ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತೆ ಸೌಮ್ಯಗೆ ಸನ್ಮಾನ

ಬೆಂಗಳೂರು : ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ ಟಿ12/ಟಿ13 (T12/T13) ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿರುವ ಸೌಮ್ಯ ಅವರನ್ನು ಹಾಗೂ ಅವರ ತರಬೇತುದಾರರಾದ ವಿಕ್ರಮ್ ಜಿ. ಮತ್ತು ರೋಷನ್ ಅಗ್ನಿ ಶ್ರೀಧರ್ ಅವರನ್ನು ಸಚಿವ ಯು.ಟಿ.ಖಾದರ್ ಸನ್ಮಾನಿಸಿ, ಅಭಿನಂದಿಸಿದರು.ಸೌಮ್ಯ ಅವರ ಈ ಅಮೋಘ ಸಾಧನೆಯ ಹಿಂದೆ ವರ್ಷಗಳ ಕಠಿಣ ಪರಿಶ್ರಮ, ದೃಢನಿಶ್ಚಯ, ಛಲ ಮತ್ತು ಆತ್ಮವಿಶ್ವಾಸವಿದೆ. ನಮ್ಮ ಪ್ಯಾರಾ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹ ದೊರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಸೌಮ್ಯ ಅವರ ಗೆಲುವು ಅತ್ಯುತ್ತಮ ನಿದರ್ಶನವಾಗಿದೆ. ಅವರ ಕ್ರೀಡಾ ಪಯಣವನ್ನು ರೂಪಿಸುವಲ್ಲಿ ತರಬೇತುದಾರರು ತೋರಿದ ಬದ್ಧತೆ ಮತ್ತು ಸಮರ್ಪಣಾ ಮನೋಭಾವವೂ ಅಷ್ಟೇ ಶ್ಲಾಘನೀಯ.ಸೌಮ್ಯ ಅವರ ಈ ಯಶಸ್ಸು ನಮ್ಮ ರಾಜ್ಯದ ಯುವಜನತೆಗೆ, ವಿಶೇಷವಾಗಿ ವಿಶೇಷ ಚೇತನ ಮಕ್ಕಳಿಗೆ ದೊಡ್ಡ ಸ್ಫೂರ್ತಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರೀಡಾಕೂಟಗಳಲ್ಲೂ ಅವರಿಗೆ ನಿರಂತರ ಯಶಸ್ಸು ಸಿಗಲಿ ಮತ್ತು ಮುಂಬರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಕೀರ್ತಿ ತರುವಂತಾಗಲಿ ಎಂದು ಸಚಿವರು ಶುಭಹಾರೈಸಿದರು.
ಸಂಬಂಧಿತ ಸುದ್ದಿಗಳು

ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಯುಜ್ವೇಂದ್ರ ಚಹಲ್
ಇಂದೋರ್ : ಭಾರತದ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಟಿ20 ಕ್ರಿಕೆಟ್ನಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚು…
◷ 19/11/2026
ಸಿಎಸ್ ಕೆ ಟೀಮ್ ಮೆಂಟರ್ ಆಗಿ ಧೋನಿ!
ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಕ್ರಿಕೆಟಿಗ ಎಂ.ಎಸ್. ಧೋನಿ ನಿವೃತ್ತರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹೊ…
◷ 17/11/2026
ಬಾಲಕಿ ಎಸೆದ ಚೆಂಡಿಗೆ ಕ್ಲೀನ್ ಬೌಲ್ಡ್ ಆದ ಬ್ರಿಟನ್ ರಾಜಕುಮಾರ !
ಮುಂಬೈ: ಬ್ರಿಟನ್ ರಾಜಕುಮಾರ ವಿಲಿಯಂ ಅವರು ಸ್ಥಳೀಯ ಬಾಲಕಿಯೊಬ್ಬಳು ಎಸೆದ ಚೆಂಡಿಗೆ ರಾಜಕುಮಾರ ವಿಲಿಯಂ ಕ್ಲೀನ್ ಬೌಲ್ಡ್ ಆದರು. ರಾಜಕು…
◷ 16/11/2026
ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಮರು ಆಯ್ಕೆ ; ವಿಶ್ವಾಸ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಕೆ
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರು ಎರಡನೇ ಅವಧಿಗೆ ಅವಿರೋಧವಾಗಿ ಮತ್ತು ಸರ್ವಾನು…
◷ 16/11/2026
