ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಬುಕ್ ಮಾಡೋಕೆ ಲೆಟರ್ ಬರೀತಿನಿ : ಅಧಿಕಾರಿಗಳಿಗೆ ಶಾಸಕ ಗಣಿಗ ರವಿಕುಮಾರ್ ತರಾಟೆ

ಮಂಡ್ಯ : ಜಿಲ್ಲಾ ಕೆಡಿಪಿ ಸಭೆಯಲ್ಲಿ NHAI ಅಧಿಕಾರಿಗೆ ಶಾಸಕ ರವಿಕುಮಾರ್ ಗಣಿಗ ಅವರು ಕಳಪೆ ಕಾಮಗಾರಿ ವಿರುದ್ಧ ಕಿಡಿಕಾರಿದರು.ಮಂಡ್ಯ ನಗರದ ಹೆದ್ದಾರಿಯಲ್ಲಿ ಪುಟ್ ಪಾತ್ ಕಾಮಗಾರಿ ಮುಗಿಯದೆ ಇದ್ರೆ ಗುತ್ತಿಗೆದಾರನಿಗೆ ಹಣ ಪಾವತಿಗೆ ಶಾಸಕ ಗರಂ ಆದರು. ಈ ಕುರಿತು ಮೋದಿಗೆ ಮತ್ತು ಕೇಂದ್ರ ಸಚಿವರಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದ ಅವರು ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಕಾಮಗಾರಿ ಮುಗಿಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.ಶಾಸಕ ತರಾಟೆಗೆ ಬೆದರಿದ ಅಧಿಕಾರಿ ಈ ವರ್ಷದ ಡಿಸೆಂಬರ್ ವರೆಗೆ ಕಾಲಾವಕಾಶ ಬೇಡಿಕೆ ಇಟ್ಟರು. ಶಾಕರು ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸದಿದ್ದರೆ ಖಂಡಿತ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ಕೊಟ್ಟರು. ಮಂಡ್ಯದಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಲು ಗಣಿಗ ರವಿಕುಮಾರ್ ಅವರು ಪ್ಲಾನ್ ಸಿದ್ದಪಡಿಸಿದ್ದು ಸಚಿವರ ಮುಂದಿಟ್ಟರು. ಮಂಡ್ಯದ ನೂರಡಿ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಲು ಪ್ಲಾನ್ ನಿರ್ಮಿಸಲಾಗಿದ್ದು, ಅಪಾರ್ಟ್ಮೆಂಟ್, ಮಲ್ಟಿಪೆಕ್ಸ್ ಥಿಯೇಟರ್, ಸ್ಪೋರ್ಟ್ಸ್ ಗ್ರೌಂಡ್, ರಸ್ತೆ, ಮಕ್ಕಳಾಡುವ ಪಾರ್ಕ್, ಸ್ವಿಮಿಂಗ್ ಫೂಲ್, ಮಲ್ಟಿ ಜಿಮ್ ಸೇರಿ ಹಲವು ಸೌಕರ್ಯ ಒಳಗೊಂಡಿದೆ. ಪ್ಲಾನ್ ಬಗ್ಗೆ ಸಂಕ್ಷಿಪ್ತವಾಗಿ ಅಧಿಕಾರಿಗಳು ವಿವರಿಸಿದರು. ಸಭೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ,ಕದಲೂರು ಉದಯ್, ಪರಿಷತ್ ಸದಸ್ಯರಾದ ಮಧು ಜಿ ಮಾದೇಗೌಡ, ವಿವೇಕಾನಂದ, ದಿನೇಶ್ ಗೂಳಿಗೌಡ, ಡಿಸಿ ಡಾ.ಕುಮಾರ, ಸಿಇಓ ಕೆ.ಆರ್.ನಂದಿನಿ, ಎಸ್ಪಿ ಶೋಭಾರಾಣಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಸಂಬಂಧಿತ ಸುದ್ದಿಗಳು

ಪರಿಶಿಷ್ಟ ಪಂಗಡದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಆ್ಯಪ್ ಅಭಿವೃದ್ಧಿ : ರಘುಮೂರ್ತಿ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಚಿವರ ಸಭೆ
◷ 24/11/2026
ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ತುಮಕೂರು : ಪಶುಸಂಗೋಪನಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪಶುಸಂಪತ್ತಿನ ಸಂರಕ್ಷಣೆ ಹಾಗೂ ರೈತರಿಗ…
◷ 24/11/2026
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೈಬರ್ ಕಮಾಂಡ್ ಸೆಂಟರ್ ಪೊಲೀಸ್ ರಿಂದ ನೋಟಿಸ್
ಬೆಂಗಳೂರು : ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ‘ಲಂಚದ ವಾಟ್ಸ್ಆ್ಯಪ…
◷ 24/11/2026
ಡಿ.ಕೆ ಶಿವಕುಮಾರ ಅವರನ್ನು ವೈಯುಕ್ತಿಕ ಟೀಕೆ ಮಾಡ್ಕೊಂಡು ಕಾಲ ಕಳೆಯುತ್ತಿದ್ದಾರೆ : ಸಚಿವ ನರೇಂದ್ರ ಸ್ವಾಮಿ ವಾಗ್ದಾಳಿ
ಮೈಸೂರು: ರೇವಣ್ಣ ಹಲವು ಸಲ ಕನಸು ಕಾಣ್ತಾರೆ,ಅವ್ರು ಕನಸು ಕಾಣೋದು ಬಿಡಲಿ ಎಂದು ಸಚಿವ ನರೇಂದ್ರ ಸ್ವಾಮಿ ಹೇಳಿದರು. ಮೈಸೂರಿನಲ್ಲಿ ಮಾಧ…
◷ 24/11/2026
