ದಾಸನ ಕೊಪ್ಪಲು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು : ಇಂದು ದಾಸನ ಕೊಪ್ಪಲು ಗ್ರಾಮದಲ್ಲಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸರ್ಕಲ್ ಹುಡುಗರು 71 ನೇ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಸರಳವಾಗಿ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಹೃದಯವಂತ ಕನ್ನಡಿಗರ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿಪಿಕೆ ಪರಮೇಶ್, ದಾಸನ ಕೊಪ್ಪಲು ಗ್ರಾಮದಲ್ಲಿ 71 ನೇ ಕನ್ನಡ ರಾಜ್ಯೋತ್ಸವವನ್ನು ಊರಿನ ಹಿರಿಯ ಮುಖಂಡರ ಸಮ್ಮುಖದಲ್ಲಿ ಊರಿನ ಸರ್ಕಲ್ ಹುಡುಗರು 15 ನೇ ವರ್ಷದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನೆರವೇರಿಸಿದ್ದು ನಮಗೆ ಬಹಳ ಸಂತೋಷವಾಯಿತು ಆದರೆ, ನೀವು ಇಷ್ಟೊಂದು ಸರಳ ಸಂಭ್ರಮದಿಂದ ಮಾಡಿದ್ದೀರಿ. ಈ ಕಾರ್ಯಕ್ರಮ ಮಾಡಿದ್ದು ಸಾರ್ಥಕ ಆಗಬೇಕು. ಈ ಕಾರ್ಯಕ್ರಮ ಭುವನೇಶ್ವರಿಗೆ, ನಾಡದೇವತೆ ಜಗನ್ಮಾತೆ ಚಾಮುಂಡೇಶ್ವರಿ ಅಮ್ಮನವರಿಗೆ ತಲುಪಬೇಕು ಅಂದರೆ ಹಾಗೂ ಮುಂದಿನ ವರ್ಷದಲ್ಲಿ ಈ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಇಡೀ ಊರಿನ ಜನರ ಮುಂದೆ ನಿಂತು ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಬೇಕು ಅಂದ್ರೆ ಯುವಕರು, ಊರಿನ ಸಮಸ್ಯೆ ಏನಿದೆ, ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ ಊರಿನ ಮೋರಿಗಳು, ರಸ್ತೆಗಳು, ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಬರುವ ಸೌಲಭ್ಯ ಈ ಎಲ್ಲಾ ಸಮಸ್ಯೆಗಳು ತಲುಪುತ್ತಿವೆಯೇ ಎಂದು ಪರಿಶೀಲನೆ ಮಾಡಿ, ಗ್ರಾಮಕ್ಕೆ ಏನು ಕೊರತೆ ಇದೆ ಗ್ರಾಮದ ಎಲ್ಲರೂ ಸೇರಿ ಚರ್ಚಿಸಿ ಅಭಿವೃದ್ಧಿಯತ್ತ ಹೆಚ್ಚಿನ ರೀತಿಯಲ್ಲಿ ಗಮನಹರಿಸಿ, ಜಿಲ್ಲಾಧಿಕಾರಿಗಳ ಕಚೇರಿಯಿಂದ,ಪೋಲಿಸ್ ಇಲಾಖೆಯಿಂದ, ಮೈಸೂರು ಮಹಾನಗರ ಪಾಲಿಕೆಯಿಂದ,ಯಾವ ರೀತಿ ಸಹಾಯ ಬೇಕಾಗಿದೆ ಎನ್ನುವುದನ್ನು ನಮ್ಮ ಬಳಗದ ಗಮನಕ್ಕೆ ತಿಳಿಸಿ ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಬೆಂಬಲ ಸೂಚಿಸಿದರು. ಈ ಸಂದರ್ಭ ಕವಿಶ್ ಗೌಡ, ಪ್ರಶಾಂತ್ ಗೌಡ, ದೊರೆಸ್ವಾಮಿ, ಮಧು, ಸೋಮು, ಲೋಕೇಶ್ ಹಾಗೂ ಗ್ರಾಮದ ಹಿರಿಯ ಮುಖಂಡರು ಮತ್ತು ಸರ್ಕಲ್ ಹುಡುಗರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿಗಳು

ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ: ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿದ ಯುವ ಪಡೆ, ಪ್ರಧಾನಿ ಮೋದಿ ಅಭಿನಂದನೆ
ಮಸ್ಕತ್ : ಒಮಾನ್ನ ಮಸ್ಕತ್ನಲ್ಲಿ ನಡೆದ ಪುರುಷರ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ…
◷ 15/11/2026
ಜನ್ಜಾತಿಯ ಗೌರವ್ ದಿವಸ್ ಈಗ ರಾಷ್ಟ್ರೀಯ ಉತ್ಸವವಾಗಿದೆ : ಪ್ರಧಾನಿ ಮೋದಿ
ನವದೆಹಲಿ: 2021ರ ನವೆಂಬರ್ 15ರಂದು ಮೊದಲ ಬಾರಿಗೆ ಆಚರಿಸಲಾದ 'ಜನ್ಜಾತಿಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ) ಈಗ ಇಡೀ ದೇಶದ …
◷ 15/11/2026
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಕೇವಲ ಆರ್ಥಿಕ ಗುರಿಯಲ್ಲ, ಕಾರ್ಯತಂತ್ರದ ಅಗತ್ಯ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ (ಆತ್ಮನಿರ್ಭರತೆ) ಎಂಬುದು ಕೇವಲ ಆರ್ಥಿಕ ಗುರಿಯಷ್ಟೇ ಅಲ್ಲ, ಬದಲಿಗೆ ದೇಶದ ಪ್ರಮುಖ ಕ…
◷ 15/11/2026
ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಮೈಸೂರು : ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.…
◷ 14/11/2026
