ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲವೆಂದಿದ್ದ ಟೀಕೆಗೆ ಕೆಲಸದ ಮೂಲಕವೇ ಉತ್ತರ : ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು: ಎತ್ತಿನಹೊಳೆ ಯೋಜನೆ ಸಾಧ್ಯವೇ ಇಲ್ಲ ಎಂದು ಟೀಕಿಸುತ್ತಿದ್ದವರಿಗೆ ಇಂದು ನಾವು ಕೆಲಸದ ಮೂಲಕವೇ ಉತ್ತರ ನೀಡುತ್ತಿದ್ದೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ ಹಾಗೂ ಅಂತರರಾಜ್ಯ ಜಲ ವಿವಾದಗಳಲ್ಲಿ ರಾಜ್ಯಕ್ಕೆ ಸಿಕ್ಕಿರುವ ನ್ಯಾಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು. 252.61 ಕಿ.ಮೀ. ಉದ್ದದ ಪೈಕಿ ಈಗಾಗಲೇ 232 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ 5 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಇದೆ. ಕೇಂದ್ರ ಸರ್ಕಾರದ ಅನುಮತಿ ದೊರೆತ ತಕ್ಷಣ ವಾರದೊಳಗೆ ತುಮಕೂರಿಗೆ ಟ್ರಯಲ್ ರನ್ ಮೂಲಕ ನೀರು ಹರಿಸಲಾಗುವುದು ಹಾಗೂ ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು ತಲುಪಿಸುವುದು ನಮ್ಮ ಸರ್ಕಾರದ ಸಂಕಲ್ಪ ಎಂದರು. ಚಿತ್ರದುರ್ಗ ಜಿಲ್ಲೆಯ 80ಕ್ಕೂ ಹೆಚ್ಚು ಕೆರೆಗಳಿಗೆ ಈಗಾಗಲೇ ಭದ್ರಾ ನೀರು ತುಂಬಿಸಲಾಗಿದೆ. ಡಿಸೆಂಬರ್ 15 ರಿಂದ 25ರೊಳಗೆ ತುಂಗಾದಿಂದ ನೀರನ್ನು ಲಿಫ್ಟ್ ಮಾಡಿ ಟ್ರಯಲ್ ರನ್ ನಡೆಸಲಾಗುವುದು. ನವಿಲೆ ಡ್ಯಾಂ ಬೇಡಿಕೆಯನ್ನೂ ಆದ್ಯತೆಯ ಮೇರೆಗೆ ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ರೈತರು ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ನಡೆಸಿದ ಸಂಘಟಿತ ಹೋರಾಟಕ್ಕೆ ಫಲ ಸಿಕ್ಕಿದೆ. 11 TMC ಹೆಚ್ಚುವರಿ ನೀರು ಕೇಳಿದ್ದ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ನಮ್ಮ ರಾಜ್ಯಕ್ಕೆ ಸಿಕ್ಕ ವಾಸ್ತವಿಕ ನ್ಯಾಯವಾಗಿದೆ ಎಂದರು. ಮುಖ್ಯಮಂತ್ರಿಗಳು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ನೇರ ಮಾತುಕತೆಗೆ ಮುಂದಾಗಿದ್ದು, ದಶಕಗಳ ಜಲ ವಿವಾದಗಳಿಗೆ ಸೌಹಾರ್ದಯುತ ಪರಿಹಾರ ಸಿಗುವ ವಿಶ್ವಾಸವಿದೆ. ವಿರೋಧ ಪಕ್ಷಗಳ ಟೀಕೆಗಳಿಗೆ ನಮ್ಮ ಜನಪರ ಕೆಲಸಗಳೇ ತಕ್ಕ ಉತ್ತರ ನೀಡಲಿವೆ. ನಾಡಿನ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ಅನ್ನದಾತರ ಬದುಕು ಹಸನಾಗಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಸಂಬಂಧಿತ ಸುದ್ದಿಗಳು

ಸ್ಟಿಂಗ್ ಆಪರೇಷನ್ ಪ್ರಕರಣ : ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ ಸೇರಿದಂತೆ…
◷ 20/11/2026
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 122 ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳ ಸಂಖ್ಯೆ ಹಂಚಿಕೆ
ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ (PKGBY) ಅಡಿಯಲ್ಲಿ ನಿರ್ಮಿಸಲಾದ 158 ವಸತಿ ಗೃಹಗಳ ಹ…
◷ 20/11/2026
ಸಾಧಕಿಯರ ಬದುಕು ಇಂದಿನ ಯುವಜನತೆಗೆ ದಾರಿದೀಪ : ಟಿ.ಎಸ್ ಶ್ರೀವತ್ಸ ಅಭಿಮತ
ಮೈಸೂರು : ಮಹನೀಯರ ಜಯಂತಿ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲ ಉದ್ದೇಶ ಅವರ ಆದರ್ಶ, ತ್ಯಾಗ ಮತ್ತು ನಡೆದು ಬಂದ ಹಾದ…
◷ 20/11/2026
ಡ್ರೈನೇಜ್ ಗುಂಡಿ ಮುಚ್ಚದ ಕಾರಣ ಹಳ್ಳಕ್ಕೆ ಬಿದ್ದ ಸ್ಕೂಟರ್, ಪತಿ ಸಾವು - ಪತ್ನಿ ಗಂಭೀರ; ಶವವಿಟ್ಟು ಪ್ರತಿಭಟನೆ
ವಡ್ಡರಕೊಪ್ಪಲು ಶಿವರಾಮು ಕೆ ಆರ್ ನಗರ : ಚಂದಗಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿರನಹಳ್ಳಿ ಗ್ರಾಮ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ತೆ…
◷ 20/11/2026
