ಮುಂಬೈ:  ಬ್ರಿಟನ್ ರಾಜಕುಮಾರ ವಿಲಿಯಂ ಅವರು ಸ್ಥಳೀಯ ಬಾಲಕಿಯೊಬ್ಬಳು ಎಸೆದ ಚೆಂಡಿಗೆ ರಾಜಕುಮಾರ ವಿಲಿಯಂ ಕ್ಲೀನ್ ಬೌಲ್ಡ್ ಆದರು. ರಾಜಕುಮಾರಿ ಕೇಟ್ ಮಿಡಲ್ಟನ್  ಕ್ರಿಕೆಟ್‌ ದಿಗ್ಗಜ   ಸಚಿನ್ ಜೊತೆ   ಗಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಚಿನ್ ತಮ್ಮ ಎಂದಿನ ಶೈಲಿಯಲ್ಲಿ ಅದ್ಭುತ ಹೊಡೆತಗಳನ್ನು ಬಾರಿಸಿ ಗಮನ ಸೆಳೆದರು. ರಾಜಕುಮಾರಿ ಕೇಟ್ ಕೂಡ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಆಟದ ಸಂಭ್ರಮದಲ್ಲಿ ಪಾಲ್ಗೊಂಡರು.ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ರಾಜಕುಮಾರಿ ಕೇಟ್ ಸದ್ಯ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಸೋಮವಾರ ಮುಂಬೈಗೆ ಆಗಮಿಸಿದ ಈ ರಾಜಮನೆತನದ ಜೋಡಿ, ನಗರದ ಬೀದಿಗಳಲ್ಲಿ ಸುತ್ತಾಡಿ ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ಜನಜೀವನದ ಅನುಭವ ಪಡೆದುಕೊಂಡರು. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಅವರ ಜೊತೆಗಿದ್ದರು. ಮೂವರೂ ಮುಂಬೈನ ಬೀದಿಗಳಲ್ಲಿ ಸುತ್ತಾಡುತ್ತಾ ಸ್ಥಳೀಯ ಆಹಾರವನ್ನು ಸವಿದರು. ಭಾರತದ ಅತ್ಯಂತ ಹಳೆಯ  ಸ್ಟುಡಿಯೋಗಳಲ್ಲಿ ಒಂದಾದ ಹ್ಯಾಮಿಲ್ಟನ್ ಸ್ಟುಡಿಯೋ ಹೊರಭಾಗದಲ್ಲೂ ಕಾಣಿಸಿಕೊಂಡರು. ಬ್ರಿಟನ್‌ನ ಭವಿಷ್ಯದ ರಾಜ ಮತ್ತು ರಾಣಿಯಾಗಲಿರುವ ವಿಲಿಯಂ ಹಾಗೂ ಕೇಟ್ ಅವರಿಗೆ ಭಾರತದ ಕ್ರೀಡಾ ಲೋಕದ ಹೆಮ್ಮೆಯ ತಾರೆ ಸಚಿನ್ ಸಾಥ್ ನೀಡಿದ್ದು ವಿಶೇಷವಾಗಿತ್ತು.