ಬೆಂಗಳೂರು :  ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಲಿಖಿತ ಆದೇಶ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಇಂದು ಫ್ರೀಡಂ ಪಾರ್ಕ್ ಅಕ್ಕಪಕ್ಕದ ಜಾಗದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು  ಆಕ್ರೋಶ ಹೊರಹಾಕಿದರು.ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ  ಸಿಎಂ ಮಾತನ್ನು ಆಶಾ ಕಾರ್ಯಕರ್ತೆಯರು ಕೇಳಬೇಕು. ಸಿಎಂ ಭರವಸೆ ಕೊಟ್ಟಿದ್ದಾರೆ. ಅವರನ್ನು ನಂಬಬೇಕು. ನವೆಂಬರ್ 25 ಕ್ಕೆ ಸಂಜೆ ಸಿಎಂ ಬೆಂಗಳೂರಿಗೆ ಬರ್ತಾರೆ. ಬಂದ ಬಳಿಕ ಒಂದು ತೀರ್ಮಾನ ಮಾಡ್ತಾರೆ ಎಂದರು.  ಈ ಬಾರಿ ಆದೇಶದ ಪ್ರತಿ ಪಡೆದುಕೊಂಡೇ ಹೋಗಬೇಕು ಎಂದು ನಿರ್ಧರಿಸಿರುವ ಆಶಾ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದಾರೆ. ಹಂತಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ.