ಬಿಜೆಪಿಯಲ್ಲಿ ಒಂದು ಲೀಡರ್ ಶಿಪ್ ಇಲ್ಲ, ಜೆಡಿಎಸ್ ಪರಿಸ್ಥಿತಿ ಗೊತ್ತಿರುವ ವಿಚಾರ : ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ

ಮಂಡ್ಯ : ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿ 2ಸಾವಿರ ಕ್ಯೂಸೆಕ್ ನೀರು ಬಿಡಲು CWRC ಆದೇಶ ಮಾಡಿದೆ.ಪ್ರತಿನಿತ್ಯ 1500 ಕ್ಯೂಸೆಕ್ ನೀರು ಹೋಗ್ತಿತ್ತು. ನಾಳೆ CWMA ಸಭೆ ಇದೆ. ಅವರು ಅದನ್ನೇ ಮಾಡ್ತಾರೆ. ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿನ ಅರ್ಜಿ ವಜಾ ಆಗಿದೆ.CWRC, CWMA ವಿರುದ್ಧ ವಾದ ಮಾಡ್ತಾರೆ.ಏನು ಸಮಸ್ಯೆ ಆಗಲ್ಲ ಎಂದು ತಿಳಿಸಿದರು.2028ಕ್ಕೆ ಹೆಚ್ಡಿಕೆ ಸಿಎಂ ಎಂಬ ರೇವಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ 2028ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ ಮತ್ತೆ ಡಿಕೆಶಿ ಸಿಎಂ ಆಗ್ತಾರೆ. ಅವರು ಭವಿಷ್ಯ ನುಡಿದಿದ್ರೆ ಅವರ ಹತ್ರ ಉಳಿಯೋರು ಯಾರು? ನಾನು, ನಾನೀಲ್ಲದೆ ಸರ್ಕಾರ ರಚನೆ ಆಗಲ್ಲ, ನಾನೇ ಅನಿವಾರ್ಯ 10, 20 ಸೀಟ್ ಬಂದರು ನಾನೇ ಇರ್ತಿನಿ. ಕಾಂಗ್ರೆಸ್, ಬಿಜೆಪಿ 113 ಸೀಟ್ ಬರಲ್ಲ ಅಂತ ಹೇಳಿಕೊಂಡರೆ ಮಾತ್ರ ಅವರಲ್ಲಿರೋರು ಒಂದಷ್ಟು ಜನ ಉಳಿದುಕೊಳ್ಳುತ್ತಾರೆ. ವೋಟ್ ಹಾಕೋರು ಹಾಕ್ತಾರೆ. ಅವರು ಕಾಲದಿಂದಲೂ ಹಾಗೇ ಮಾತಾಡ್ಕೊಂಡು ಬಂದಿದ್ದಾರೆ.ಬಿಜೆಪಿ ಜೊತೆ ಇದ್ದೇನೆ ಅನ್ನೋ ಕಾರಣಕ್ಕೆ ಹೇಳ್ತಿದ್ದಾರೆ. ಡಿಕೆಶಿ ಎಫೆಕ್ಟಿವ್ ಆಗಿ ಕೆಲಸ ಮಾಡ್ತಿದ್ದಾರೆ. ಬಿಜೆಪಿಯಲ್ಲಿ ಒಂದು ಲೀಡರ್ ಶಿಪ್ ಇಲ್ಲ. ಜೆಡಿಎಸ್ ಪರಿಸ್ಥಿತಿ ಗೊತ್ತಿರುವ ವಿಚಾರ ಎಂದು ಲೇವಡಿ ಮಾಡಿದರು.ಯಾವುದೇ ಕಾರಣಕ್ಕೂ 80ರ ಮೇಲೆ ರೀಚ್ ಆಗಲ್ಲ.ನಮ್ಮತ್ರ ರಿಪೋರ್ಟ್ ಇದೆ. ಮ್ಯಾನಿಪ್ಲೇಟ್ ಮಾಡ್ತಿದ್ದಾರೆ ಬಿಡಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ ಮತ್ತೆ ಡಿಕೆಶಿ ಸಿಎಂ ಎಂದು ಸ್ಪಷ್ಟಪಡಿಸಿದರು. ಕುಮಾರಸ್ವಾಮಿ-ನಾನು ಆತ್ಮೀಯರು,ಸ್ನೇಹಿತರಾಗಿದ್ವಿ, ಈಗ ಇಲ್ಲ. ಹೆಚ್ಡಿಕೆ ವಿರುದ್ದ ಸ್ವಾಮಿಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇವರ ಪರ ಹೇಳಿದ್ರೆ ಒಳ್ಳೆಯವರ? ನಿಡಘಟ್ಟ ಬಾರ್ಡರ್ ಎಕ್ಸಿಟ್ ಮಾಡಿಸ್ತಿಲ್ಲ. ಇವರು ಎಂಪಿ, ಮಂತ್ರಿ ಆಗಿ ಏನು ಪ್ರಯೋಜನ? ಗಡ್ಕರಿ ಹತ್ರ ಹೋಗಿ ಚೇಂಜ್ ಮಾಡಿಸ್ತಾರ? ಉಡಾಫೆ ಉತ್ತರ ಕೊಡ್ತಾರೆ.ಕಾರ್ಖಾನೆ ಬಗ್ಗೆ ಮಾಡಕ್ಕಾಗಲ್ಲ ಅಂತ ಅವರೇ ಹೇಳಿದ್ದಾರೆ. ರಾಜ್ಯಕ್ಕೆ ಏನು ಇವರ ಕೊಡುಗೆ, ಕ್ರೀಡಾಂಗಣ 14 ಕೋಟಿದು ಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ ಬಿಡಿ .ಆತ್ಮೀಯರು ಸ್ನೇಹಿತರು ಇದ್ರು, ಈಗಲ್ಲ. ಅವರ ಟೀಕೆ ಮಾಡಿದ್ರೆ ಏನು ಪ್ರಯೋಜನ? ತಲೆಕೆಟ್ಟಾಗ ಮಾತ್ರ ಏನು ಹೇಳಿರ್ತೀವಿ ಅಷ್ಟೆ ಎಂದರು.ನಾಗಮಂಗಲದಲ್ಲಿ ಸಚಿವರ ಬೆಂಬಲಿಗರಿಂದ ಅಕ್ರಮ ಗಣಿಗಾರಿಕೆ ಸುರೇಶ್ ಗೌಡ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಸುರೇಶ್ ಗೌಡಗೆ ಕಾಮನ್ ಸೆನ್ಸ್, ತಿಳುವಳಿಕೆ ಇಲ್ಲ. 2019 ರಲ್ಲಿ ನಮ್ಮ ಹುಡಗನೇ. ನಾನು ಯಾಕೆ ಅಕ್ರಮ ಗಣಿಗಾರಿಕೆ ಮಾಡಿಸಲಿ.ಅವರು ಎಂಎಲ್ಎ ಆಗಿದ್ದಾಗ ಅನುಮತಿ ಕೊಟ್ಟಿರೋದು. ಕಾಮನ್ ಸೆನ್ಸ್, ತಿಳುವಳಿಕೆ ಇಲ್ಲ.ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ಈ ರೀತಿ ಮಾತನಾಡ್ತಾರೆ.ಬಿಡದಿಯಲ್ಲಿ 12 ಎಕರೆ ಟೌನ್ ಶಿಪ್ ಮಾಡಲು ಡಿಕೆಶಿ ಮುಂದಾಗಿದ್ದರು.ಕುಮಾರಸ್ವಾಮಿ, ಯಡಿಯೂರಪ್ಪ ಕಾಲದಲ್ಲಿ ಆಗಿದ್ದ ಪ್ಲಾನ್.ಇಂದು ಸಿಎಂ ಡಿಕೆಶಿ ಕೈಗೆತ್ತಿಕೊಂಡರು ಆದ್ರೆ ಅಡೆತಡೆ ಆಯ್ತು. ವಿರೋಧ ವ್ಯಕ್ತವಾಯಿತು.ರೆಡ್ ಜೋನ್ ಬಂತು.ಮುಖ್ಯಮಂತ್ರಿ ಅವರೇ ಟೌನ್ ಶಿಪ್ ಮಾಡಲು ಹೊರಟಿದ್ದಾರೆ ಅಂದ್ರೆ.ಮಂಡ್ಯ ಕೂಡ ಕಲರ್ ಫುಲ್ ಆಗಬೇಕು.ಗಣಿಗ ರವಿಕುಮಾರ್ ಸ್ಮಾರ್ಟ್ ಸಿಟಿ ಮಾಡಲು ಹೊರಟಿದ್ದಾರೆ.ಜನರ ಜೊತೆ ಮೊದಲು ಚರ್ಚಿಸಿ ನೋಡಿ ಮಾಡಿ. ಅವರ ಜೊತೆ ನಮ್ಮ ಸರ್ಕಾರ ಇರುತ್ತೆ ಎಂದು ತಿಳಿಸಿದರು.
ಸಂಬಂಧಿತ ಸುದ್ದಿಗಳು

ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ : ಡಾ.ವೈ.ಡಿ.ರಾಜಣ್ಣ
ವಿನಯ್ ದೊಡ್ಡಕೊಪ್ಪಲುಕೆ.ಆರ್.ನಗರ : ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ ಎಂದು ಜಿಲ್ಲಾ ಕನ್ನ…
◷ 24/11/2026
ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸಲು ವಿಶೇಷ ಕಾಳಜಿ ವಹಿಸಿ: ಭುವನೇಶ ಪಾಟೀಲ್
ಧಾರವಾಡ : ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಶಿಕ್ಷಣ ನೀಡುವುದಷ್ಟೇ ಶಿಕ್ಷಣ ಇಲಾಖೆಯ ಉದ್ದೇಶವಾಗಬಾರದು. ಅವರು…
◷ 24/11/2026
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನ ಸದ್ಬಳಕೆಗೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ: ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ
ಬಳ್ಳಾರಿ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ …
◷ 24/11/2026
ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ 1.17 ಕೋಟಿ ಕಾಣಿಕೆ ಸಂಗ್ರಹ
ಬಳ್ಳಾರಿ : ನಗರದ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಸೋಮವಾರ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು, ಒಟ್ಟು 1,17,87,9…
◷ 24/11/2026
