ಬೆಂಗಳೂರು : ಇಲ್ಲಿನ  ಫ್ರೀಡಂ ಪಾರ್ಕ್‌ನಲ್ಲಿ ಇಂದು 'ಇಂಡಿಯಾ' ಒಕ್ಕೂಟದ ಪಕ್ಷಗಳು ಕರೆ ನೀಡಿದ್ದ "ಮತ ಉಳಿಸಿ-ದೇಶ ಉಳಿಸಿ" (ವೋಟ್ ಬಚಾವೋ-ದೇಶ್‌ ಬಚಾವೋ) ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ, ಸಂವಿಧಾನದ ಆಶಯಗಳು ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ಪರವಾಗಿ ಬಲವಾದ ಧ್ವನಿ ಎತ್ತಿದರು. ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಪ್ರತಿಯೊಂದು ಮತವೂ ಜನರ ಅಧಿಕಾರದ ಪ್ರತೀಕ. ಮತದಾನದ ಹಕ್ಕಿನ ಪಾವಿತ್ರ್ಯವನ್ನು ಕಾಪಾಡುವುದು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ನಮ್ಮೆಲ್ಲರ ಜವಾಬ್ದಾರಿ. ಈ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರ ಎಂದು ಇದೇ ವೇಳೆ ತಿಳಿಸಿದರು.ಪ್ರತಿಭಟನೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ  ಬಿ.ಕೆ.ಹರಿಪ್ರಸಾದ್‌, ಎಐಸಿಸಿ ವೀಕ್ಷಕ ಪಲ್ಲಂ ರಾಜು, ಎಐಸಿಸಿ ಕಾರ್ಯದರ್ಶಿ  ಗೋಪಿನಾಥ್ ಪಳನಿಯಪ್ಪನ್, ರೈತ ಸಂಘದ   ವೀರಸಂಗಯ್ಯ,   ಪ್ರಕಾಶ್ ಕೆ., ಸಿಪಿಐನ   ಸಾತಿ ಸುಂದರೇಶ್, ಸಿಪಿಐ (ಎಂಎಲ್) ಲಿಬರೇಷನ್‌ನ   ಕ್ಲಿಫ್ಟನ್ ರೊಸಾರಿಯೊ, ನಟ ಹಾಗೂ ಸಾಮಾಜಿಕ ಹೋರಾಟಗಾರ   ಪ್ರಕಾಶ್‌ ರಾಜ್‌, ಸಿಪಿಐ(ಎಂ) ಸಂಘಟನೆಯ   ಕೆ. ನೀಲಾ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.