿ ಮೋದಿ ಅಭಿನಂದನೆ
ಮಸ್ಕತ್ : ಒಮಾನ್ನ ಮಸ್ಕತ್ನಲ್ಲಿ ನಡೆದ ಪುರುಷರ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ…
◷ 15/11/2026
ಜನ್ಜಾತಿಯ ಗೌರವ್ ದಿವಸ್ ಈಗ ರಾಷ್ಟ್ರೀಯ ಉತ್ಸವವಾಗಿದೆ : ಪ್ರಧಾನಿ ಮೋದಿ
ನವದೆಹಲಿ: 2021ರ ನವೆಂಬರ್ 15ರಂದು ಮೊದಲ ಬಾರಿಗೆ ಆಚರಿಸಲಾದ 'ಜನ್ಜಾತಿಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ) ಈಗ ಇಡೀ ದೇಶದ …
◷ 15/11/2026
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಕೇವಲ ಆರ್ಥಿಕ ಗುರಿಯಲ್ಲ, ಕಾರ್ಯತಂತ್ರದ ಅಗತ್ಯ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ (ಆತ್ಮನಿರ್ಭರತೆ) ಎಂಬುದು ಕೇವಲ ಆರ್ಥಿಕ ಗುರಿಯಷ್ಟೇ ಅಲ್ಲ, ಬದಲಿಗೆ ದೇಶದ ಪ್ರಮುಖ ಕ…
◷ 15/11/2026
ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಮೈಸೂರು : ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.…
◷ 14/11/2026
