ತಿರುಪ್ಪರಂಕುಂದ್ರಂ ದೇವಾಲಯದ ಬೆಟ್ಟದಲ್ಲಿ ಇಂದು ಬೆಳಗಲಿದೆ ಕಾರ್ತಿಕ ದೀಪ : ಸ್ಥಳದಲ್ಲಿ ಸಿಆರ್ ಪಿಎಫ್ ಯೋಧರು

ಚೆನ್ನೈ: ಸುಪ್ರೀಂಕೋರ್ಟ್ ತಮಿಳುನಾಡಿನ ಮಧುರೈನ ತಿರುಪ್ಪರಂಕುಂದ್ರಂ ದೇವಾಲಯದ ಬೆಟ್ಟದ ಮೇಲಿರುವ ದೀಪತೂನ್ ಕಂಬದಲ್ಲಿ ಇಂದು ಕಾರ್ತಿಕ ದೀಪ ಬೆಳಗಿಸಲು ಆದೇಶ ನೀಡಿರುವ ಹಿನ್ನೆಲೆ ಸಿದ್ದತೆ ನಡೆಯುತ್ತಿದ್ದು,ಸ್ಥಳಕ್ಕೆ ಸಿಆರ್ಪಿಎಫ್ ಯೋಧರು ತೆರಳಿದ್ದಾರೆ.ನ. 20ರಂದು ನೀಡಿದ್ದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪದ ಮೇಲೆ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮತ್ತು ನ.28 ರಂದು ದೀಪತೂನ್ನಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ಮತ್ತು ಅದರಲ್ಲಿ ಭಕ್ತರು ಭಾಗಹಿಸಲು ಅನುಮತಿ ನೀಡಿದೆ. ದೇವಾಲಯದ ಭದ್ರತಾ ವ್ಯವಸ್ಥೆಯನ್ನು ತಕ್ಷಣವೇ ಕೇಂದ್ರ ಮೀಸಲು ಪೊಲೀಸ್ ಪಡೆ ವಹಿಸಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಟ್ರಸ್ಟಿ ಸಮಿತಿಯನ್ನು ರದ್ದುಗೊಳಿಸಿರುವ ನ್ಯಾಯಾಲಯ, ದೇವಾಲಯದ ಸಂಪ್ರದಾಯ ಮತ್ತು ವಿಧಿವಿಧಾನಗಳಿಗೆ ಅನುಗುಣವಾಗಿ ಆಡಳಿತ ನಡೆಸಲು ಇಬ್ಬರು ನ್ಯಾಯಾಧೀಶರನ್ನು ರಿಸೀವರ್‌ಗಳಾಗಿ ನೇಮಿಸಿದೆ. ಅಲ್ಲದೆ, ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್, ಪೊಲೀಸ್ ಮಹಾನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಒಟ್ಟು 15 ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ್ದು, ಡಿಸೆಂಬರ್ 15ರಂದು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.ನ್ಯಾಯಾಲಯದ ಆದೇಶ ಮತ್ತು ಅದರ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮಧುರೈ ಜಿಲ್ಲಾಧಿಕಾರಿ ಮದ್ರಾಸ್ ಹೈಕೋರ್ಟ್ ಮುಂದೆ ವಾಗ್ದಾನ ಮಾಡಿದ್ದರೂ, ನ. 24 ರಂದು ದೀಪತೂನ್ನಲ್ಲಿ ದೀಪ ಬೆಳಗಿಸಿಲ್ಲ ಎಂದು ಗಮನಿಸಿರುವ ಪೀಠ, ತನ್ನ ಹಿಂದಿನ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಗಮನಿಸಿತು.ಇದಕ್ಕೂ ಮೊದಲು, ನ್ಯಾ. ಅರವಿಂದ್ ಕುಮಾರ್ ನೇತೃತ್ವದ ಪೀಠವು, ನ. 24 ರಂದು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿತ್ತು. ಒಂದು ಬಾರಿ ಮಾತ್ರ ದೀಪ ಹಚ್ಚಲು ಅನುಮತಿ ನೀಡಲಾಗಿದ್ದು, ಇದು ಪೂರ್ವನಿದರ್ಶನವಾಗಿ ಕಾರ್ಯನಿರ್ವಹಿಸುವುದಿಲ್ಲ. ಅಥವಾ ಸ್ಥಳದ ಮಾಲೀಕತ್ವ ಅಥವಾ ಸಾಂಪ್ರದಾಯಿಕ ಧಾರ್ಮಿಕ ಹಕ್ಕುಗಳ ಕುರಿತಾದ ವ್ಯಾಪಕ ವಿವಾದಗಳನ್ನು ಇತ್ಯರ್ಥಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು
ಸಂಬಂಧಿತ ಸುದ್ದಿಗಳು

ಭಾರತೀಯ ನೌಕಾಪಡೆಯ ಭವಿಷ್ಯ ರೂಪಿಸುವಲ್ಲಿ ಕೆಡೆಟ್ಗಳ ಪಾತ್ರ ನಿರ್ಣಾಯಕ : ರಾಷ್ಟ್ರಪತಿ ದ್ರೌಪದಿ ಮುರ್ಮು
ಕಣ್ಣೂರು : ಸಶಸ್ತ್ರ ಪಡೆಗಳನ್ನು ಬಲಪಡಿಸುವಲ್ಲಿ ಮತ್ತು ಕಡಲ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತವು ಕ್ಷಿಪ್ರಗತಿಯಲ್ಲಿ ಪ್ರಗತಿ ಸ…
◷ 28/11/2026
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ : ಕ್ಷೇತ್ರ ಪುನರ್ವಿಂಗಡಣೆಗೆ (Delimitation) ಸಂಬಂಧಿಸಿದ ಹೊಸ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾ…
◷ 27/11/2026
ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಪ್ರಾದೇಶಿಕ ಧ್ವನಿ ಬಲಗೊಳ್ಳಲಿ : IORA ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕರೆ
ನವದೆಹಲಿ : ಭೂ-ರಾಜಕೀಯ ಬದಲಾವಣೆಗಳ ನಡುವೆ ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ (IORA) ತನ್ನ ಸಾಮೂಹಿಕ ಧ್ವನಿಯನ್ನು ಬಲಪಡಿಸಿಕೊಳ್ಳಬ…
◷ 27/11/2026
ಬಿಜಿಎಸ್ ಉತ್ಸವ–2026ನ್ನು ಉದ್ಘಾಟಿಸಿದ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಕೆಂಗೇರಿಯ ಬಿಜಿಎಸ್ ಗ್ರೌಂಡ್ನಲ್ಲಿ ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ 18ನೇ ಬಿಜಿಎಸ್ ಸಂಸ…
◷ 27/11/2026
