Thursday, May 7, 2026
Google search engine

Homeರಾಜ್ಯಬಾಲಗರ್ಭಿಣಿ ಸ್ಕ್ಯಾನಿಂಗ್‌ ಪ್ರಕರಣ : ವೈದ್ಯರ ಬಂಧನ ಸರಿಯಲ್ಲ ಎಂದ ಶಾಸಕ ಹೆಚ್‌.ಟಿ.ಮಂಜು

ಬಾಲಗರ್ಭಿಣಿ ಸ್ಕ್ಯಾನಿಂಗ್‌ ಪ್ರಕರಣ : ವೈದ್ಯರ ಬಂಧನ ಸರಿಯಲ್ಲ ಎಂದ ಶಾಸಕ ಹೆಚ್‌.ಟಿ.ಮಂಜು

ಮಂಡ್ಯ : ಬಾಲಗರ್ಭಿಣಿಯರ ಅಕ್ರಮ ಸ್ಕ್ಯಾನಿಂಗ್‌ ಪ್ರಕರಣದಲ್ಲಿ ವೈದ್ಯರನ್ನು ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಕೆ.ಆರ್‌.ಪೇಟೆ ಜೆಡಿಎಸ್ ಶಾಸಕ ಎಚ್‌.ಟಿ.ಮಂಜು ಅಭಿಪ್ರಾಯ ವ್ಯಕ್ತಪಡಿಸಿ ವಿವಾದ ಸೃಷ್ಟಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಮೂವರು ವೈದ್ಯರನ್ನು ಬಂಧಿಸಿದ್ದರು. ಈ ಘಟನೆಗೆ ಪ್ರತಿಕ್ರಿಯಿಸಿದ ಶಾಸಕ ಮಂಜು, ವೈದ್ಯರು ತುರ್ತು ಸೇವೆಯ ಭಾಗವಾಗಿ ಸ್ಕ್ಯಾನಿಂಗ್‌ ಮಾಡಿದ್ದು, ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯವಾಗಿರಬಹುದು ಹೊರತು ಉದ್ದೇಶಪೂರ್ವಕ ತಪ್ಪಿಲ್ಲ ಎಂದು ಹೇಳಿದರು.

ವೈದ್ಯರು ಯಾವುದೇ ಗಂಭೀರ ತಪ್ಪು ಮಾಡಿಲ್ಲ. ಸಣ್ಣ ನಿರ್ಲಕ್ಷ್ಯಕ್ಕಾಗಿ ಬಂಧಿಸಿ ಜೈಲಿಗೆ ಕಳುಹಿಸುವುದು ನ್ಯಾಯವಲ್ಲ. ಇದರಿಂದ ವೈದ್ಯರು ಮಾನಸಿಕವಾಗಿ ಕುಗ್ಗುತ್ತಾರೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ವೈದ್ಯರನ್ನು ಟಾರ್ಗೆಟ್‌ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಕೆ.ಆರ್‌.ಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೌಲಭ್ಯವಿಲ್ಲದ ಕಾರಣ ಖಾಸಗಿ ಸ್ಕ್ಯಾನಿಂಗ್‌ ಕೇಂದ್ರಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. “70 ಕಿಲೋಮೀಟರ್‌ ದೂರದ ಜಿಲ್ಲಾಸ್ಪತ್ರೆಗೆ ಗರ್ಭಿಣಿಯರನ್ನು ಕಳುಹಿಸುವುದು ಹೇಗೆ ಸಾಧ್ಯ? ಇಂತಹ ಘಟನೆಗಳಿಂದ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ತಾಲ್ಲೂಕಿನ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾದರೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ, ವೈದ್ಯರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲವರು ಸ್ವಯಂ ನಿವೃತ್ತಿ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಈ ಘಟನೆ ತಾಲ್ಲೂಕಿನ ಗೌರವಕ್ಕೂ ಧಕ್ಕೆಯಾಗಿದೆ ಎಂದರು.

RELATED ARTICLES
- Advertisment -
Google search engine

Most Popular