ಕನ್ನಡ ನಾಮಫಲಕಗಳ ಅನಾವರಣ

ಬೆಂಗಳೂರು : ಇಂದು ವಿಧಾನಸೌಧದ ಸಚಿವ ಸಂಪುಟ ಸಭೆ ಕೊಠಡಿಯ ಕಾರಿಡಾರ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಳವಡಿಸಲಾಗಿರುವ ಕನ್ನಡ ನಾಮಫಲಕಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅನಾವರಣಗೊಳಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಈ ಸಂದರ್ಭದಲ್ಲಿ ಮಾತನಾಡಿ, ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿರುವ ವಿಧಾನಸೌಧವು ಕೇವಲ ಆಡಳಿತದ ಕಟ್ಟಡವಲ್ಲ. ಅದು ಕನ್ನಡ ನಾಡಿನ ಸ್ವಾಭಿಮಾನ, ಇತಿಹಾಸ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವೂ ಹೌದು. ಇಂತಹ ಜನರ ಅರಮನೆಯ ಆಯ್ದ ಸ್ಥಳಗಳಲ್ಲಿ ಕನ್ನಡದ ಮಹತ್ವದ ಚಿಂತನೆಗಳು ಮತ್ತು ಮೌಲ್ಯಗಳನ್ನು ಸಾರುವ ನುಡಿ ಫಲಕಗಳನ್ನು ಅಳವಡಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಆಡಳಿತ ಕೇಂದ್ರದಲ್ಲಿ ಕನ್ನಡದ ಧ್ವನಿ ನಿರಂತರವಾಗಿ ಮೊಳಗಬೇಕೆಂಬ ಆಶಯ ಈ ಯೋಜನೆಯ ಹಿಂದಿದೆ ಎಂದರು.ಕಲ್ಲಿನಲ್ಲಿ ಕೆತ್ತಿದ ಮಹಾಕಾವ್ಯದಂತಿರುವ ಜನರ ಅರಮನೆಯ ಆಯ್ದ 110 ಸ್ಥಳಗಳಲ್ಲಿ ಕನ್ನಡದ ನುಡಿಫಲಕಗಳನ್ನು ಅಳವಡಿಸಲಾಗಿದೆ. ಪಂಪ, ಅಲ್ಲಮ, ಬಸವಣ್ಣ, ಕುವೆಂಪು, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಸಿದ್ದಲಿಂಗಯ್ಯ, ಜಯದೇವಿತಾಯಿ ಲಿಗಾಡೆ, ಆರ್.ಕಲ್ಯಾಣಮ್ಮ ಸೇರಿದಂತೆ 55 ಹಿರಿಯ ಸಾಹಿತಿಗಳು, ಚಿಂತಕರು ಹಾಗೂ ಮಹನೀಯರ ಬರಹಗಳಿಂದ ಈ ಘೋಷವಾಕ್ಯಗಳನ್ನು ಆಯ್ಕೆ ಮಾಡಿದೆ. ಇವು ಕೇವಲ ಅಲಂಕಾರಿಕ ಫಲಕಗಳಲ್ಲ. ಕನ್ನಡ ನಾಡಿನ ಚಿಂತನೆ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂದೇಶಗಳಾಗಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ರಿಜ್ವಾನ್ ಅರ್ಷದ್, ಹೆಚ್.ಸಿ.ಬಾಲಕೃಷ್ಣ, ಟಿ.ರಘುಮೂರ್ತಿ, ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿಗಳು

ಹಳ್ಳಿಗುಗ್ಗು ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಸಚಿವ ಹೆಚ್.ಡಿ ಕುಮಾರಸ್ವಾಮಿ ಹಳ್ಳಿ ಗುಗ್ಗು ಎಂಬ ಹೇಳಿಕೆಯನ್ನು ಮತ್ತೊಮ್ಮೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊ…
◷ 05/11/2026
ಬಿಡಾಡಿ ದನಗಳ ಹಾವಳಿ : ವಾಹನ ಸವಾರರಿಗೆ ಸಂಚಾರದ ಕಿರಿಕಿರಿ
ಗುಂಡ್ಲುಪೇಟೆ : ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಮತ್…
◷ 05/11/2026
ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ : ಬಿಜೆಪಿ ಪ್ರತಿಭಟನೆ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೆಜ…
◷ 05/11/2026
ಜಾಗತಿಕ AI ಹೂಡಿಕೆಯಲ್ಲಿ ಇಳಿಕೆ: ಭಾರತೀಯ ಮಾರುಕಟ್ಟೆಗಳಿಗೆ ಲಾಭವಾಗಬಹುದು : ಉದಯ್ ಕೊಟಕ್
ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿನ ಹೂಡಿಕೆಯ ವೇಗ ಕಡಿಮೆಯಾದರೆ, ಭಾರತೀಯ ಶೇರು ಮಾರುಕಟ್ಟೆಗೆ …
◷ 05/11/2026
