ಜಾಗತಿಕ AI ಹೂಡಿಕೆಯಲ್ಲಿ ಇಳಿಕೆ: ಭಾರತೀಯ ಮಾರುಕಟ್ಟೆಗಳಿಗೆ ಲಾಭವಾಗಬಹುದು : ಉದಯ್ ಕೊಟಕ್

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿನ ಹೂಡಿಕೆಯ ವೇಗ ಕಡಿಮೆಯಾದರೆ, ಭಾರತೀಯ ಶೇರು ಮಾರುಕಟ್ಟೆಗೆ ಹೊಸ ವಿದೇಶಿ ಬಂಡವಾಳ ಹರಿಯುವ ಸಾಧ್ಯತೆಯಿದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಹಾಗೂ ಹಿರಿಯ ಬ್ಯಾಂಕರ್ ಉದಯ್ ಕೊಟಕ್ ಅಭಿಪ್ರಾಯಪಟ್ಟಿದ್ದಾರೆ.ಭಾರತವು ತನ್ನದೇ ಆದ AI ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿದ್ದು, ಜಾಗತಿಕ ಹೂಡಿಕೆಯ ದಿಕ್ಕು ಬದಲಾಗುವುದು ಭಾರತಕ್ಕೆ ಅನುಕೂಲಕರವಾಗಲಿದೆ ಎಂದು ಅವರು ಹೇಳಿದ್ದಾರೆ.ವರ್ಚುವಲ್ ಸಮಾವೇಶವೊಂದರಲ್ಲಿ ಮಾತನಾಡಿದ ಕೊಟಕ್, ಅನೇಕ ಜಾಗತಿಕ ಸಂಸ್ಥೆಗಳು AI ಯೋಜನೆಗಳಿಗೆ ಹಣಕಾಸು ಒದಗಿಸಲು ಭಾರೀ ಪ್ರಮಾಣದ ಸಾಲ ಪಡೆದಿವೆ. ಇದರಿಂದ ಕೆಲವು ಕಂಪನಿಗಳ ಮೌಲ್ಯಮಾಪನ (Valuation) ಕೃತಕವಾಗಿ ಹೆಚ್ಚಾಗಿದೆ. ಒಂದು ವೇಳೆ ಈ ಟ್ರೆಂಡ್ ಉಲ್ಟಾ ಆದರೆ, ವಿದೇಶಿ ಹೂಡಿಕೆದಾರರು ಭಾರತದತ್ತ ಮುಖ ಮಾಡಲಿದ್ದಾರೆ ಎಂದು ಹೇಳಿದರು. ಜಾಗತಿಕ AI ಕಂಪನಿಗಳ ಶೇರುಗಳ ಮೇಲೆ ಒತ್ತಡವಿದ್ದರೂ, ಭಾರತೀಯ ಶೇರು ಮಾರುಕಟ್ಟೆಯು ಅಕ್ಟೋಬರ್ ಆರಂಭದ ಕುಸಿತದಿಂದ ಸುಮಾರು 10 ಪ್ರತಿಶತದಷ್ಟು ಚೇತರಿಸಿಕೊಂಡಿದೆ. ಇದೇ ಅವಧಿಯಲ್ಲಿ ಏಷ್ಯಾದ ತಂತ್ರಜ್ಞಾನ ಆಧಾರಿತ ಮಾರುಕಟ್ಟೆಗಳು ಶೇ. 7 ಕ್ಕಿಂತ ಹೆಚ್ಚು ಕುಸಿತ ಕಂಡಿವೆ.2026 ರಲ್ಲಿ ಇದುವರೆಗೆ ಜಾಗತಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ದಾಖಲೆಯ 29 ಬಿಲಿಯನ್ ಡಾಲರ್ ಹೊರತೆಗೆದಿದ್ದಾರೆ. ಭಾರತೀಯ ಶೇರುಗಳ ಹೆಚ್ಚಿನ ಮೌಲ್ಯಮಾಪನ, ಸೀಮಿತ AI ಹೂಡಿಕೆ ಅವಕಾಶಗಳು ಮತ್ತು ಏರುತ್ತಿರುವ ಇಂಧನ ಬೆಲೆಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಭೌಗೋಳಿಕ-ರಾಜಕೀಯ ಅನಿಶ್ಚಿತತೆ ಹಾಗೂ ವಿದೇಶಿ ಹೂಡಿಕೆದಾರರ ಸತತ ಮಾರಾಟದ ನಡುವೆಯೂ ದೇಶೀಯ ಹೂಡಿಕೆದಾರರ ಧೈರ್ಯ ಭಾರತೀಯ ಮಾರುಕಟ್ಟೆಗೆ ಬಲ ನೀಡಿದೆ. ಇತ್ತೀಚಿನ ಕುಸಿತದ ನಂತರ, 6 ರಿಂದ 12 ತಿಂಗಳ ಹಿಂದಕ್ಕೆ ಹೋಲಿಸಿದರೆ ಭಾರತೀಯ ಶೇರುಗಳ ಬೆಲೆ ಹದಕ್ಕೆ ಬಂದಿದೆ.ಅಲ್ಪಾವಧಿಯ ಮಾರುಕಟ್ಟೆಯ ಏರಿಳಿತಗಳ ಬೆನ್ನು ಹತ್ತದೆ, ಮಧ್ಯಮ ಅವಧಿಯ ಹೂಡಿಕೆ ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಕಂಪನಿಗಳು ಮತ್ತು ಅಪಾಯ ನಿರ್ವಹಣೆ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಕೊಟಕ್ ಹೂಡಿಕೆದಾರರಿಗೆ ಕಿವಿಮಾತು ಹೇಳಿದ್ದಾರೆ.ಗುರುವಾರ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಭಾರೀ ಜಿಗಿತ ಕಂಡುಬಂದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 2 ಕ್ಕಿಂತ ಹೆಚ್ಚು ಏರಿಕೆ ಕಂಡು ಕ್ರಮವಾಗಿ 79,465.03 ಮತ್ತು 24,579.90 ರ ಗರಿಷ್ಠ ಮಟ್ಟಕ್ಕೆ ತಲುಪಿವೆ. ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ ಮತ್ತು ಅಮೆರಿಕದ ಮಧ್ಯಂತರ ಚುನಾವಣೆ ಫಲಿತಾಂಶಗಳು ಈ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಸಂಬಂಧಿತ ಸುದ್ದಿಗಳು

ಅಗ್ನಿವೀರರ ಸೇವಾ ಅವಧಿ ವಿಸ್ತರಣೆ
ನವದೆಹಲಿ : ಕೇಂದ್ರ ಸರ್ಕಾರ ಅಗ್ನಿವೀರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ‘ಅಗ್ನಿಪಥ್' ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ …
◷ 04/11/2026
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ ಗಿಫ್ಟ್
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ತುಟ್ಟಿಭತ್ಯೆಯನ್ನು ಶೇ. 2.50…
◷ 04/11/2026
ಭಾರತದ ಸೇವಾ ವಲಯಕ್ಕೆ ಹೊಸ ಮೆರಗು : ಅಕ್ಟೋಬರ್ ನಲ್ಲಿ ಪಿಎಂಐ 55.8 ಕ್ಕೆ ಏರಿಕೆ
ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಮತ್ತು ಹೊಸ ಆರ್ಡರ್ಗಳ ಬೆಂಬಲದಿಂದಾಗಿ ಭಾರತದ ಸೇವಾ ವಲಯವು ಅಕ್ಟೋಬರ್ ತಿಂಗಳಿನ…
◷ 04/11/2026
ಭಾರತೀಯ ರೈಲ್ವೆಯಿಂದ ಸಾರ್ವಕಾಲಿಕ ದಾಖಲೆ : ಅಕ್ಟೋಬರ್ ನಲ್ಲಿ 145.07 ಮಿಲಿಯನ್ ಟನ್ ಸರಕು ಸಾಗಣೆ
ನವದೆಹಲಿ: ಭಾರತೀಯ ರೈಲ್ವೆಯು ಅಕ್ಟೋಬರ್ 2026 ರಲ್ಲಿ ಸಾರ್ವಕಾಲಿಕ ದಾಖಲೆಯ 145.07 ಮಿಲಿಯನ್ ಟನ್ (MT) ಸರಕು ಸಾಗಣೆ (Freight Loa…
◷ 04/11/2026
