ಚೆನ್ನೈ :   ಇಂಡಿಯನ್ ಪ್ರೀಮಿಯರ್ ಲೀಗ್‌ ನಿಂದ ಕ್ರಿಕೆಟಿಗ ಎಂ.ಎಸ್. ಧೋನಿ ನಿವೃತ್ತರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. 2027ರ ಐಪಿಎಲ್‌ ನಿಂದ ಅವರು ಈ ಫ್ರಾಂಚೈಸಿಯ 'ಟೀಮ್ ಮೆಂಟರ್'ಆಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡದ ಡಗ್‌ಔಟ್‌ನಲ್ಲಿ ಅವರ ಪಾತ್ರ ಬದಲಾಗಲಿದ್ದರೂ, ಐದು ಬಾರಿ ಚಾಂಪಿಯನ್ ಆಗಿರುವ ಈ ತಂಡದೊಂದಿಗೆ ಅವರ ಬಾಂಧವ್ಯವು ಎಂದಿನಂತೆಯೇ ಬಲವಾಗಿ ಮುಂದುವರಿಯಲಿದೆ.ಸಿಎಸ್‌ ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು  ಮಾತನಾಡಿ ಭಾರತದ ಮಾಜಿ ನಾಯಕರಾದ ಧೋನಿ ಯಾವಾಗಲೂ ತಂಡದ ಅಸ್ತಿತ್ವದ ಕೇಂದ್ರಬಿಂದುವಾಗಿಯೇ ಉಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಐಪಿಎಲ್‌ನಲ್ಲಿ ಧೋನಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ, 2024 ರ ಋತುವಿಗೆ ಮುಂಚಿತವಾಗಿ ನಾಯಕತ್ವ ತ್ಯಜಿಸುವ ಮೊದಲು ಫ್ರಾಂಚೈಸಿಯನ್ನು ಐದು ಬಾರಿ ಚಾಂಪಿಯನ್‌ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಒಂದೂ ಪಂದ್ಯವನ್ನು ಆಡರಲಿಲ್ಲ.ಹಳದಿ ಜೆರ್ಸಿ ಅವರ ಜೀವನದ ಒಂದು ಭಾಗವಾಗಿ ಉಳಿಯುತ್ತದೆ, ಆದರೆ ಧೋನಿ ಕ್ರೀಸ್‌ನಲ್ಲಿ ಪಂದ್ಯಗಳನ್ನು ಮುಗಿಸಿ, ಸ್ಟಂಪ್‌ಗಳ ಹಿಂದೆ ಗ್ಲೌಸ್‌ಗಳನ್ನು ಹಿಡಿದು ಸಿಎಸ್‌ ಕೆ  ತಂಡದ ಜವಾಬ್ದಾರಿಯನ್ನು ಮುನ್ನಡೆಸುವ ದೃಶ್ಯವು ಈಗ ಸ್ಮರಣೀಯವಾಗಿರಲಿದೆ.