ಏಷ್ಯಾದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ 2ನೇ ಸ್ಥಾನ ; ಬಲಿಷ್ಠ ರಾಷ್ಟ್ರಗಳಲ್ಲಿ ಭಾರತಕ್ಕೆ 3ನೇ ಸ್ಥಾನ

ನವದೆಹಲಿ : ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಮತ್ತು ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಸಂಸ್ಥೆ ‘ಲೋವಿ ಇನ್ಸ್ಟಿಟ್ಯೂಟ್’ (Lowy Institute) ಬಿಡುಗಡೆ ಮಾಡಿರುವ ‘2026ರ ಏಷ್ಯಾ ಪವರ್ ಇಂಡೆಕ್ಸ್’ ವರದಿಯಲ್ಲಿ ಭಾರತವು ಏಷ್ಯಾದ 3ನೇ ಅತ್ಯಂತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸ್ಥಾನಗಳ ಜಿಗಿತ ಕಂಡು ಏಷ್ಯಾದ 2ನೇ ಅತ್ಯಂತ ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇದ್ದಾರೆ. 100ಕ್ಕೆ 40.5 ಅಂಕಗಳನ್ನು ಪಡೆಯುವ ಮೂಲಕ ಭಾರತ 3ನೇ ಸ್ಥಾನದಲ್ಲಿದೆ (ಕಳೆದ ವರ್ಷಕ್ಕಿಂತ 0.5 ಅಂಕ ಹೆಚ್ಚಳ). ವರದಿಯು ಭಾರತವನ್ನು ಒಂದು ‘ಪ್ರಮುಖ ಶಕ್ತಿ’ (Major Power) ಎಂದು ಗುರುತಿಸಿದೆ. 2018ರಲ್ಲಿ ಈ ಸೂಚ್ಯಂಕ ಆರಂಭವಾದಾಗಿನಿಂದ, ಭಾರತ ಮತ್ತು ಚೀನಾ ನಡುವಿನ ಶಕ್ತಿಯ ಅಂತರ ಈಗ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಆರ್ಥಿಕ ಸಾಮರ್ಥ್ಯದಲ್ಲಿ ಸಣ್ಣ ಮಟ್ಟದ ಇಳಿಕೆಯಾಗಿದ್ದರೂ, ಭಾರತದ ಜಾಗತಿಕ ಪ್ರಭಾವ ನಿರಂತರವಾಗಿ ಹೆಚ್ಚುತ್ತಿದೆ ಎಂದು ಈ ವರದಿಯ ಮುಖ್ಯಸ್ಥ ಡಾ. ಹಂಟರ್ ಮಾರ್ಸ್ಟನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.27 ದೇಶಗಳ ಕಾರ್ಯಕ್ಷಮತೆಯನ್ನು ಅಳೆದು ಪಟ್ಟಿ ಸಿದ್ಧಪಡಿಸಲಾಗಿದೆ. ಅಮೆರಿಕ: 78.9 ಅಂಕಗಳು,ಚೀನಾ: 73.6 ಅಂಕಗಳು,ಭಾರತ: 40.5 ಅಂಕಗಳು,ಜಪಾನ್: 38.6 ಅಂಕಗಳು,ರಷ್ಯಾ: 32.2 ಅಂಕಗಳನ್ನು ಪಡೆದಿವೆ.ಇದು ಭಾರತದ ಅತಿದೊಡ್ಡ ಶಕ್ತಿಯಾಗಿದ್ದು, 70.3 ಅಂಕಗಳನ್ನು ಗಳಿಸಿದೆ. ಉತ್ತಮ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯಿಂದಾಗಿ 56.2 ಅಂಕಗಳೊಂದಿಗೆ ಭಾರತ 3ನೇ ಸ್ಥಾನದಲ್ಲಿದೆ. ಆಗ್ನೇಯ ಏಷ್ಯಾ ದೇಶಗಳೊಂದಿಗೆ ಹೆಚ್ಚುತ್ತಿರುವ ರಕ್ಷಣಾ ಸಹಕಾರ ಮತ್ತು ಬ್ರಹ್ಮೋಸ್ ಕ್ಷಿಪಣಿ ಮಾರಾಟದ ಬಲದಿಂದ ಭಾರತ 2 ಸ್ಥಾನ ಮೇಲೇರಿ 9ನೇ ಸ್ಥಾನ ತಲುಪಿದೆ. ವ್ಯಾಪಾರ ಮತ್ತು ಹೂಡಿಕೆಯ ಸ್ಥಿರತೆಯಿಂದಾಗಿ 2 ಸ್ಥಾನ ಏರಿಕೆ ಕಂಡು 7ನೇ ಸ್ಥಾನ ಪಡೆದಿದೆ.‘ಆರ್ಥಿಕ ಸಾಮರ್ಥ್ಯ’ ವಿಭಾಗದಲ್ಲಿ ಭಾರತ 3ನೇ ಸ್ಥಾನದಲ್ಲೇ ಮುಂದುವರಿದಿದ್ದರೂ, ಅಂಕಗಳು ಸ್ವಲ್ಪ ಕಡಿಮೆಯಾಗಿ 26.4ಕ್ಕೆ ಇಳಿದಿವೆ. ಅಲ್ಲದೆ, ಭಾರತದಿಂದ ವಿದೇಶಗಳಿಗೆ ಆಗುವ ಹೂಡಿಕೆಯಲ್ಲಿ (Outward Investment) ಸುಮಾರು 20 ಬಿಲಿಯನ್ ಡಾಲರ್ಗಳಷ್ಟು ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಸಂಬಂಧಿತ ಸುದ್ದಿಗಳು

ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ : ರಘುಮೂರ್ತಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಚಿವರ ಸಭೆ
◷ 24/11/2026
ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ತುಮಕೂರು : ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪಶುಸಂಪತ್ತಿನ ಸಂರಕ್ಷಣೆ ಹಾಗೂ ರೈತರಿಗ…
◷ 24/11/2026
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೈಬರ್ ಕಮಾಂಡ್ ಸೆಂಟರ್ ಪೊಲೀಸ್ ರಿಂದ ನೋಟಿಸ್
ಬೆಂಗಳೂರು : ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ‘ಲಂಚದ ವಾಟ್ಸ್ಆ್ಯಪ…
◷ 24/11/2026
ಡಿ.ಕೆ ಶಿವಕುಮಾರ ಅವರನ್ನು ವೈಯುಕ್ತಿಕ ಟೀಕೆ ಮಾಡ್ಕೊಂಡು ಕಾಲ ಕಳೆಯುತ್ತಿದ್ದಾರೆ : ಸಚಿವ ನರೇಂದ್ರ ಸ್ವಾಮಿ ವಾಗ್ದಾಳಿ
ಮೈಸೂರು: ರೇವಣ್ಣ ಹಲವು ಸಲ ಕನಸು ಕಾಣ್ತಾರೆ,ಅವ್ರು ಕನಸು ಕಾಣೋದು ಬಿಡಲಿ ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದರು. ಮೈಸೂರಿನಲ್ಲಿ ಮಾಧ…
◷ 24/11/2026
