ಮೈಸೂರು ಪಶ್ಚಿಮ ಆರ್ ಟಿಒ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ
ಐವರು ಏಜೆಂಟರು ಪತ್ತೆ

ಮೈಸೂರು : ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ ಆರ್ ಟಿ ಒ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.ಲೋಕಾಯುಕ್ತ ಇನ್ಸ್‌ಪೆಕ್ಟರ್ ಗಿರೀಶ್ ನೇತೃತ್ವದಲ್ಲಿ ಲೋಕಾಯುಕ್ತ ತಂಡ ಇಂದು ಮೈಸೂರು ಪಶ್ಚಿಮ ಆರ್ ಟಿಒ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಾರ್ವಜನಿಕರಿಂದ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.ದಾಳಿ ವೇಳೆ ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದ ಐವರು ಏಜೆಂಟರು ಪತ್ತೆಯಾಗಿದ್ದಾರೆ. ಕಚೇರಿಯ ಸಿಬ್ಬಂದಿಯಲ್ಲದ ಈ ಐವರು ಏಜೆಂಟರು, ಸಾರ್ವಜನಿಕರ ಕೆಲಸ ಮಾಡಿಕೊಡುವ ನೆಪದಲ್ಲಿ ಕಚೇರಿಯ ಒಳಗಡೆ ಓಡಾಡುತ್ತಾ, ಕಡತಗಳ ಕೆಲಸದಲ್ಲಿ ತೊಡಗಿಕೊಂಡಿದ್ದರು.ಲೋಕಾಯುಕ್ತ ಅಧಿಕಾರಿಗಳು ಐವರು ಏಜೆಂಟರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಅವರ ವಿವರಗಳನ್ನು ದಾಖಲಿಸಿಕೊಂಡಿದ್ದಾರೆ. ಕಚೇರಿಗೆ ಬರುವ ಸಾರ್ವಜನಿಕರಿಂದ ಏಜೆಂಟರು ಹಣ ಪಡೆದು ಕೆಲಸ ಮಾಡಿಕೊಡುತ್ತಾರಾ, ಕಚೇರಿ ಸಿಬ್ಬಂದಿ ಜೊತೆ ಏಜೆಂಟರಿಗೆ ಸಂಪರ್ಕ ಇದೆಯಾ ಎನ್ನುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.ಇದೇ ವೇಳೆ ಅಧಿಕಾರಿಗಳು ಕಚೇರಿಯ ಎಲ್ಲಾ ವಿಭಾಗಗಳಲ್ಲಿ ಬಾಕಿ ಉಳಿದಿದ್ದ ಎಲ್ಲಾ ಕಡತಗಳನ್ನು ಪರಿಶೀಲಿಸಿದರು. ಚಾಲನಾ ಪರವಾನಗಿ, ವಾಹನ ನೋಂದಣಿ, ಫಿಟ್ನೆಸ್ ಪ್ರಮಾಣಪತ್ರ, ಪರವಾನಗಿ ನವೀಕರಣ, ವರ್ಗಾವಣೆ ಸೇರಿದಂತೆ ಬಾಕಿ ಕಡತಗಳು ಏಕೆ ವಿಳಂಬವಾಗಿವೆ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಸಿಗುತ್ತಿದೆಯೇ, ಯಾವುದೇ ರೀತಿಯಲ್ಲಿ ಹಣ ವಸೂಲಿ ನಡೆಯುತ್ತಿದೆಯೇ ಎನ್ನುವ ಮಾಹಿತಿ ಸಂಗ್ರಹಿಸಿದರು.ಕಚೇರಿಯಲ್ಲಿದ್ದ ಸಿಬ್ಬಂದಿಯ ಹಾಜರಾತಿ, ಕಡತಗಳ ನಿರ್ವಹಣೆ, ಕಂಪ್ಯೂಟರ್ ದಾಖಲೆಗಳು ಹಾಗೂ ಸಾರ್ವಜನಿಕರ ಅರ್ಜಿಗಳ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ವಿವರವಾಗಿ ಪರಿಶೀಲನೆ ಮಾಡಿದರು.ಲೋಕಾಯುಕ್ತ ತಂಡ ಪರಿಶೀಲನೆ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದು, ಐವರು ಏಜೆಂಟರ ಬಗ್ಗೆ ಮತ್ತು ಬಾಕಿ ಕಡತಗಳ ವಿಳಂಬದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕಚೇರಿಯ ಒಳಗೆ ಏಜೆಂಟರ ಪ್ರವೇಶಕ್ಕೆ ಅವಕಾಶ ನೀಡಬಾರದು, ಸಾರ್ವಜನಿಕರಿಗೆ ಪಾರದರ್ಶಕವಾಗಿ ಮತ್ತು ಸಕಾಲದಲ್ಲಿ ಸೇವೆ ನೀಡಬೇಕು ಎಂದು ಅಧಿಕಾರಿಗಳು ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಬಂಧಿತ ವಿಡಿಯೊ / Watch video
ಸಂಬಂಧಿತ ಸುದ್ದಿಗಳು

ಹಳ್ಳಿಗುಗ್ಗು ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸಚಿವ ಹೆಚ್.ಡಿ ಕುಮಾರಸ್ವಾಮಿ ಹಳ್ಳಿ ಗುಗ್ಗು ಎಂಬ ಹೇಳಿಕೆಯನ್ನು ಮತ್ತೊಮ್ಮೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊ…
◷ 05/11/2026
ಕನ್ನಡ ನಾಮಫಲಕಗಳ ಅನಾವರಣ
ಬೆಂಗಳೂರು : ಇಂದು ವಿಧಾನಸೌಧದ ಸಚಿವ ಸಂಪುಟ ಸಭೆ ಕೊಠಡಿಯ ಕಾರಿಡಾರ್ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಳವಡಿಸಲಾಗಿರು…
◷ 05/11/2026
ಬಿಡಾಡಿ ದನಗಳ ಹಾವಳಿ : ವಾಹನ ಸವಾರರಿಗೆ ಸಂಚಾರದ ಕಿರಿಕಿರಿ
ಗುಂಡ್ಲುಪೇಟೆ : ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಮತ್…
◷ 05/11/2026
ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ : ಬಿಜೆಪಿ ಪ್ರತಿಭಟನೆ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೆಜ…
◷ 05/11/2026
