ಸಿನಿಮಾ ಬಿಡುಗಡೆಗೆ ಕಾಣದ ಕೈಯಿಂದ ಅಡ್ಡಿಯಾಗಿದೆ : ನಟ ಶಶಿಕುಮಾರ್ ಅಸಮಾಧಾನ!

ಮಂಡ್ಯ: ರಾಜ್ಯಾದ್ಯಂತ ರಾಶಿ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ರಾಶಿ ಚಿತ್ರ ತಂಡದಿಂದ ಥಿಯೇಟರ್ ವಿಸಿಟ್ ನಡೆದಿದ್ದು,ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ನಟ ಶಶಿಕುಮಾರ್ ಅವರು ಪುತ್ರ ನಟ ಆದಿತ್ಯ ಶಶಿಕುಮಾರ್ ಜೊತೆ ಭೇಟಿ ನೀಡಿದರು. ಮಂಡ್ಯದ ಮಹಾವೀರ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ ಶಶಿಕುಮಾರ್ ಅಭಿಮಾನಿಗಳ ಜೊತೆ ಸಂಭ್ರಮಾಚರಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ ಪುಷ್ಪಾರ್ಚನೆ ಸಲ್ಲಿಸಿದರು. ಸಿನಿಮಾ ಸಕ್ಸಸ್ ಬಗ್ಗೆ ನಟ ಅದಿತ್ಯ ಸಂತಸ ವ್ಯಕ್ತಪಡಿಸಿದರು. ನಟ ಆದಿತ್ಯ ಜೊತೆ ವಿನೋದ್ ಗೊಬ್ಬರ ಗಾಲ, ಸೇರಿ ಕಾಂಗ್ರೆಸ್ ಮುಖಂಡ ಚಿದಂಬರ್ ಸಾಥ್ ನೀಡಿದರು.ಈ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟ ಶಶಿಕುಮಾರ್ ಪುತ್ರನ ಸಿನಿಮಾ ಬಿಡುಗಡೆಯಲ್ಲಿ ರಾಜಕಾರಣ ನಡೆದಿದೆ. ಸಿನಿಮಾ ಬಿಡುಗಡೆಗೆ ಕಾಣದ ಕೈಯಿಂದ ಅಡ್ಡಿಯಾಗಿದೆ. ಥಿಯೇಟರ್ ಸೆಟಪ್ ನಲ್ಲಿ ಮೋಸ ಅನ್ಯಾಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಥಿಯೇಟರ್ ನಲ್ಲಿ ಬುಕ್ ಆಗಿದ್ದರೂ ಚಿತ್ರಮಂದಿರಗಳು ಬೇರೆ ಸಿನಿಮಾ ಹಾಕಿವೆ. ತುಂಬಾ ನೋವಾಗುತ್ತಿದೆ. ಸಿನಿಮಾ ಬಿಡುಗಡೆಯಲ್ಲಿ ರಾಜಕಾರಣ ಮಾಡ್ತಿದ್ದಾರೆ.ಮಂಡ್ಯದಲ್ಲಿ ಸಾಕಷ್ಟು ಸಿನಿಮಾ ಸಕ್ಸಸ್ ಕಂಡಿದೆ. ರಾಶಿ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಮಂಡ್ಯ ಜನರು ನನ್ನ ಪ್ರೀತಿಯ ಜನರು. ನಮ್ಮ ಸಿನಿಮಾ ನಿಗದಿ ಆಗಿದ್ದರೂ ಬೇರೆ ಸಿನಿಮಾ ಹಾಕಿದ್ದಾರೆ. ಕನ್ನಡಕ್ಕೆ ಆದ್ಯತೆ ಕೊಡದೆ ಅನ್ಯ ಭಾಷೆಗೆ ಆದ್ಯತೆ ನೀಡಿದ್ದಾರೆ. ತುಂಬಾ ಅನ್ಯಾಯ ಆಗಿದೆ.ನಾನು ಎಂಪಿ ಆಗಿದ್ದ ಚಿತ್ರದುರ್ಗದಲ್ಲೇ ತೆಲಗು ಸಿನಿಮಾ ಹಾಕಿದ್ದಾರೆ. ಇದು ರಾಜಕೀಯ ಅಲ್ವಾ, ಇದು ಅನ್ಯಾಯ. ಇದರ ಬಗ್ಗೆ ಹೋರಾಟ ಮಾಡ್ತೇನೆ. ನಮ್ಮವರೇ ನಮಗೆ ಶತ್ರು ಆಗಿದ್ದಾರೆ. ಕನ್ನಡ ಸಿನಿಮಾಗೆ ಬೆಲೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಸುದ್ದಿಗಳು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಉಪೇಂದ್ರ ಅಣ್ಣನ ಮಗ!
ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಕಳೆದ ಒಂದು ವಾರದಿಂದ ಸಂಭ್ರಮದ ವಾತಾವರಣ ಮನೆಮಾಡಿದ್ದು, ಉಪೇಂದ್ರ ಅವರ ಸಹೋ…
◷ 16/11/2026
ಮೂರು ದಿನಗಳ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ
ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ʼಸಿನಿ ಸಂ…
◷ 14/11/2026
1000 ಕೋಟಿಯತ್ತ ದಾಪುಗಾಲಿಟ್ಟ `ರಾಮಾಯಣ ಭಾಗ1’
ಮುಂಬೈ : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ನಿತೇಶ್ ತಿವಾರಿ ನಿರ್ದೇಶನದ `ರಾಮಾಯಣ’ ಬಾಕ್ಸ್ ಆಫೀಸ್ ಭರ್ಜರಿ…
◷ 12/11/2026
13 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಪವನ್ ಕಲ್ಯಾಣ್!
ಹೈದ್ರಾಬಾದ್ : ಖ್ಯಾತ ಚಲನಚಿತ್ರ ನಟ, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕೊನಿಡೇ…
◷ 10/11/2026
