ಪೌರಕಾರ್ಮಿಕರಿಗೆ ನೇರ ವೇತನ ಪಾವತಿ, ಖಾಯಂ ನೇಮಕಾತಿಗೆ ಶೀಘ್ರ ಅನುಮೋದನೆ: ಸಿ.ಶಂಕರ್

ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ
ಉದ್ದೇಶದಿಂದ ಕಾರ್ಮಿಕರಿಗೆ ನೀಡುವ ವೇತನವನ್ನು ನೇರಪಾವತಿ ಮತ್ತು ಈ ವರೆಗೆ ಇರುವ ಎಲ್ಲಾ
ಕಾರ್ಮಿಕರಿಗು ಖಾಯಂಮಾತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ
ಮನವಿ ಸಲ್ಲಿಸಲಾಗಿದ್ದು ನಮ್ಮ ಸರ್ಕಾರ ಶೀಘ್ರದಲ್ಲೇ ಇದಕ್ಕೆ ಅನುಮೋಧನೆ ನೀಡಲಿದೆ ಎಂದು ರಾಜ್ಯ
ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ್ ಹೇಳಿದರು. ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ
ಸದಸ್ಯರೊಂದಿಗೆ ಕಾರ್ಮಿಕರ ಸಂವಾದ ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ನಮ್ಮ ಸರ್ಕಾರ ಪೌರಕಾರ್ಮಿಕರ ಅಭಿವೃದ್ಧಿಗೆ ಕಂಕಣ ಬಧ್ಧವಾಗಿದ್ದು ಅವರುಗಳಿಗೆ ಪ್ರತ್ಯೇಕ ಬಡಾವಣೆ
ನಿರ್ಮಾಣ ಮಾಡಲು ೫ ಎಕರೆ ಜಮೀನು ನೀಡುವಂತೆ ಆದೇಶ ಮಾಡಿದ್ದು ಇಲ್ಲಿನ ತಾಲೂಕು ಆಡಳಿತ ಕ್ರಮ
ವಹಿಸಬೇಕು ಇದರಿಂದ ಕನಿಷ್ಠ ೧೦೫ ಮಂದಿ ಕಾರ್ಮಿಕರಿಗೆ ವಸತಿ ಸೌಲಭ್ಯ ದೊರಯಲಿದೆ ಎಂದರು. ಕಾರ್ಮಿಕರಿಗೆ ಪ್ರತಿ
ತಿಂಗಳು ವೇತನ ಮಂಜೂರಾಗುತ್ತಿಲ್ಲ ಎಂಬ ದೂರುಗಳು
ಕೇಳಿ ಬಂದಿದ್ದು ಇದರ ಜತೆಗೆ ಇಎಸ್‌ಐ ಮತ್ತು ಪಿಎಫ್ ಭರಸಿಲ್ಲಾ ಅಲ್ಲದೇ ಪೌರ ಕಾರ್ಮಿಕರಿಗೆ
ಗುರುತಿನ ಚೀಟಿಯನ್ನು ನೀಡಿರುವುದಿಲ್ಲಾ ಈ ವಿಚಾರವನ್ನು ಮುಖ್ಯಾಧಿಕಾರಿಗಳು ಗಂಭೀರವಾಗಿ
ಪರಿಗಣಿಸಿ ನಿಯಮಾನುಸಾರ ಕಾರ್ಮಿಕರಿಗೆ ದೊರೆಯಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ನೀಡಬೇಕೆಂದು
ಸಲಹೆ ನೀಡಿದರು.
ಪುರಸಭೆಯ ಆರೋಗ್ಯ
ನೀರಿಕ್ಷರು ಪ್ರತಿದಿನವು ಪೌರಕಾರ್ಮಿಕರ ಆಹ್ವಾಲುಗಳನ್ನು ಆಲಿಸಿ ಆ ನಂತರ ಅವರುಗಳ ಹಾಜರಾತಿ
ಪಡೆದು ಕೆಲಸಕ್ಕೆ ನಿಯೋಜನೆ ಮಾಡಬೇಕು. ಈ ಕಾರ್ಯವನ್ನು ಇಲ್ಲಿನ ಆರೋಗ್ಯ ನಿರೀಕ್ಷಕ
ಎಸ್.ಪಿ.ರಾಜೇಂದ್ರಕುಮಾರ್ ಮಾಡುತ್ತಿಲ್ಲಾ ಎಂಬ ಗಂಬೀರ ಆರೋಪಗಳು ನೌಕರರಿಂದ ಕೇಳಿ ಬಂದಿದ್ದು ಇದರ
ಜತೆಗೆ ಇವರು ಪೌರಕಾಮೀಕರನ್ನು ತಮ್ಮ ಸ್ವಂತ ಜಮೀನಿನ ಕೆಲಸಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬ
ದೂರು ದಾಖಲಾತಿ ಸಮೇತ ಬಂದಿರುವುದರಿAದ ಇವರ ವಿರುದ್ದ
ಕ್ರಮಕ್ಕೆ ಮುಂದಾಗಬೇಕೆAದು ಅಧಿಕಾರಿಗಳಿಗೆ
ಸೂಚಿಸಿದರು. ಪೌರಕಾರ್ಮಿಕರಿಗೆ
ಮೇಸ್ತಿç ನೇಮಕಾತಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ್ ಸರ್ಕಾರ ಮತ್ತು ಆಯೋಗದ ನಿಯಮಾನುಸಾರ
ಪೌರಕಾರ್ಮಿಕರ ಸಭೆ ನಡೆಸಿ ನಿರ್ಣಯ ಮಾಡಿ ಹಿರಿತನದ ಸೇವೆ ಆಧಾರದ ಮೇಲೆ ನೇಮಕಾತಿ ಮಾಡಬೇಕು.
ಇದರಲ್ಲಿ ಲೋಪಕಂಡು ಬಂದಿದ್ದು ಮುಖ್ಯಾಧಿಕಾರಿಗಳು ತಮ್ಮ ಇಲಾಖೆಯ ಪೌರಕಾರ್ಮಿಕರ ಬಾಯಿ ಮುಚ್ಚಿಸುವ
ಕೆಲಸ ಮಾಡುವ ಬದಲು ನಿಯಮಾನುಸಾರ ನಿರ್ಣಯ ಮಾಡಿ ನೇಮಕಾತಿ ಮಾಡಬೇಕೆಂದು ತಾಖೀತು ಮಾಡಿದರು.
ಪೌರಕಾರ್ಮಿಕರಿಗಾಗಿ
ಸಫಾಯಿ ಕರ್ಮಚಾರಿ ಆಯೋಗದ ಜತೆಗೆ ನಿಗಮ ಮಂಡಳಿಯು ಇದ್ದು ನಿಗಮ ವತಿಯಿಂದ ಸಮಾಜ ಕಲ್ಯಾಣ ಇಲಾಖೆ
ನಿಮ್ಮಗಳ ಆರ್ಥಿಕ ಅಭಿವೃದ್ಧಿಗೆ ಸವಲತ್ತುಗಳನ್ನು ನೀಡಲಿದೆ. ಅದರಂತೆ ಆಯೋಗ ನಿಮ್ಮಗಳ ಹಕ್ಕುಗಳ
ರಕ್ಷಣೆ ಪಡೆಯಲು ಅವಕಾಶ ಕಲ್ಪಿಸುದ್ದು ಇದರ ಸದ್ಬಳಕ್ಕೆಯನ್ನು ತಾವೆಲ್ಲಾ ಪಡೆದುಕೊಂಡು ಆರ್ಥಿಕ
ಪ್ರಗತಿ ಸಾಧಿಸಬೇಕೆಂದು ಮನವಿ ಮಾಡಿದರು.
ನಿಗಮದಿಂದ
ಪೌರಕಾರ್ಮಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪೌರಕಾರ್ಮಿಕರು
ಹೆಚ್ಚು ವಾಸಿಸುವ ಬಡಾವಣೆಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕೆಂದು ಅಧಿಕಾರಿಗಳಿಗೆ
ಸೂಚಿಸಿದ ಸದಸ್ಯ ಸಿ.ಶಂಕರ್ ಪೌರಕಾಮಿಕರು ಕೂಡ ಪ್ರಾಮಾಣಿಕತೆಯಿಂದ ಸರ್ಕಾರದ ಕೆಲಸವನ್ನು
ನಿರ್ವಹಿಸಿ ಎಂದು ಕಿವಿ ಮಾತು ಹೇಳಿದರು. ಪುರಸಭಾ
ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಾತನಾಡಿ ನಾವು ಪೌರಕಾರ್ಮಿಕರ ಹಿತ ರಕ್ಷಣೆಗೆ ಬದ್ಧನಾಗಿದ್ದು
ಅವರುಗಳಿಗೆ ಸರ್ಕಾರದಿಂದ ಹಾಗೂ ನಮ್ಮ ಪುರಸಭೆಯ ವತಿಯಿಂದ ದೊರಕಬೇಕಾದ ಅನುಕೂಲಗಳನ್ನು ಸಕಾಲದಲ್ಲಿ
ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ವಚ್ಚತ ಸೇನಾನಿಗಳ ಹಿತ ನಮ್ಮಗೆ ಮೊದಲೆನೆ
ಆದ್ಯತೆಯಾಗಿದ್ದು ಅದಕ್ಕಾಗಿ ನಾವು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದಲ್ಲದೇ
ಈ ಹಿಂದೆ ಪುರಸಭೆಯ ಸದಸ್ಯರು ಮತ್ತು ನೌಕರರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ
ಮುಕ್ತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಪ್ರಭಾರ ಟಿಎಸ್‌ಡಬ್ಲೂö್ಯ ರಾಮಸ್ವಾಮಿ,
ಉಪತಹಸಿಲ್ಧಾರ್ ಶಶಿಕುಮಾರ್, ತಾಲೂಕು ಕಛೇರಿ ಶೀರಸ್ಥೆಧಾರ ವೆಂಕಟೇಶ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧಿಕಾರಿಗಳಾದ ರವಿನಂದನ್, ಕೆ.ಎಸ್.ಸಂದೇಶ್, ಪುರಸಭಾ ಆರೋಗ್ಯ ನಿರೀಕ್ಷ ಎಸ್.ಪಿ.ರಾಜೇಂದ್ರಕುಮಾರ್, ಇಂಜಿನಿಯರ್ ಸೌಮ್ಯ, ಲೆಕ್ಕಾಧಿಕಾರಿ ಸ್ವಪ್ನ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಂಜು0ಡ ಸೇರಿದಂತೆ ಮತ್ತಿತರು ಹಾಜರಿದ್ದರು.
ಸಂಬಂಧಿತ ಸುದ್ದಿಗಳು

ಅಗ್ನಿವೀರರ ಸೇವಾ ಅವಧಿ ವಿಸ್ತರಣೆ
ನವದೆಹಲಿ : ಕೇಂದ್ರ ಸರ್ಕಾರ ಅಗ್ನಿವೀರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ‘ಅಗ್ನಿಪಥ್' ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ …
◷ 04/11/2026
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ ಗಿಫ್ಟ್
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ತುಟ್ಟಿಭತ್ಯೆಯನ್ನು ಶೇ. 2.50…
◷ 04/11/2026
ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರೆ ಬಸ್ ಪ್ರಯಾಣ ದರ ಇಳಿಸಲು ಸಿದ್ಧ : ಸಿಎಂ ಡಿಕೆಶಿ
ಬೆಂಗಳೂರು : "ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದರೆ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ…
◷ 04/11/2026
ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ : ಸಚಿವ ಈಶ್ವರ ಖಂಡ್ರೆ
ಮೈಸೂರು : ರಾಜ್ಯದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10,000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡುವುದಾಗಿ ಪ್ರಕಟಿಸಿದ್ದು, …
◷ 04/11/2026
