Friday, May 8, 2026
Google search engine

Homeರಾಜಕೀಯತಮಿಳುನಾಡು ಬಜೆಟ್ ಮೀರುವ ವಿಜಯ್ ಉಚಿತ ಘೋಷಣೆ : ವಿಜಯ್‌ರನ್ನು ದೇವರೇ ಕಾಪಾಡಬೇಕು : ಕುಮಾರಸ್ವಾಮಿ

ತಮಿಳುನಾಡು ಬಜೆಟ್ ಮೀರುವ ವಿಜಯ್ ಉಚಿತ ಘೋಷಣೆ : ವಿಜಯ್‌ರನ್ನು ದೇವರೇ ಕಾಪಾಡಬೇಕು : ಕುಮಾರಸ್ವಾಮಿ

ಹಾಸನ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ನಟ ವಿಜಯ್ ಅವರ ಹೊಸ ರಾಜಕೀಯ ಪಕ್ಷ ಮತ್ತು ಅದರ ಉಚಿತ ಯೋಜನೆಗಳ ಘೋಷಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ.

ತಮಿಳುನಾಡಿನ ವಾರ್ಷಿಕ ಬಜೆಟ್ ಸುಮಾರು 3.30ರಿಂದ 3.40 ಲಕ್ಷ ಕೋಟಿ ರೂ. ಇದೆ. ಆದರೆ, ವಿಜಯ್ ಅವರ ಉಚಿತ ಯೋಜನೆಗಳಿಗೆ ಒಂದು ವರ್ಷಕ್ಕೆ ಅಂದಾಜು 6 ರಿಂದ 7 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ವಿಜಯ್‌ರನ್ನು “ದೇವರೇ ಕಾಪಾಡಬೇಕು” ಎಂದು ಅವರು ವ್ಯಂಗ್ಯವಾಡಿದ್ದಾರೆ.

RELATED ARTICLES
- Advertisment -
Google search engine

Most Popular