ಬಸ್ ಚಾಲಕನ ಕನ್ನಡ ಪ್ರೇಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಮಂಡ್ಯ : ಮಂಡ್ಯದ ಮಳವಳ್ಳಿಯ KSRTC ಬಸ್ ಚಾಲಕ ಗಿರೀಶ ಅವರು ತಮ್ಮ ಬಸ್ ಚಾಲಕ ಕಾಯಕದ ಜೊತೆ ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ. ವೃತ್ತಿಯಲ್ಲಿ ಮೈಸೂರು ಡಿಪೋದ KSRTC ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಇವರು ಈ ಚಾಲಕ ವೃತ್ತಿಯ ಜೊತೆಗೆ ರಾಜ್ಯದ್ಯಂತ ತನ್ನ ಈ ಬಸ್ ನ ಮೂಲಕ ಕನ್ನಡದ ಕಂಪು ಪಸರಿಸಿದ್ದಾರೆ. ತಾನು ಓಡಿಸುವ ಈ KSRTC ಬಸ್ ಗೆ ಕನ್ನಡ ಬಾವುಟ ಕಟ್ಟಿ ಅಲಂಕಾರ ಮಾಡಿದ್ದಾರೆ. ಈ ಬಸ್ ನ ಮುಂಭಾಗ ಕನ್ನಡಾಂಬೆಯನ್ನು ಪ್ರತಿಷ್ಠಾಪನೆ ಮಾಡಿ ಆಸನಗಳಿಗೂ ಕನ್ನಡ ಬಾವುಟದ ಹೊದಿಕೆ ಹೊದೆಸಿದ್ದಾರೆ. ಬಸ್ ಒಳಾಂಗಣದಲ್ಲಿ ಕನ್ನಡದ ಸಾಹಿತಿಗಳ ಮತ್ತು ಸಾಧನೆಗೈದವರ ಪೋಟೋ ಅಳವಡಿಸಿದ್ದಾರೆ. ಬಸ್ ಗಳ ಒಳಗೆ ಕನ್ನಡದ ಸೂಕ್ತಿ ಮತ್ತು ಗಾದೆಗಳ ಬರವಣಿಗೆಯ ಸ್ಟಿಕ್ಕರ್ ಅಂಟಿಸಿದ್ದಾರೆ. ಬಸ್ ನ ತುಂಬೆಲ್ಲಾ ರಾಜ್ಯದ ಜಿಲ್ಲೆಗಳ ಕುರಿತ ಮಾಹಿತಿ ನೀಡುವ ಫ್ಲಾಶ್ ಕಾರ್ಡ್ ಅಳವಡಿಸಿದ್ದಾರೆ. ನಿತ್ಯ ದೇವಿಗೆ ಪೂಜೆ ಮಾಡ್ತಾ, ದಿನವಿಡಿ ಈ ಬಸ್ ನಲ್ಲಿ ಕನ್ನಡ ಹಾಡುಗಳನ್ನೆ ಹಾಕ್ತಾ ಕಿವಿ ತಂಪು ಮಾಡ್ತಾನೆ ಸಂಚರಿಸುತ್ತಿದ್ದಾರೆ. ಖುದ್ದು ತನ್ನ ಸಮವಸ್ತ್ರದ ಜೊತೆ ಕನ್ನಡ ಧ್ವಜ ಬಣ್ಣದ ಶಾಲಿನೊಂದಿಗೆ ಕನ್ನಡದ ಬಗ್ಗೆ ಅಭಿಮಾನ ಪ್ರಕಟಿಸುತ್ತಿದ್ದಾರೆ. ಜೀವ ಇರುವವರೆಗೂ ಕನ್ನಡ ಉಳಿಸುವ ಕೆಲಸಕ್ಕೆ ಸದಾ ಸಿದ್ದ ಎನ್ನುವ ಈ ಕನ್ನಡ ಪ್ರೇಮದ ಚಾಲಕನಿಗೆ, ಈ ಅಪ್ಪಟ ಕನ್ನಡಿಗನ ಕನ್ನಡ ಪ್ರೇಮಕ್ಕೆ ಹಲವು ಕನ್ನಡ ಪರ ಸಂಘಟನೆ ಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಸ್ಟಿಂಗ್ ಆಪರೇಷನ್ ಪ್ರಕರಣ : ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಸೇರಿದಂತೆ…
◷ 20/11/2026
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 122 ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳ ಸಂಖ್ಯೆ ಹಂಚಿಕೆ
ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ (PKGBY) ಅಡಿಯಲ್ಲಿ ನಿರ್ಮಿಸಲಾದ 158 ವಸತಿ ಗೃಹಗಳ ಹ…
◷ 20/11/2026
ಸಾಧಕಿಯರ ಬದುಕು ಇಂದಿನ ಯುವಜನತೆಗೆ ದಾರಿದೀಪ : ಟಿ.ಎಸ್ ಶ್ರೀವತ್ಸ ಅಭಿಮತ
ಮೈಸೂರು : ಮಹನೀಯರ ಜಯಂತಿ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲ ಉದ್ದೇಶ ಅವರ ಆದರ್ಶ, ತ್ಯಾಗ ಮತ್ತು ನಡೆದು ಬಂದ ಹಾದ…
◷ 20/11/2026
ಡ್ರೈನೇಜ್ ಗುಂಡಿ ಮುಚ್ಚದ ಕಾರಣ ಹಳ್ಳಕ್ಕೆ ಬಿದ್ದ ಸ್ಕೂಟರ್, ಪತಿ ಸಾವು - ಪತ್ನಿ ಗಂಭೀರ; ಶವವಿಟ್ಟು ಪ್ರತಿಭಟನೆ
ವಡ್ಡರಕೊಪ್ಪಲು ಶಿವರಾಮು ಕೆ ಆರ್ ನಗರ : ಚಂದಗಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿರನಹಳ್ಳಿ ಗ್ರಾಮ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ತೆ…
◷ 20/11/2026
