ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ : ಡಾ.ವೈ.ಡಿ.ರಾಜಣ್ಣ

ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕನ್ನಡ ಸಾಹಿತ್ಯ ಪರಿಷತ್ತು ಇಡೀ ಜಗತ್ತೇ ವಿಸ್ಮಯದಿಂದ ನೋಡುವ ಏಕೈಕ ಸಂಸ್ಥೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳವಾರ ನಡೆದ ನನ್ನಿಯರಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ೧೯೧೫ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಇಂದಿಗೂ ಕೂಡ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಮುಂದುವರೆದಿದೆ. ಶತಮಾನ ಕಳೆದರೂ ಅದೇ ಶಕ್ತಿಯನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವ ವಿಶ್ವದ ಏಕೈಕ ಸಂಸ್ಥೆಯಾಗಿದೆ ಎಂದರು.ಪರಿಷತ್ತು ಸಾಹಿತ್ಯ ಮತ್ತು ಸಂಸ್ಕೃತಿ ಸಂವರ್ಧನೆಗೊಳಿಸುವ ಉದ್ಧೇಶದಿಂದ ಆರಂಭವಾದ ಸಂಸ್ಥೆಯಾಗಿದ್ದು, ಇದು ೪.೪೦ ಲಕ್ಷ ಸದಸ್ಯರನ್ನು ಒಳಗೊಂಡಿದ್ದು, ಸಾಹಿತ್ಯ ಸಂವರ್ಧನೆಯ ದೃಷ್ಟಿಯಿಂದ ಆರಂಭವಾದ ಈ ಸಂಸ್ಥೆಯು ಇತ್ತೀಚೆಗೆ ಕನ್ನಡ ನಾಡಿನ ಗಡಿ ಸಮಸ್ಯೆ, ಕನ್ನಡಿಗರ ಸಮಸ್ಯೆಗಳ ಕಡೆಗೂ ಗಮನ ಹರಿಸಿ ಸರ್ಕಾರದ ಮುಂದಿಡುವ ನೈತಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಡಿಂಡಿಮ ಶಂಕರ್ ಮಾತನಾಡಿ ನವೆಂಬರ್ ೨೩ಕ್ಕೆ ನಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ೧೦ ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಕೃತಜ್ಞತಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಏಳು ಬೀಳುಗಳ ೧೦ ವರ್ಷದ ದಾರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ನನ್ನಿಂದ ಅಳಿಲು ಸೇವೆಯಾಗಿದೆ ಎಂದು ಭಾವಿಸಿದ್ದೇನೆ. ಮತ್ತಷ್ಟು ಮಾಡಬೇಕಿತ್ತು ಎಂಬ ಭಾವನೆ ಮನಸ್ಸಿನಲ್ಲಿ ಇನ್ನೂ ಉಳಿದಿದೆ ಎಂದರು.ನಾನು ಅಧ್ಯಕ್ಷನಾದ ಮೊದಲಿಗೆ ೧೬ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಕೆ.ಆರ್.ನಗರ ಪಟ್ಟಣದಲ್ಲಿ ೩೫ ವರ್ಷಗಳ ನಂತರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ಮೊದಲ ಬಾರಿಗೆ ಮೂರು ದಿನಗಳ ಕಾಲ ಎಲ್ಲರ ಸಹಕಾರದಿಂದ ಅತ್ಯಂತ ಅದ್ದೂರಿ ಮತ್ತು ಯಶಸ್ವಿಯಾಗಿ ನಡೆಯಿತು ಎಂದ ಅವರು ೧೦ ವರ್ಷಗಳ ಈ ಸುಧೀರ್ಘ ಪಯಣದಲ್ಲಿ ಸಾಹಿತ್ಯ ಸೇವೆಯ ಮುನ್ನಡೆಯಲ್ಲಿ ನನ್ನೊಂದಿಗೆ ನಿಂತವರು ಬಹಳಷ್ಟು ಜನರಿದ್ದು, ಅವರನ್ನೆಲ್ಲಾ ನೆನೆಯುವುದು ನನ್ನ ಕರ್ತವ್ಯವಾಗಿದೆ ಎಂದು ಮಾಹಿತಿ ನೀಡಿದರು.ಕಸಾಪ ಗೌರವಾಧ್ಯಕ್ಷ ಡಾ.ಡಿ.ನಟರಾಜು, ನಗರ ಘಟಕದ ಅಧ್ಯಕ್ಷ ಸಿ.ವಿ.ಮೋಹನಕುಮಾರ್, ಸಾಲಿಗ್ರಾಮ ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಪ್ರಧಾನಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಬಿ.ಎಲ್.ಮಹದೇವ್, ಕೋಶಾಧ್ಯಕ್ಷ ಕೆ.ಎಲ್.ಭಾಸ್ಕರ್, ಉಪಾಧ್ಯಕ್ಷರಾದ ರಾಮಕೃಷ್ಣ, ಕೆ.ಹೆಚ್.ಕೃಷ್ಣಯ್ಯ, ಹೋಬಳಿ ಘಟಕದ ಅಧ್ಯಕ್ಷ ರಾಜಣ್ಣ, ಜಿಲ್ಲಾ ಮಲೇರಿಯಾ ನಿರ್ಮೂಲನ ಅಧಿಕಾರಿ ಡಾ.ಪ್ರತಿಭಾ ನಟರಾಜ್, ಕಸಾಪ ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ರೋಟರಿ ಕ್ಲಬ್‌ನ ಅಧ್ಯಕ್ಷ ಕೆ.ಆರ್.ಪುರುಷೋತ್ತಮ್, ಕಾರ್ಯದರ್ಶಿ ಅಶೋಕ್‌ಕುಮಾರ್, ಮಾಜಿ ಅಧ್ಯಕ್ಷ ಟಿ.ಎನ್.ದಯಾನಂದ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಹೆಚ್.ಎಸ್.ಲೋಕೇಶ್, ಕೆ.ಪಿ.ಭಾರತಿ, ಜಿ.ಶೇಷಾದ್ರಿ, ಬಿಎಸ್‌ಎನ್‌ಎಲ್ ಕೃಷ್ಣಯ್ಯ, ಸೈಯದ್‌ರಿಜ್ವಾನ್, ರಾಮಶೆಟ್ಟಿ ಹಾಜರಿದ್ದರು.
ಸಂಬಂಧಿತ ಸುದ್ದಿಗಳು

ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸಲು ವಿಶೇಷ ಕಾಳಜಿ ವಹಿಸಿ: ಭುವನೇಶ ಪಾಟೀಲ್
ಧಾರವಾಡ : ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಶಿಕ್ಷಣ ನೀಡುವುದಷ್ಟೇ ಶಿಕ್ಷಣ ಇಲಾಖೆಯ ಉದ್ದೇಶವಾಗಬಾರದು. ಅವರು…
◷ 24/11/2026
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನ ಸದ್ಬಳಕೆಗೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ: ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ
ಬಳ್ಳಾರಿ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ …
◷ 24/11/2026
ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಹುಂಡಿಯಲ್ಲಿ 1.17 ಕೋಟಿ ಕಾಣಿಕೆ ಸಂಗ್ರಹ
ಬಳ್ಳಾರಿ : ನಗರದ ಕನಕದುರ್ಗಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಸೋಮವಾರ ಅತ್ಯಂತ ಪಾರದರ್ಶಕವಾಗಿ ನಡೆದಿದ್ದು, ಒಟ್ಟು 1,17,87,9…
◷ 24/11/2026
ಕೆಲಸಕ್ಕೆ ಬಾರದವರೆಂದು ಸಚಿವ ಕುಮಾರಸ್ವಾಮಿಯವರ ನಾಮಫಲಕ ತೆಗೆಸಿದ ʼ ಕೈʼ ಶಾಸಕ
ಮಂಡ್ಯ : ಕೆಲಸಕ್ಕೆ ಬಾರದವರೆಂದು ಹೆಚ್ಡಿಕೆ ನಾಮಫಲಕವನ್ನು ಕೆಡಿಪಿ ಸಭೆಯಲ್ಲಿ ಶಾಸಕ ಕದಲೂರು ಉದಯ್ ಅವರು ತೆಗೆಸಿದ ಘಟನೆ ನಡೆದಿದೆ. …
◷ 24/11/2026
