ಬೆಂಗಳೂರು : ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಬಹುಮತ ಸಾಬೀತುಪಡಿಸುವಂತೆ ಹೇಳಿ ರಾಜ್ಯಪಾಲರು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರ ಕಚೇರಿಯನ್ನ BJP, RSS ಕಚೇರಿಯಾಗಿ ಬಳಸ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿ ಸಚಿವ ಪ್ರಿಯಾಂಕ್ ಖರ್ಗೆ, ತಮಿಳುನಾಡಿನಲ್ಲಿ ಬಹುಮತ ಸಿಕ್ಕಿಲ್ಲ. ಕೇರಳದಲ್ಲಿ ಬಹುಮತ ಸಿಕ್ಕಿದೆ ಬಹುಮತವನ್ನು ರಾಜ್ಯಪಾಲರ ಅಂಗಳದಲ್ಲಿ ಪ್ರೂವ್ ಮಾಡಬೇಕಿಲ್ಲ. ಸದನದ ಒಳಗಡೆ ಬಹುಮತ ಸಾಬೀತು ಮಾಡಬೇಕು. ಅದಕ್ಕಿಂತ ಮೊದಲು ಸಹಿ ಪಡೆದ ಪತ್ರ ತನ್ನಿ ಅಂದರೆ ಹೇಗೆ? ಎಂದು ಕುಟುಕಿದರು.
ರಾಜ್ಯಪಾಲರ ಕಚೇರಿ ಬಿಜೆಪಿ ಆರ್ ಎಸ್ ಎಸ್ ಕಚೇರಿಯಾಗಿ ಬಳಸುತ್ತಿದ್ದಾರೆ. ತಮಿಳು ಗವರ್ನರ್ ಎಷ್ಟು ಸಲ ವಾಕ್ ಔಟ್ ಮಾಡಿದ್ದಾರೆ ಸಂವಿಧಾನದ ಹುದ್ದೆ ಮೂಲಕ ರಾಜಕೀಯ ಮಾಡೋದು ಬೇಡ ರಾಜಕೀಯಕ್ಕೆ ಸೇರಿ ಯಾಕೆ ಆ ಹುದ್ದೆಗೆ ಅಗೌರವ ತೋರುತ್ತೀರಿ ಎಂದು ಕಿಡಿಕಾರಿದರು.
ಕೇರಳ ಸಿಎಂ ಆಯ್ಕೆ ಬಗ್ಗೆ ಹೈಮಾಂಡ್ ಚರ್ಚಿಸಿ ನಿರ್ಧರಿಸುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.



