ತಾಯಿ ಕಾವೇರಿ ಮಾತೆಯ ಪುತ್ಥಳಿಯ ಲೋಕಾರ್ಪಣೆ

ಬೆಂಗಳೂರು : ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಲಗ್ಗೆರೆಯಲ್ಲಿ ಶ್ರೀನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡಪ್ರಭು ಕೆಂಪೇಗೌಡರ ಕೋಟೆ, ಕಂಚಿನ ಪುತ್ಥಳಿ ಹಾಗೂ ತಾಯಿ ಕಾವೇರಿ ಮಾತೆಯ ಪುತ್ಥಳಿಯ ಲೋಕಾರ್ಪಣೆ ಮತ್ತು ಕೆಂಪೇಗೌಡರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬೆಂಗಳೂರು ಪಶ್ಚಿಮ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹನುಮಂತರಾಯಪ್ಪ, ಕುಸುಮ ಹನುಮಂತರಾಯಪ್ಪ, ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿಗಳು

ಸ್ಟಿಂಗ್ ಆಪರೇಷನ್ ಪ್ರಕರಣ : ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಸೇರಿದಂತೆ…
◷ 20/11/2026
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 122 ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳ ಸಂಖ್ಯೆ ಹಂಚಿಕೆ
ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ (PKGBY) ಅಡಿಯಲ್ಲಿ ನಿರ್ಮಿಸಲಾದ 158 ವಸತಿ ಗೃಹಗಳ ಹ…
◷ 20/11/2026
ಸಾಧಕಿಯರ ಬದುಕು ಇಂದಿನ ಯುವಜನತೆಗೆ ದಾರಿದೀಪ : ಟಿ.ಎಸ್ ಶ್ರೀವತ್ಸ ಅಭಿಮತ
ಮೈಸೂರು : ಮಹನೀಯರ ಜಯಂತಿ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲ ಉದ್ದೇಶ ಅವರ ಆದರ್ಶ, ತ್ಯಾಗ ಮತ್ತು ನಡೆದು ಬಂದ ಹಾದ…
◷ 20/11/2026
ಡ್ರೈನೇಜ್ ಗುಂಡಿ ಮುಚ್ಚದ ಕಾರಣ ಹಳ್ಳಕ್ಕೆ ಬಿದ್ದ ಸ್ಕೂಟರ್, ಪತಿ ಸಾವು - ಪತ್ನಿ ಗಂಭೀರ; ಶವವಿಟ್ಟು ಪ್ರತಿಭಟನೆ
ವಡ್ಡರಕೊಪ್ಪಲು ಶಿವರಾಮು ಕೆ ಆರ್ ನಗರ : ಚಂದಗಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿರನಹಳ್ಳಿ ಗ್ರಾಮ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ತೆ…
◷ 20/11/2026
