Friday, May 1, 2026
Google search engine

Homeಕ್ರೀಡೆಆರೆಂಜ್ ಕ್ಯಾಪ್ ರೇಸ್‌ನಲ್ಲಿ ಗಿಲ್‌ಗಿಂತ ಮುಂದಿರುವ ವಿರಾಟ್ ಕೊಹ್ಲಿ; ಪರ್ಪಲ್ ಕ್ಯಾಪ್ ಯಾರ ಬಳಿ..?

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಗಿಲ್‌ಗಿಂತ ಮುಂದಿರುವ ವಿರಾಟ್ ಕೊಹ್ಲಿ; ಪರ್ಪಲ್ ಕ್ಯಾಪ್ ಯಾರ ಬಳಿ..?

ಅಹಮದಾಬಾದ್‌ : ಗುರುವಾರ ನಡೆದ ಐಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದ ನಂತರ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಕುತೂಹಲಕಾರಿ ಬದಲಾವಣೆಗಳಾಗಿವೆ.

ಆರೆಂಜ್ ಕ್ಯಾಪ್ ಯಾರ ವಶದಲ್ಲಿ ..?

ಪ್ರಸ್ತುತ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಆಟಗಾರರ ಅಬ್ಬರ ಮುಂದುವರಿದಿದೆ.

ಅಭಿಷೇಕ್ ಶರ್ಮಾ (SRH): 9 ಪಂದ್ಯಗಳಲ್ಲಿ 425 ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ (ಆರೆಂಜ್ ಕ್ಯಾಪ್ ಇವರ ಬಳಿಯಿದೆ).

ಹೆನ್ರಿಚ್ ಕ್ಲಾಸನ್ (SRH): 9 ಪಂದ್ಯಗಳಲ್ಲಿ 414 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ವೈಭವ್ ಸೂರ್ಯವಂಶಿ (RR): ಕೇವಲ 15 ವರ್ಷದ ಈ ಪ್ರತಿಭಾನ್ವಿತ ಆಟಗಾರ 9 ಪಂದ್ಯಗಳಲ್ಲಿ 400 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ (RCB): ಗುಜರಾತ್ ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲಿ 28 ರನ್ ಗಳಿಸಿದ ಕೊಹ್ಲಿ, ಒಟ್ಟು 9 ಪಂದ್ಯಗಳಲ್ಲಿ 379 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಶುಭಮನ್ ಗಿಲ್ (GT): ಗುಜರಾತ್ ನಾಯಕ ಗಿಲ್ 8 ಪಂದ್ಯಗಳಲ್ಲಿ 373 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಕೊಹ್ಲಿಗಿಂತ ಕೇವಲ 6 ರನ್ ಹಿಂದಿದ್ದಾರೆ.

ಪರ್ಪಲ್ ಕ್ಯಾಪ್ ಯಾರ ಕೈಯ್ಯಲ್ಲಿ..?

ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ RCB ತಂಡದ ಬೌಲರ್ ಅಗ್ರಸ್ಥಾನದಲ್ಲಿದ್ದಾರೆ.

ಭುವನೇಶ್ವರ್ ಕುಮಾರ್ (RCB): 9 ಪಂದ್ಯಗಳಲ್ಲಿ 17 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಶಾನ್ ಮಲಿಂಗ (SRH): 15 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಜೋಫ್ರಾ ಆರ್ಚರ್ (RR), ಅನ್ಶುಲ್ ಕಂಬೋಜ್ (CSK) ಮತ್ತು ಕಗಿಸೊ ರಬಾಡ (GT): ಈ ಮೂವರು ತಲಾ 14 ವಿಕೆಟ್ ಪಡೆದಿದ್ದಾರೆ. ಎಕಾನಮಿ ರೇಟ್ ಆಧಾರದ ಮೇಲೆ ಇವರು ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. (ಏಜೆನ್ಸಿಸ್‌)

RELATED ARTICLES
- Advertisment -
Google search engine

Most Popular