ಡಿ.ಕೆ ಶಿವಕುಮಾರ ಅವರನ್ನು ವೈಯುಕ್ತಿಕ ಟೀಕೆ ಮಾಡ್ಕೊಂಡು ಕಾಲ ಕಳೆಯುತ್ತಿದ್ದಾರೆ : ಸಚಿವ ನರೇಂದ್ರ ಸ್ವಾಮಿ ವಾಗ್ದಾಳಿ

ಮೈಸೂರು: ರೇವಣ್ಣ ಹಲವು ಸಲ ಕನಸು ಕಾಣ್ತಾರೆ,ಅವ್ರು ಕನಸು ಕಾಣೋದು ಬಿಡಲಿ ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದರು. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಸಂವಾದ ನಡೆಸಿ 2028ಕ್ಕೆ ಅಧಿಕಾರಕ್ಕೆ ಬರ್ತೇವೆ ಎಂಬ ರೇವಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ರೇವಣ್ಣ ಹಲವು ಸಲ ಕನಸು ಕಾಣ್ತಾರೆ.ಅವ್ರು ಕನಸು ಕಾಣೋದು ಬಿಡಲಿ,ಅವರದ್ದು ಪಾಳೆಗಾರಿಕೆ ಸಂಸ್ಕೃತಿ,ಅವರನ್ನು ಬಿಟ್ಟರೆ ಯಾರು ಇಲ್ಲ ಅನ್ನೋ ಭಾವನೆ. 2018ರಲ್ಲಿ ನಾವು 7ಜನ ಸೋತಿದ್ವಿ. ಡೆಡ್ ಹಾರ್ಸ್ ಅಂತ ಕರೆದ್ರು.ಈಗ ನಾವು ಗೆದ್ದಿಲ್ವಾ?ಮಂಡ್ಯದಲ್ಲಿ ನಾನು ಜೆಡಿಎಸ್ ವಿರುದ್ಧ ಹೋರಾಟ ಮಾಡ್ಕೊಂಡು ಬಂದಿದ್ದೇನೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು? ಮಂಡ್ಯದಲ್ಲಿ ಜೆಡಿಎಸ್ ಸೋಲಿಸಲು ನಾವೇ ಈ ಹಿಂದೆ ಸುಮಲತಾಗೆ ಬೆಂಬಲ ಕೊಟ್ವಿ,ಅಂಬರೀಶ್ ನಮ್ಮ ಪಕ್ಷದಲ್ಲಿದ್ದರು, ಸುಮಲತಾ ಪಕ್ಷೇತರ ಅಭ್ಯರ್ಥಿ ಆದ್ರು, ನಾವೆಲ್ಲರೂ ಬೆಂಬಲ ಕೊಟ್ವಿ, ಸುಮಲತಾ ಗೆದ್ರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲರೂ ಸುಮಲತಾಗೆ ಬೆಂಬಲ ಕೊಟ್ಟಿದ್ದೇವೆ.ನಮ್ಮ ಜಿಲ್ಲೆಯ ಸ್ವಾಭಿಮಾನಕ್ಕಾಗಿ ಅಂದು ಬೆಂಬಲ ಕೊಟ್ವಿ ಎಂದರು.ಮೈಸೂರಿನಲ್ಲಿ ಸಂವಿಧಾನ ದಿನಾಚರಣೆ ಮಾಡಬೇಕು ಎನ್ನುವುದು ಪಕ್ಷದ ತೀರ್ಮಾನ. ನಾನು ಕೂಡ ಇದಕ್ಕೆ ಒತ್ತಾಯ ಮಾಡಿದ್ದೆ.ಮಹದೇವಪ್ಪ ಕೂಡ ನಮ್ಮ ಪಕ್ಷದವರೇ.ಇದರಲ್ಲಿ ಯಾವುದೇ ರಾಜಕೀಯ ಇಲ್ಲ.ಸಂವಿಧಾನದ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಾಡುತ್ತಿದ್ದೇವೆ. ಮಹದೇವಪ್ಪ ಕೂಡ ನಮ್ಮ ನಾಯಕರು, ನಮ್ಮ ಶಾಸಕರು.ಇದರಲ್ಲಿ ಬೇರೆ ಯಾವ ಹಿತಾಸಕ್ತಿಯೂ ಇಲ್ಲ.ಪ್ರತಿವರ್ಷ ಒಂದು ಜಿಲ್ಲೆಯಲ್ಲಿ ಸಂವಿಧಾನ ಆಚರಣೆ ಆಗ್ಬೇಕು. ಈ ಹಿನ್ನಲೆ ನಾನು ಈ ಬಾರಿ ಮೈಸೂರಿನಲ್ಲಿ ಮಾಡಿ ಅಂತ ಕೇಳಿದ್ದೆ.ಹೀಗಾಗಿ ಮೈಸೂರಿನಿಂದ ಸಂವಿಧಾನ ದಿನಾಚರಣೆ ಆಗ್ತಿದೆ.ವೈಯುಕ್ತಿಕವಾಗಿ ಯಾರು ಮಾಡುವ ಅವಶ್ಯಕತೆ ಇಲ್ಲ.ಹೀಗಾಗಿ ಸರ್ಕಾರವೇ ಮಾಡ್ತಿದೆ ಎಂದರು. ಸಿದ್ದರಾಮಯ್ಯ ಸಭೆಗೆ ಮಹದೇವಪ್ಪ ಬಂದಿರಲಿಲ್ಲ. ಅವರ ಮಗ ಸಂಸದರು ಸುನಿಲ್ ಬೋಸ್ ಬಂದಿದ್ರು.ತಂದೆಗೆ ಹುಷಾರಿಲ್ಲ, ಹಾಗಾಗಿ ಬಂದಿಲ್ಲ ಅಂದ್ರು.ಇದನ್ನೇ ಕೆಲ ಮಾಧ್ಯಮಗಳು ಏನೇನೋ ವಿಶ್ಲೇಷಣೆ ಮಾಡ್ತಿದೆ ಅಷ್ಟೇ.ನಾನು ಯಾರನ್ನು ಓಲೈಕೆ ಮಾಡಲ್ಲ.ನಾನು ರೆಬಲ್ ನಾಯಕ. ನನಗೆ ಮಂತ್ರಿ ಸ್ಥಾನ ಕೊಟ್ಟಿರೋದು ಹೈ ಕಮಾಂಡ್ ಎಂದರು.ಸಿಎಂ ಡಿ.ಕೆ ಶಿವಕುಮಾರ್ ಗೆ ಕಿರುಕುಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಕುಮಾರಸ್ವಾಮಿ ಒಬ್ಬ ಕೇಂದ್ರ ಸಚಿವರಾಗಿದ್ದಾರೆ. ಅಭಿವೃದ್ಧಿ ವಿಚಾರದ ಬಗ್ಗೆ ಯಾವುದೇ ಚರ್ಚೆ ಮಾಡ್ತಿಲ್ಲ.ದಿನ ಬೆಳಗಾದ್ರೆ ಮಾಧ್ಯಮದ ಮುಂದೇನೆ ಇರ್ತಾರೆ. ಡಿ.ಕೆ ಶಿವಕುಮಾರ ಅವರನ್ನು ವೈಯುಕ್ತಿಕ ಟೀಕೆ ಮಾಡ್ಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂಬಂಧಿತ ಸುದ್ದಿಗಳು

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡೋಕೆ ಲೆಟರ್ ಬರೀತಿನಿ : ಅಧಿಕಾರಿಗಳಿಗೆ ಶಾಸಕ ಗಣಿಗ ರವಿಕುಮಾರ್ ತರಾಟೆ
ಮಂಡ್ಯ : ಜಿಲ್ಲಾ ಕೆಡಿಪಿ ಸಭೆಯಲ್ಲಿ NHAI ಅಧಿಕಾರಿಗೆ ಶಾಸಕ ರವಿಕುಮಾರ್ ಗಣಿಗ ಅವರು ಕಳಪೆ ಕಾಮಗಾರಿ ವಿರುದ್ಧ ಕಿಡಿಕಾರಿದರು.ಮಂಡ್ಯ…
◷ 24/11/2026
ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ : ರಘುಮೂರ್ತಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಚಿವರ ಸಭೆ
◷ 24/11/2026
ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ತುಮಕೂರು : ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪಶುಸಂಪತ್ತಿನ ಸಂರಕ್ಷಣೆ ಹಾಗೂ ರೈತರಿಗ…
◷ 24/11/2026
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೈಬರ್ ಕಮಾಂಡ್ ಸೆಂಟರ್ ಪೊಲೀಸ್ ರಿಂದ ನೋಟಿಸ್
ಬೆಂಗಳೂರು : ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ‘ಲಂಚದ ವಾಟ್ಸ್ಆ್ಯಪ…
◷ 24/11/2026
